ವಿಡಿಯೋ ನೋಡಿ ಬೆಚ್ಚಬೇಡಿ, ಭಾರ ಎತ್ತುವ ಸ್ಪರ್ಧಿ ಕೈ ಮುರಿತ!

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 11: ರಿಯೋ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಅರ್ಮೆನಿಯಾ ವೇಟ್ ಲಿಫ್ಟರ್ ಆಂಡ್ರಾನಿಕ್ ಕರಪೆಟ್ಯಾನ್ ಅವರು ಭಾರ ಎತ್ತುವಾಗ ಎಡ ಮೊಣಕೈ ಮುರಿದುಕೊಂಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಪುರುಷರ 77 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 20 ವರ್ಷ ವಯಸ್ಸಿನ ಆಂಡ್ರಾನಿಕ್ ಅವರು ಭಯಂಕರ ನೋವು ತಿನ್ನುತ್ತಾ ವೇದಿಕೆಯಿಂದ ಕೆಳಗಿಳಿದಿದ್ದಾರೆ. [ರಗ್ಬಿ ಆಟಗಾರ್ತಿ ಮದ್ವೆಗೆ ಗೆಳತಿಯ ಚುಂಬನ ಮುದ್ರೆ]

Rio Olympics 2016: Video - Andranik Karapetyan twists his elbow in a horrific manner

ಆಗಸ್ಟ್‌ 10ರಂದು ನಡೆದ ಸ್ಪರ್ಧೆಯಲ್ಲಿ 195 ಕೆಜಿ ತೂಕ ಎತ್ತುವ ಎರಡನೇ ಯತ್ನದಲ್ಲಿ ವಿಫಲರಾದಾಗ ಈ ದುರಂತ ಸಂಭವಿಸಿದೆ.

ಹಾಲಿ ಯುರೋಪಿಯನ್ ಚಾಂಪಿಯನ್ ಆಂಡ್ರಾನಿಕ್ ಅವರು ಬುಧವಾರ ನಡೆದ ಅಪಘಾತದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. [ಕ್ರೀಡಾಪಟುಗಳನ್ನು ಕೆಣಕಿದ ಶೋಭಾ ಡೇಗೆ ಟ್ವಿಟ್ಟರ್ ನಲ್ಲಿ ಗುದ್ದು]

ಮೊಣಕೈ ಮೂಳೆ ಹೊರಕ್ಕೆ ಬಂದಿದ್ದು, ಸರ್ಜರಿ ಮೂಲಕ ಸರಿಪಡಿಸಬೇಕಾಗಿದೆ ಎಂದು ಅರ್ಮೆನಿಯಾ ತಂಡದ ಮ್ಯಾನೇಜರ್ ಹೇಳಿದರು.

ಈ ದುರಂತದ ವಿಡಿಯೋ ಕ್ಲಿಪ್ಪಿಂ ಗ್ ಇಲ್ಲಿದೆ ನೋಡಿ:


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Armenian weightlifter Andranik Karapetyan twisted his left elbow in a horrific manner while contesting in the Men's 77 Kg weightlifting event.
Please Wait while comments are loading...