ರಿಯೋ ಶೂಟಿಂಗ್: ತಪ್ಪಿದ ಗುರಿ- ಜೀತು ರೈ, ಪ್ರಕಾಶ್ ನಂಜಪ್ಪ ಔಟ್

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ ಆಗಸ್ಟ್, 10: ರಿಯೋ ಒಲಿಂಪಿಕ್ ನಲ್ಲಿ ಭಾರತದ ಶೂಟರ್ ಗಳ ಕಳಪೆ ಪ್ರದರ್ಶನ ಮುಂದುವರೆದಿದೆ. ಭಾರತದ ಶೂಟರ್ ಜೀತು ರೈ ಹಾಗು ಪ್ರಕಾಶ್ ನಂಜಪ್ಪ ಅವರ ಗುರಿ ತಪ್ಪಿದ್ದು, ರಿಯೋ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬುಧವಾರ (ಆ.10) ರಂದು ನಡೆದ 50 ಮೀಟರ್ ಪುರುಷರ ವಿಭಾಗದ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಜೀತು ರೈ ಮತ್ತು ಪ್ರಕಾಶ್ ನಂಜಪ್ಪ ಈ ಇಬ್ಬರು ಶೂಟರ್ ಗಳು 12 ಮತ್ತು 25 ಕ್ಕೆ ತೃಪ್ತಿ ಪಟ್ಟು ಫೈನಲ್ ಹಂತಕ್ಕೆ ವಿಫಲವಾಗಿದ್ದಾರೆ. [ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಕ್ವಾರ್ಟರ್ ಫೈನಲಿಗೆ]

Rio 2016: Jitu Rai, Prakash Nanjappa fail to qualify for final in 50m Men's Pistol event

ಶಾರ್ಪ್ ಶೂಟರ್ ಅಭಿನವ್ ಬಿಂದ್ರಾ ರಿಯೋನಿಂದ ಹೊರ ಹೋಗಿದ್ದಾರೆ. ಇದರಿಂದ ಭಾರತದ ಶೂಟರ್ ಗಳು ರಿಯೋನಲ್ಲಿ ಪದಕ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಫೈನಲ್ ಪಂದ್ಯ ರಾತ್ರಿ 8.30 ನಡೆದು, ದಕ್ಷಿಣ ಕೊರಿಯಾದ ಜಿನ್ ಜೊಂಗ್ ಚಿನ್ನದ ಪದಕ, ವಿಯೆಟ್ನಂನ ಹಾಂಗ್ ಕ್ಸುವಾನ್ ವಿನ್ ಬೆಳ್ಳಿ ಹಾಗೂ ಉತ್ತರ ಕೊರಿಯಾದ ಕಿಮ್ ಸಾಂಗ್ ಗುಕ್ ಕಂಚಿನ ಪದಕ ಪಡೆದುಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In yet another heartbreak from the Indian shooting contingent at Rio Olympics 2016, shooters Jitu Rai and Prakash Nanjappa failed to qualify for final in 50m Men's Pistol event here on Wednesday (Aug 10).
Please Wait while comments are loading...