ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಮೂಡಿಸಿದ ಶ್ರೀಕಾಂತ್

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 17: ಭಾರತದ ಶಟ್ಲರ್ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲು ಕಂಡಿದ್ದಾರೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಚೀನಾದ ಲಿನ್ ಡನ್​ ವಿರುದ್ಧ ಪರಾಭವಗೊಂಡು ಪದಕದ ಆಸೆ ಹುಸಿಗೊಳಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬುಧವಾರ(ಆ.17) ರಂದು ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಲಂಡನ್ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲಿನ್ ಡನ್​ ವಿರುದ್ಧ 6-21, 21-11, 18-21 ಅಂತರದಲ್ಲಿ ಪರಾಭವಗೊಂಡರು.

Kidambi Srikanth loses quarterfinals to China's Lin Dan in close 3-set contest

ಆರಂಭದ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ಎರಡನೇ ಸೆಟ್ ನಲ್ಲಿ 21-11 ಅಂತರದಲ್ಲಿ ಗೆದ್ದು ಎದುರಾಳಿಗೆ ತಿರುಗೇಟು ನೀಡಿದರು. ಇದರಿಂದ ತಲಾ ಒಂದೊಂದು ಸೆಟ್ ಜಯಗಳಿಸಿ ಸಮಬಲ ಸಾಧಿಸಿದರು.

ಆದರೆ, ಅಂತಿಮ ಸೆಟ್ ನಲ್ಲಿ ಶ್ರೀಕಾಂತ್ ತೀವ್ರ ಪೈಪೋಟಿ ನಡೆಸಿದರಾದರೂ ಕೊನೆಯಲ್ಲಿ 18-21 ಅಂತರದಲ್ಲಿ ಸೋಲು ಅನುಭವಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a close fight game, India's shuttler Kidambi Srikanth lost to Lin Dan of China 2-1 in the quarter-finals of the men's singles event at the Rio Olympics here on Wednesday (Aug 17)
Please Wait while comments are loading...