ರಿಯೋ ಒಲಿಂಪಿಕ್ಸ್ ನಿಂದ ಅಶ್ವಿನಿ -ಜ್ವಾಲಾ ಹೊರಕ್ಕೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 12: ಭಾರತದ ಅಗ್ರಗಣ್ಯ ಬಾಡ್ಮಿಂಟನ್ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಅವರು ರಿಯೋ ಒಲಿಂಪಿಕ್ಸ್ 2016 ರಿಂದ ಹೊರಬಿದ್ದಿದ್ದಾರೆ. ಎ ಗುಂಪಿನ ಎರಡನೇ ಪಂದ್ಯವನ್ನು ಶುಕ್ರವಾರ ಸೋಲುವ ಮೂಲಕ ಈ ಒಲಿಂಪಿಕ್ಸ್ ಗೆ ಗುಡ್ ಬೈ ಹೇಳಿದ್ದಾರೆ.

ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ

ರಿಯೋದಲ್ಲಿ ಡಬಲ್ಸ್ ಬಾಡ್ಮಿಂಟನ್ ಪಂದ್ಯದಲ್ಲಿ ನೆದರ್ಲೆಂಡ್ಸ್ ನ ಇಫೆ ಮುಸ್ಕೆನ್ಸ್ ಹಾಗೂ ಸೆಲೆನಾ ಪೀಕ್ ಅವರ ವಿರುದ್ಧ ಭಾರತದ ಜೋಡಿ ಸೋಲು ಕಂಡಿದೆ. ಡಚ್ ಜೋಡಿ 21-16, 16-21, 21-17 ರಲ್ಲಿ ರಿಯೋಸೆಂಟ್ರೋ ಅರೀನಾದಲ್ಲಿ ಒಂದು ಗಂಟೆಗೂ ಅಧಿಕ ಕಾಲ ನಡೆದ ಪಂದ್ಯದಲ್ಲಿ ಜಯ ಗಳಿಸಿತು.[ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

Ashwini and Jwala

ಗುರುವಾರ ನಡೆದ ಮೊದಲ ಪಂದ್ಯವನ್ನು ಜಪಾನ್ ಜೋಡಿ ವಿರುದ್ಧ ಕಳೆದುಕೊಂಡಿದ್ದ ಅಶ್ವಿನಿ- ಜ್ವಾಲಾ ಅವರು ತಮ್ಮ ಲೀಗ್ ನ ಕೊನೆ ಪಂದ್ಯವನ್ನು ಥಾಯ್ಲೆಂಡಿನ ಪುಟ್ಟಿಟಾ ಸುಪಜಿರಕಲ್ ಹಾಗೂ ಸಪಸಿರಿ ತೆರತ್ತಾನಚಾಯಿ ವಿರುದ್ಧ ಆಡಲಿದ್ದಾರೆ. ನಾಲ್ವರು ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. [ಮೊದಲ ಪಂದ್ಯದಲ್ಲೇ ಜ್ವಾಲಾ- ಅಶ್ವಿನಿಗೆ ಸೋಲು]

ಎರಡು ಪಂದ್ಯ ಗೆದ್ದಿರುವ ಡಚ್ ಹಾಗೂ ಜಪಾನ್ ಜೋಡಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's women's doubles pair of Jwala Gutta and Ashwini Ponnappa bowed out of the Rio Olympics after going down to Eefje Muskens and Selena Piek of the Netherlands in their second Group A match here on Friday (Aug 12).
Please Wait while comments are loading...