ರಿಯೋದಲ್ಲಿ ಬೆಂಗಳೂರು ಹುಡ್ಗಿ ಅದಿತಿ ಪದಕ ಬೇಟೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 19: ಬೆಂಗಳೂರು ಮೂಲದ ಅದಿತಿ ಅಶೋಕ್ ಅವರು ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತಕ್ಕೆ ಪದಕ ಗೆದ್ದು ತರುವ ಉತ್ಸಾಹದಲ್ಲಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಹಿಳೆಯರ ವೈಯಕ್ತಿಕ ಗಾಲ್ಫ್ ಕ್ರೀಡೆಯಲ್ಲಿ ಸದ್ಯಕ್ಕೆ 7ನೇ ಸ್ಥಾನದಲ್ಲಿರುವ ಅದಿತಿ ಅವರು ಶುಕ್ರವಾರ ಅಂತಿಮ ಸುತ್ತಿನಲ್ಲಿ ಪದಕ ಪಡೆಯುವ ಅರ್ಹತೆ ಪಡೆಯಲು ಮೂರು ಅವಕಾಶ ಪಡೆದುಕೊಂಡಿದ್ದಾರೆ.[ಕವಾಡಿಗನ ಮಗನಿಗೆ ಮತ್ತೆ ವಿಶ್ವ ಚಾಂಪಿಯನ್ ಕಿರೀಟ]

Rio 2016: Golfer Aditi Ashok raises visions of medal, three shots off lead

18 ವರ್ಷ ವಯಸ್ಸಿನ ಅದಿತಿ ಅವರು ಸ್ಪರ್ಧೆಯ ಮುನ್ನಡೆ ಪಡೆದಿರುವ ಯುಎಸ್ ನ ಸ್ಟಾಸಿ ಲೆವೀಸ್ ಗಿಂತ ಮೂರು ಶಾಟ್ಸ್ ಹಿಂದಿದ್ದಾರೆ. ಬ್ರಿಟನ್ನಿನ ಚಾರ್ಲೆ ಹಲ್ ಅವರು (68-66) ಎರಡನೇ ಸ್ಥಾನದಲ್ಲಿದ್ದರೆ, ಮಾರಿಯ್ನ್ ಸ್ಕಾರ್ಪ್ನೊರ್ಡ್, ಲಾರ್ಸೆನ್ ನಿಕೊಲ್, ಇನ್ಬಿ ಪಾರ್ಕ್ ಮೂರನೇ ಸ್ಥಾನದಲ್ಲಿದ್ದಾರೆ. ಅದಿತಿ (68-68) 7ನೇ ಸ್ಥಾನದಲ್ಲಿದ್ದು, ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.[ಕಾಮಪಿಪಾಸು ಟೈಗರ್ ವುಡ್ಸ್ ಮತ್ತೊಬ್ಬಳು ಸಿಕ್ಕಳು]

ಆರು ತಿಂಗಳ ಹಿಂದೆಯಷ್ಟೆ ವೃತ್ತಿಪರ ಗಾಲ್ಫರ್ ಆಗಿ ಬಡ್ತಿ ಪಡೆದುಕೊಂಡಿರುವ ಅದಿತಿ ಅವರು ಮೊಟ್ಟ ಮೊದಲ ಬಾರಿಗೆ ಗಾಲ್ಫ್ ಸ್ಪರ್ಧಿಯಾಗಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್ ನಲ್ಲೂ ಮೊದಲ ಬಾರಿಗೆ ಗಾಲ್ಫ್ ಪರಿಚಯಿಸಲಾಗಿದೆ. ಒಂದು ವೇಳೆ ಅದಿತಿ ಪದಕ ಗೆದ್ದರೆ ಭಾರತದ ಅತ್ಯಂತ ಕಿರಿಯ ಪದಕ ವಿಜೇತೆ ಎನಿಸಿಕೊಳ್ಳಲಿದ್ದಾರೆ. [ಪದಕ ಬೇಟೆಗೆ ಸಜ್ಜಾದ ಕನ್ನಡಿಗರು](ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Teen Indian golf sensation Aditi Ashok raised hopes of an Olympic medal as she stood just three strokes off the pace at tied 7th after the second round of the Women's Individual event here on Thursday (Aug 18).
Please Wait while comments are loading...