ರಿಯೋ 2016: ರೋಯಿಂಗ್ ನಲ್ಲಿ ಭಾರತದ ದತ್ತು ಉತ್ತಮ ಸಾಧನೆ

Posted By:
Subscribe to Oneindia Kannada

ರಿಯೋ ಡಿ ಜನೈರೊ, ಅಗಸ್ಟ್ 09: ಪುರುಷರ ರೋಯಿಂಗ್ ಸಿಂಗಲ್ಸ್ ನಲ್ಲಿ ಮೊದಲ ಸ್ಪರ್ಧೆಯಲ್ಲಿ ಗೆದ್ದು ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆದಿದ್ದ ಭಾರತದ ರೋಯಿಂಗ್ ಪಟು ದತ್ತು ಬಾಬನ್ ಭೋಕನಾಲ್ ಅವರು ಸ್ಕಲ್ಸ್ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಆದರೆ, ನಾಳೆ ಮತ್ತೊಂದು ವಿಭಾಗದಲ್ಲಿ ಸೆಮಿ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಂಗಳವಾರ (ಅ.09) ರಂದು ನಡೆದ ಪುರುಷರ ಸಿಂಗಲ್ಸ್ ರೋಯಿಂಗ್ Sculls ವಿಭಾಗದ ಕ್ವಾಟರ್ ಫೈನಲ್ ನಲ್ಲಿ ಮೊದಲ 6 ಸ್ಥಾನಗಳಲ್ಲಿ ಭಾರತದ ಯುವ ರೋಯಿಂಗ್ ಪಟು ದತ್ತು ಬಾಬನ್ ಬೋಕನಲ್ ನಾಲ್ಕನೇ ಸ್ಥಾನ (6:59.89) ಪಡೆದುಕೊಂಡರು. ಮೊದಲ ಮೂರು ಸ್ಥಾನ ಪಡೆದ ರೋಯಿಂಗ್ ಪಟುಗಳು ಸೆಮಿಸ್ ತಲುಪಬಹುದಾಗಿದೆ. ಹೀಗಾಗಿ ಸ್ವಲ್ಪದರಲ್ಲಿ ಬಾಬನ್ ಅವರಿಗೆ ಸೆಮಿಸ್ ಅವಕಾಶ ತಪ್ಪಿದೆ.[ಬಿಂದ್ರಾಗೆ ಕಂಚು ಕೂಡಾ ದಕ್ಕಲಿಲ್ಲ, ಸಕತ್ ನಿರಾಶೆ]

Rio 2016: Rower Dattu Bhokanal finishes fourth in men's sculls quarter-finals

ನಾಲ್ಕು ಕ್ವಾರ್ಟರ್ ಫೈನಲ್ ನಡೆಸಲಾಗುತ್ತದೆ. ಎಲ್ಲಾ ಕ್ವಾರ್ಟರ್ ಫೈನಲ್ ಸೇರಿಸಿ ಮೊದಲ 12 ಸ್ಥಾನ ಬಂದವರು ಮುಂದಿನ ಹಂತ ತಲುಪುತ್ತಾರೆ. ಆದರೆ, ಬೋಕನಲ್ ಅವರು 15ನೇ ಸ್ಥಾನ ಗಳಿಸಿದ್ದರಿಂದ ಸೆಮಿಸ್ ಅವಕಾಶ ಕೈ ತಪ್ಪಿದೆ. ಆದರೆ, ಮೊದಲ ಒಲಿಂಪಿಕ್ಸ್ ನಲ್ಲೇ ಇವರ ಸಾಧನೆ ಅಪೂರ್ವವಾಗಿದೆ. [ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ಮತ್ತೆ ಅವಕಾಶ: ಆಗಸ್ಟ್ 10 ರಂದು ಸಂಜೆ 7.40 PMಗೆ ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲ ಮೂರು ಸ್ಥಾನದಲ್ಲಿ ಬಂದರೆ 'ಸಿ' ವಿಭಾಗದಲ್ಲಿ ಫೈನಲ್ ತಲುಪಬಹುದು ಹಾಗೂ ಪದಕ ನಿರೀಕ್ಷಿಸಬಹುದು. ಇಲ್ಲದಿದ್ದರೆ ಶ್ರೇಯಾಂಕ ಉತ್ತಮ ಪಡಿಸಿಕೊಳ್ಳಬಹುದು.[ಪದಕ ಬೇಟೆಗೆ ಸಜ್ಜಾದ ಕನ್ನಡಿಗರು]

ಭಾರತದ ಯುವ ರೋಯಿಂಗ್ ಪಟು ದತ್ತು ಬಾಬನ್ ಬೋಕನಲ್ ಅವರು ದಕ್ಷಿಣ ಕೊರಿಯಾದ ಚುಂಗ್ ಜು ಇನ್‌ ನಲ್ಲಿ ನಡೆದ ಫಿಸಾ ಏಷ್ಯನ್ ಓಷಾನೀಯಾ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಅವರು ರಿಯೊ ಡಿ ಜನೈರೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದರು. ಈಗ ಇಲ್ಲಿ ಪದಕ ಗಿಟ್ಟದಿದ್ದರೂ ಉತ್ತಮ ಶ್ರೇಯಾಂಕ ಪಡೆದುಕೊಂಡರೆ, ತಿಂಗಳ ಅಂತ್ಯಕ್ಕೆ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian rower Dattu Baban Bhokanal finished fourth in the men's singles sculls quarter-finals at the Rio Olympics here on Tuesday.
Please Wait while comments are loading...