ಅಥ್ಲೆಟಿಕ್ಸ್ : ಭಾರತದ ಲಲಿತಾ ಬಾಬರ್ ಫೈನಲಿಗೆ ಅರ್ಹತೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 13: ಭಾರತದ ಮಹಿಳಾ ಅಥ್ಲೀಟ್ ಲಲಿತಾ ಬಾಬರ್ ಅವರು ಶನಿವಾರ ಹೊಸ ಇತಿಹಾಸ ರಚಿಸಿದ್ದಾರೆ. ಸುಮಾರು 32 ವರ್ಷಗಳ ನಂತರ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಯ ಫೈನಲ್ ಹಂತ ತಲುಪಿದ್ದಾರೆ.

1984ರಲ್ಲಿ ಲಾಸ್ ಏಜೆಂಲೀಸ್ ನಲ್ಲಿ ಭಾರತದ 'ಪಯ್ಯೋಲಿ ಎಕ್ಸ್ ಪ್ರೆಸ್' ಪಿಟಿ ಉಷಾ ಅವರು ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ 400 ಮೀಟರ್ಸ್ ಸ್ಪರ್ಧೆಯ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಆಗಿದ್ದಾರೆ. ಈಗ ಮತ್ತೊಮ್ಮೆ ಇಂಥ ಸಾಧನೆ ಲಲಿತಾರಿಂದ ಬಂದಿದೆ.

ಶನಿವಾರ ನಡೆದ 3,000 ಮೀಟರ್ ಸ್ಟೀಪ್ಲ್ ಚೇಸ್ ಹೀಟ್ಸ್ ನಲ್ಲಿ ಲಲಿತಾ ಅವರು ನಾಲ್ಕನೇ ಸ್ಥಾನ ಗಳಿಸಿ ಫೈನಲ್ ಹಂತಕ್ಕೇರಿದ್ದಾರೆ. ಈ ಮೂಲಕ ತಮ್ಮ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಈ ನಡುವೆ ಭಾರತದ ಮತ್ತೊಬ್ಬ ಅಥ್ಲೀಟ್ ಸುಧಾ ಸಿಂಗ್ ಅವರು ಹಿಟ್ಸ್ ನಲ್ಲಿ ಅರ್ಹತೆ ಪಡೆಯಲು ಸಾಧ್ಯವಾಗದೆ ರಿಯೋ ಒಲಿಂಪಿಕ್ಸ್ ನಿಂದ ಹೊರ ನಡೆದಿದ್ದಾರೆ.

Lalita Babar

ಮಹಾರಾಷ್ಟ್ರದ ಲಲಿತಾ ಶಿವಾಜಿ ಬಾಬರ್ ಅವರು 9.19.76 ಸಮಯದೊಂದಿಗೆ ನಾಲ್ಕನೇ ಸ್ಥಾನ ಪಡೆದರೂ ಉಳಿದ ಆರು ಮಂದಿಗಿಂತ ಉತ್ತಮ ಅಂತರದಲ್ಲಿ ಓಡಿದ್ದರಿಂದ ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಕೀನ್ಯಾ, ಯುಎಸ್ಎ ಹಾಗೂ ಟ್ಯುನೇಶಿಯಾದ ಅಥ್ಲೀಟ್ ಗಳು ಹಿಟ್ಸ್ ನಲ್ಲಿ ಮೊದಲ ಮೂರು ಸ್ಥಾನ ಪಡೆದುಕೊಂಡರು.

ದಕ್ಷಿಣ ಕೊರಿಯಾದ ಇಂಚಿಯಾನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಲಲಿತಾ ಅವರು ಕಂಚಿನ ಪದಕ ಗೆದ್ದಿದ್ದರು. ಸುಧಾ ಸಿಂಗ್ (9.26.56) ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಕೂಡಾ ಲಲಿತಾ ಮುರಿದಿದ್ದಾರೆ. ಸುಧಾ ಅವರು ಈ ಸ್ಪರ್ಧೆಯಲ್ಲಿ 9.43.29 ಸಮಯ ತೆಗೆದುಕೊಂಡು 9 ನೇ ಸ್ಥಾನದಲ್ಲಿ ಓಟ ಮುಗಿಸಿದ್ದು ಅಚ್ಚರಿ ಮೂಡಿಸಿತು.

ಲಲಿತಾ ಅವರ ಫೈನಲ್ ಸ್ಪರ್ಧೆ ಆಗಸ್ಟ್ 15 ರಂದು ರಾತ್ರಿ 7.45 ಕ್ಕೆ ಇದೆ. ಸ್ಟಾರ್ ಸ್ಫೋರ್ಟ್ಸ್, ಹಾಟ್ ಸ್ಟಾರ್ ಆಪ್ ನಲ್ಲಿ ತಪ್ಪದೇ ನೇರ ಪ್ರಸಾರ ವೀಕ್ಷಿಸಿ (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lalita Babar qualified for the women's 3000m steeplechase final after finishing fourth in the qualifying heat 2 with a national record time while compatriot Sudha Singh was eliminated in the Olympic Games in Rio on Saturday.
Please Wait while comments are loading...