ರಿಯೋ 2016: ಸಿಂಧು- ಶ್ರೀಕಾಂತ್ ಪ್ರೀ ಕ್ವಾರ್ಟರ್ ಫೈನಲಿಗೆ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 15:ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾಗು ಪುರುಷರ ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್‌ ಗೆಲುವಿನ ಶುಭಾರಂಭ ಕಂಡಿದ್ದಾರೆ. ಈ ಮೂಲಕ ಪ್ರೀ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಭಾನುವಾರ ನಡೆದ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶ್ರೀಕಾಂತ್‌ 21-6, 21-18ರ ನೇರ ಸೆಟ್‌ಗಳ ಅಂತರದಿಂದ 3ನೇ ವಿಶ್ವ ಶ್ರೇಯಾಂಕದ ಸ್ವೀಡನ್‌ನ ಹೆನ್ರಿ ಹರ್ಸ್ ಕೈನೆನ್ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಶ್ರೀಕಾಂತ್ ಅವರು ಆ. 16 ರಂದು ಬೆಳಗ್ಗೆ 5.30AMಕ್ಕೆ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದ್ದಾರೆ. [ಸೈನಾಗೆ ಅಚ್ಚರಿಯ ಸೋಲು, ಪದಕದ ಆಸೆ ಮತ್ತೆ ಟುಸ್]

Rio Olympics 2016: PV Sindhu, Kidambi Srikanth in per-quarters

ಇನ್ನು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭರವಸೆಯ ಆಟಗಾರ್ತಿ ಪಿವಿ ಸಿಂಧು ಕೆನಡಾದ ಮಿಂಚೆಲ್ ವಿರುದ್ಧ ಮೊದಲ ಸೆಟ್ ನಲ್ಲಿ 19-21 ಅಂತರದಲ್ಲಿ ಪರಾಭವಗೊಂಡು ಸಂಕಸ್ಟಕ್ಕೆ ಸಿಲುಕಿದ್ದರು.

ನಂತರದ ಸುತ್ತಿನಲ್ಲಿ ಗೆಲುವಿನ ಟ್ರ್ಯಾಕ್ ಗೆ ಮರಳಿ 19-21, 21-15, 21-17 ನೇರ ಸೆಟ್ ಗಳಿಂದ ಗೆಲುವು ದಾಖಲಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆ 16 ರಂದು ಮಧ್ಯರಾತ್ರಿ 2AM ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದ್ದಾರೆ.

ರಿಯೋದಲ್ಲಿ ಪದಕ ಗೆಲ್ಲುವ ಕುದುರೆ ಎನಿಸಿದ್ದ ಅಗ್ರ ಶ್ರೇಯಾಂಕಿತ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಲೀಗ್ ಹಂತದ ಪಂದ್ಯದಲ್ಲಿ ಕಡಿಮೆ ಶ್ರೇಯಾಂಕಿತ ಆಟಗಾರ್ತಿ ಎದುರು ಅಚ್ಚರಿಯ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rio 2016: Badminton Singles Update: Kidambi Srikanth and P V Sindhu kept India afloat by advancing to the pre-quarterfinals of the badminton event in Rio de Janeiro on Sunday.
Please Wait while comments are loading...