ಟಿಸಿಎಸ್ 10ಕೆ 9ನೇ ಆವೃತ್ತಿಗೆ ನೋಂದಾಯಿಸಿ: ಪುನೀತ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 17: ಸೂರ್ತಿದಾಯಕ ಉದ್ಯಾನಗರಿ ಮತ್ತೊಂದು ಮೈಲುಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ 10ಕೆ 9ನೇ ಆವೃತ್ತಿಗೆ ಹೆಸರು ನೋಂದಾವಣೆ ಆರಂಭವಾಗಿದೆ. 10ಕೆ ರಾಯಭಾರಿ ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ತಮ್ಮ ಅಭಿಮಾನಿಗಳಿಗೆ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.

2016ರ ಮೇ 15ರಂದು ಬೆಂಗಳೂರಿನ ಶ್ರೀಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಹೊಚ್ಚ ಹೊಸ ಲಾಂಛನದೊಂದಿಗೆ ಆರನೇ ಟಿಸಿಎಸ್ ಬ್ಯಾನರ್ ಅಡಿ ರಿಫ್ರೆಶ್, ರಿಲೋಡ್ ಮತ್ತು ರನ್ ಎಂಬ ಹೊಸ ಧ್ಯೇಯದೊಂದಿಗೆ ಟಿಸಿಎಸ್ ವಿಶ್ವ 10ಕೆಗೆ ವಾಡಿಕೆಯಂತೆ ಚಾಲನೆ ದೊರೆಯಲಿದೆ.

ಕೂಟದ ಐದು ವಿಭಾಗಗಳಲ್ಲೂ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪುರುಷರ ಮತ್ತು ಮಹಿಳೆಯರ ಅತ್ಯುತ್ತಮ ಟ್ರ್ಯಾಕ್ ಮತ್ತು ಫೀಲ್ಡ್ ಮತ್ತು ರಸ್ತೆ ಓಟಗಾರರು ಎಲೈಟ್ ವಿಶ್ವ 10ಕೆ ವಿಭಾಗದಲ್ಲಿ, ಹವ್ಯಾಸಿ ಓಟಗಾರರು ಓಪನ್ 10ಕೆ ವಿಭಾಗದಲ್ಲಿ, ಉತ್ಸಾಹಿ ಓಟಗಾರರು 5.7ಕಿಲೋ ಮೀಟರ್ ಮಜ್ಜ ರನ್ ವಿಭಾಗದಲ್ಲಿ, 65 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರು 4ಕಿಲೋ ಮೀಟರ್ ಹಿರಿಯ ನಾಗರಿಕ ಮತ್ತು ವಿಶೇಷ ಚೇತನರ ರನ್ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

 ಏಪ್ರಿಲ್ 7,2016 ಕೊನೆಯ ದಿನ

ಏಪ್ರಿಲ್ 7,2016 ಕೊನೆಯ ದಿನ

ಓಪನ್ 10ಕೆಗೆ ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 7,2016 ಕೊನೆಯ ದಿನವಾಗಿದ್ದು, ಇದು ರನ್ನಿಂಗ್ ಸ್ಲಾಟ್ಸ್ ಲಭ್ಯತೆಯನ್ನು ಅವಲಂಭಿಸಿರುತ್ತದೆ. ಈ ಮಧ್ಯೆ ಇತರ ಮೂರು ವಿಭಾಗಗಳಿಗೆ ಏಪ್ರಿಲ್ 22, 2016 ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿದೆ.

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟ ಪುನಿತ್ ರಾಜ್ ಕುಮಾರ್ ಅವರು ಬೆಂಗಳೂರು ವಲ್ಡ್ 10ಕೆಗೆ ತಮ್ಮ ಬೆಂಬಲ ವಿಸ್ತರಿಸಿದ್ದು, ಮತ್ತೆ ಸ್ಪರ್ಧಾಳುಗಳೊಂದಿಗೆ ಓಡಲಿದ್ದಾರೆ.

ನಟ ಪುನಿತ್ ರಾಜ್ ಕುಮಾರ್ ಮಾತನಾಡಿ

ನಟ ಪುನಿತ್ ರಾಜ್ ಕುಮಾರ್ ಮಾತನಾಡಿ

ಟಿಸಿಎಸ್ ವಿಶ್ವ 10ಕೆ ಓಟ ಈಗ ನಮ್ಮ ಬೆಂಗಳೂರಿನ ಪರ್ಯಾಯ ಪದವಾಗಿ ಮಾರ್ಪಟ್ಟಿದೆ. ಹಲವು ವರ್ಷಗಳಿಂದ ಓಟಕ್ಕೆ ಬೇಕಾದ ಎಲ್ಲಾ ಸವಲತ್ತು ಗಳನ್ನು ನಮ್ಮ ನಗರ ಒಳಗೊಂಡಿದೆ, ಟಿಸಿಎಸ್ ವಿಶ್ವ 10ಕೆ ಇಡೀ ನಗರದ ಜತೆಗೆ ಹಣ ಸಂಗ್ರಹಿಸಲು ಹಲವು ದತ್ತಿ ಸಂಸ್ಥೆಗಳಿಗೆ ವೇದಿಕೆಯಾಗುತ್ತಿದೆ. ಬೆಂಗಳೂರಿಗರು ರನ್ನಿಂಗ್ ನಲ್ಲಿ ಪಾಲ್ಗೊಳ್ಳುವಂತೆ," ಕರೆ ನೀಡಿದ್ದಾರೆ.

ನೋಂದಾವಣೆ ಶುಲ್ಕ ಎಷ್ಟಿದೆ?

ನೋಂದಾವಣೆ ಶುಲ್ಕ ಎಷ್ಟಿದೆ?

ಭಾರತೀಯರು ಸ್ರ್ಪಗಳು ಓಪನ್ 10ಕೆ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಲು 1,250 ರೂ., ಮಜ್ಜ ರನ್ ಗೆ 800 ರೂ., ಹಿರಿಯ ನಾಗರಿಕ ರನ್ ಮತ್ತು ಚಾಂಪಿಯನ್ಸ್ ವಿತ್ ವಿಶೇಷ ಚೇತನರ ರನ್ ಗೆ 300 ರೂ.ಶುಲ್ಕ ಪಾವತಿಸಬೇಕಾಗಿದೆ. ವಿದೇಶಿ ಸ್ರ್ಪಗಳು ಓಪನ್ 10ಕೆ ವಿಭಾಗದಲ್ಲಿ 45 ಅಮೆರಿಕನ್ ಡಾಲರ್, ಮಜ್ಜ ರನ್ ವಿಭಾಗದಲ್ಲಿ 25 ಅಮೆರಿಕನ್ ಡಾಲರ್, ಹಿರಿಯ ನಾಗರಿಕ ಮತ್ತು ವಿಶೇಷ ಚೇತನರ ರನ್ ವಿಭಾಗದಲ್ಲಿ 10 ಅಮೆರಿಕ ಡಾಲರ್ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗಿದೆ.

ಈ ವರ್ಷದ ಓಟದ ವಿಶೇಷತೆ ಏನು?

ಈ ವರ್ಷದ ಓಟದ ವಿಶೇಷತೆ ಏನು?

ಪ್ರಶಸ್ತಿ ಮೊತ್ತ ಹೆಚ್ಚಳ: ಕಳೆದ ವರ್ಷದ ನೀಡಲಾದ ಪ್ರಶಸ್ತಿ ಮೊತ್ತಕ್ಕಿಂತ ಒಂಬತ್ತನೆ ಆವೃತ್ತಿಯಲ್ಲಿ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಒಟ್ಟಾರೆ 1,97,768 ಅಮೆರಿಕನ್ ಡಾಲರ್ ಮೊತ್ತಕ್ಕೆ ವಿಸ್ತರಿಸಲಾಗಿದೆ. ಎರಡು ಆಕರ್ಷಣೆಯ ಬಹುಮಾನದ ವಿಭಾಗದಲ್ಲಿ ಕೂಟ ದಾಖಲೆ ಮುರಿದ ಎಲೈಟ್ ಓಟಗಾರರಿಗೆ ಹೆಚ್ಚುವರಿಯಾಗಿ ಉತ್ತೇಜನ ಬಹುಮಾನ ನೀಡಲಾಗುವುದು

ಬೋನಸ್ ನಿರ್ಮಿಸಿದವರಿಗೆ

ಬೋನಸ್ ನಿರ್ಮಿಸಿದವರಿಗೆ

ಹೊಸ ಕೂಟ ದಾಖಲೆ ಬೋನಸ್ ನಿರ್ಮಿಸಿದವರಿಗೆ ಎಲೈಟ್ ವಿಭಾಗ ಪುರುಷ ಮತ್ತು ಮಹಿಳೆಯರಿಗೆ 2,000 ಸಾವಿರ ಅಮೆರಿಕನ್ ಡಾಲರ್ ಮೊತ್ತ ಮತ್ತು ಭಾರತೀಯ ವಿಜೇತರಿಗೆ 50,000 ರೂ ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ ಹಿಂದಿನ ಕೂಟದಾಖಲೆ ಮುರಿದ ಸ್ರ್ಪಗಳಿಗೆ ಎಲೈಟ್ ಪುರುಷ ಮತ್ತು ಮಹಿಳೆಯರಿಗೆ 2,000 ಸಾವಿರ ಅಮೆರಿಕನ್ ಡಾಲರ್ ಮತ್ತು ಭಾರತೀಯ ವಿಜೇತರಿಗೆ 50, ಸಾವಿರ ರೂಪಾಯಿ ನೀಡಲಾಗುತ್ತದೆ.

ಚಾರಿಟಿ ಡ್ರೈವ್ ಜತೆ ಸಂಬಂಧ

ಚಾರಿಟಿ ಡ್ರೈವ್ ಜತೆ ಸಂಬಂಧ

ಚಾರಿಟಿ ಡ್ರೈವ್ ಜತೆ ಸಂಬಂಧ ಹೊಂದಿರುವ ಟಿಸಿಎಸ್ ವಿಶ್ವ 10ಕೆ ಬೆಂಗಳೂರಿಗೆ ಭಾರತದ ಮುಂಚೂಣಿ ಕೇರ್ಸ್, ಕೂಟದ ಪರೋಪಕಾರ ಪಾಲುದಾರಿಕೆ ಸಂಸ್ಥೆಯಾಗಿದೆ. ಟಿಸಿಎಸ್ 10ಕೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ನಿಧಿ ಸಂಗ್ರಹ ವೇದಿಕೆಯಾಗಿದೆ. ವಿವಿಧ ಕಾರಣಗಳಿಗಾಗಿ ಎನ್‍ಜಿಒ-ಸರ್ಕಾರಿಯೇತರ ಸಂಸ್ಥೆಗಳಿಗೆ ನೀಡಲಾಗುತ್ತಿರುವ ಮೊತ್ತ 20.29ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ದತ್ತಿ ಕೊಡುಗೆಗಳು ಸುಧಾರಿತ ರಚನೆ ಮುಂದುವರಿಯಲಿದ್ದು, ಬೆಂಗಳೂರು ನಗರ ಮತ್ತೊಮ್ಮೆ ತನ್ನ ಕೊಡುಗೆ ನೀಡುವ ಬಗ್ಗೆ ನಿರೀಕ್ಷಿಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Registrations open for the TCS World 10K. The launch of the TCS World 10K Bengaluru 2016 held at ITC Windsor, Bengaluru. Power Star Puneeth Rajkumar, K Abhaychandra, Hon’ble Minister Youth Services & Fisheries, Govt. of Karnataka; Arvind Jadhav and many others were present.
Please Wait while comments are loading...