ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಜಯ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 09: ಬಲಿಷ್ಠ ಆರ್ಜೆಂಟೀನಾ ತಂಡದ ವಿರುದ್ಧ ನಡೆದ ಬಿ ಗುಂಪಿನ ಹಾಕಿ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ 2-1 ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ 6 ಅಂಕ ಪಡೆದು ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ ಆಫ್ ಆಸೆ ಚಿಗುರಿದೆ.

ಪಂದ್ಯದ 8ನೇ ನಿಮಿಷದಲ್ಲಿ ಚಿಂಗ್ಲೆನ್​ಸನಾ ಕಂಗುಜಮ್ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ನಂತರ ದ್ವಿತೀಯಾರ್ಧದಲ್ಲಿ 35ನೇ ನಿಮಿಷದಲ್ಲಿ ಭಾರತದ ಕೋಥಜಿತ್ ಖಡಂಗ್​ಬಮ್ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಪಂದ್ಯದ ನಾಲ್ಕನೇ ಹಂತದಲ್ಲಿ ಅರ್ಜೆಂಟೀನಾ ದಿಟ್ಟ ಹೋರಾಟ ಪ್ರದರ್ಶಿಸಿ 48ನೇ ನಿಮಿಷದಲ್ಲಿ ಗೋಲು ಗಳಿಸುವಲ್ಲಿ ಸಫಲವಾಯಿತು.

Rio 2016 news, India win 2-1 against Argentina in men's hockey

ಅರ್ಜೆಂಟೀನಾದ ಗೋಂಜಲೋ ಪಿಲ್ಲಟ್ ಗೋಲು ಗಳಿಸಿ ಹಿನ್ನಡೆಯನ್ನು ತಗ್ಗಿಸಿದರು. ಭಾರತ ಪಂದ್ಯದ ಕೊನೆಯಲ್ಲಿ ಅರ್ಜೆಂಟೀನಾಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.

ಭಾರತ ಗುರುವಾರದಂದು ಬಲಿಷ್ಠ ನೆದರ್ಲೆಂಡ್ ತಂಡವನ್ನು ಎದುರಿಸಲಿದೆ. ಬಿ ಗುಂಪಿನಲ್ಲಿ ಐರ್ಲೆಂಡ್ ತಂಡವನ್ನು 3-2 ಅಂತರದಲ್ಲಿ ಸೋಲಿಸಿದ್ದ ಭಾರತ, ಜರ್ಮನಿ ವಿರುದ್ಧ 1-2 ಅಂತರದ ಸೋಲು ಕಂಡಿತ್ತು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio 2016: India win 2-1 against Argentina in men's hockey, enter play-offs
Please Wait while comments are loading...