ಸಿಂಧುಗೆ ಮತ್ತೊಮ್ಮೆ ಕಾರು ಕೀ ನೀಡಲಿರುವ ಸಚಿನ್

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 23: ರಿಯೋ ಒಲಿಂಪಿಕ್ಸ್‌ ಬಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು, ಭಾರತಕ್ಕೆ ಮರಳಿರುವ ಪಿವಿ ಸಿಂಧುಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಈ ನಡುವೆ ಉದ್ಯಮಿ ಚಾಮುಂಡೇಶ್ವರನಾಥ್ ಅವರು ಸಿಂಧುಗೆ ಐಷಾರಾಮಿ ಕಾರಿನ ಉಡುಗೊರೆ ಘೋಷಿಸಿದ್ದು ತಿಳಿದಿರಬಹುದು. ಈ ವಿಶೇಷ ಉಡುಗೊರೆಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ಅವರು ನೀಡಲಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಈ ಹಿಂದೆ ಅಂಡರ್-19 ಚಾಂಪಿಯನ್‌ಶಿಪ್‌ನಲ್ಲಿ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದ ಸಿಂಧು ಅವರಿಗೆ ಮಾರುತಿ ಸ್ವಿಫ್ಟ್ ಕಾರನ್ನು ತೆಂಡೂಲ್ಕರ್ ಉಡುಗೊರೆಯಾಗಿ ನೀಡಿದ್ದರು. ಈಗ ಬಿಎಂಡಬ್ಲ್ಯೂ ಕಾರಿನ ಕೀ ನೀಡಲಿದ್ದಾರೆ ಎಂದು ಸಚಿನ್ ಅವರ ಗೆಳೆಯ ಚಾಮುಂಡೇಶ್ವರನಾಥ್ ಹೇಳಿದ್ದಾರೆ.[ಬಾಡ್ಮಿಂಟನ್ ತಾರೆ ಸಿಂಧು ಬಗ್ಗೆ ತಿಳಿದುಕೊಳ್ಳಿ]

Rio Olympics 2016: Sachin Tendulkar to present BMW car to silver medallist PV Sindhu

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ಆಗಸ್ಟ್ 28 ರಂದು ಕ್ರಿಕೆಟ್ ದಿಗ್ಗಜ, ಸಂಸದ ಸಚಿನ್ ತೆಂಡೂಲ್ಕರ್ ಅವರು ಹೊಚ್ಚ ಹೊಸ ಮಾದರಿಯ ಬಿಎಂಡಬ್ಲ್ಯೂ ಕಾರಿನ ಕೀಯನ್ನು ಹಸ್ತಾಂತರಿಸಲಿದ್ದಾರೆ. [ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್]

ನಾಲ್ಕು ವರ್ಷಗಳ ಹಿಂದೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ ಅವರಿಗೆ ತೆಂಡೂಲ್ಕರ್ ಬಿಎಂಡಬ್ಲು ಕಾರನ್ನು ಉಡುಗೊರೆಯಾಗಿ ನೀಡಿದ್ದರು. [ಸಿಂಧುಗೆ ಕಡೆಗೆ ಹರಿದು ಬಂದ ಗಿಫ್ಟ್ ಗಳ ರಾಶಿ]


ಅದೇ ವರ್ಷ(2012ರಲ್ಲಿ) ಏಷ್ಯನ್ ಯೂತ್ ಅಂಡರ್-19 ಚಾಂಪಿಯನ್‌ಶಿಪ್‌ನಲ್ಲಿ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದ ಸಿಂಧುಗೆ ಮಾರುತಿ ಸ್ವಿಫ್ಟ್ ಕಾರು ಗಿಫ್ಟ್ ಆಗಿ ಸಿಕ್ಕಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketing legend Sachin Tendulkar will present a BMW car to star shuttler PV Sindhu, for bringing laurels to the country by winning a silver medal at the Rio Olympics.
Please Wait while comments are loading...