ಅಭಿನವ್ ಬಿಂದ್ರಾಗೆ ಕಂಚು ಕೂಡಾ ದಕ್ಕಲಿಲ್ಲ, ಸಕತ್ ನಿರಾಶೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 08: ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದಿರುವ ಗತ ವೈಭವ ಹೊಂದಿರುವ ಶೂಟರ್ ಅಭಿನವ್ ಬಿಂದ್ರಾ ಅವರು ರಿಯೋ ಒಲಿಂಪಿಕ್ಸ್ 2016 ರಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಸೋಮವಾರ ರಾತ್ರಿ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ್ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಸೋಮವಾರ (ಆಗಸ್ಟ್ 08) ನಡೆದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಗಳಿಸಿ ಫೈನಲ್ ಗೆ ಅರ್ಹತೆ ಪಡೆದಿದ್ದ ಬಿಂದ್ರಾ ಮೇಲೆ ಅಪಾರ ನಿರೀಕ್ಷೆಯಿತ್ತು. [ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

Rio 2016: Abhinav Bindra finishes 4th in 10m Air Rifle Final, misses out on Bronze

ಆದರೆ, ಟಾಪ್ 3 ಸ್ಥಾನಕ್ಕೇರಲು ವಿಫಲರಾದ ಬಿಂದ್ರಾ ಅವರು 163.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡರು. ಬಿಂದ್ರಾಗೆ ಪೈಪೋಟಿ ನೀಡಿದ ರಷ್ಯಾದ ವ್ಲಾದಿಮಿರ್ ಮಸ್ಲೆನಿಕೊವ್ ಅವರು ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಒಲಿಂಪಿಕ್ ಜರ್ನಿ ಅಂತ್ಯ: ಈ ಸೋಲಿನೊಂದಿಗೆ ಅಭಿನವ್ ಬಿಂದ್ರಾ ಅವರ ಒಲಿಂಪಿಕ್ ಜರ್ನಿ ಕೂಡಾ ಅಂತ್ಯಗೊಳ್ಳಲಿದೆ. ಜಪಾನ್ 2020 ರಲ್ಲಿ ಬಿಂದ್ರಾ ಆಡುವುದು ಅನುಮಾನ ರಿಯೋಗೆ ಬರುವ ಮುನ್ನವೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಬಿಂದ್ರಾ, ಇದು ನನ್ನ ಕೊನೆ ಒಲಿಂಪಿಕ್ಸ್ ಎಂದಿದ್ದರು. ಉದ್ಘಾಟನಾ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತದ ಕ್ರೀಡಾಪಟುಗಳನ್ನು ಮರಕಾನ ಸ್ಟೇಡಿಯಂನಲ್ಲಿ ಮುನ್ನಡೆಸುವ ಗೌರವ ಬಿಂದ್ರಾಗೆ ಸಿಕ್ಕಿದ್ದನ್ನು ಮರೆಯುವಂತಿಲ್ಲ.

ಅಭಿನವ್ ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ರಿಯೋ 2016 ರ ಫೈನಲ್ ನಲ್ಲಿಇಟಲಿಯ ನಿಕೋಲೋ ಕಾಂಪ್ರಿಯಾನಿ ಚಿನ್ನ ಗೆದ್ದರೆ, ಉಕ್ರೇನ್ನಿನ ಶೇರ್ಹೀಯ್ ಕುಲೀಶ್ ಬೆಳ್ಳಿ ಮತ್ತು ರಷ್ಯಾದ ವ್ಲಾದಿಮಿರ್ ಮಸ್ಲೇನಿಕೇವ್ ಕಂಚಿನ ಪದಕ ಗೆದ್ದರು.

ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಬಿಂದ್ರಾ 625.7 ಅಂಕ ಕಲೆ ಹಾಕಿ 7ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಗಗನ್ ನಾರಂಗ್ ಅರ್ಹತಾ ಸುತ್ತಿನಲ್ಲಿ 621.7 ಅಂಕ ಕಲೆ ಹಾಕಿ 23 ನೇ ಸ್ಥಾನಕ್ಕೆ ಕುಸಿದು ಭಾರಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's only shooter to win an Olympics gold medal in an individual category, Abhinav Binda, finished fourth in the 10m Air Rifle Final as he missed out on a bronze medal here on Monday (Aug 8)
Please Wait while comments are loading...