ರೆಡ್ ಕಾರ್ಡ್ ತೋರಿಸಿದ ರೆಫರಿಗೆ ಬಿತ್ತು ಗುಂಡೇಟು

By: ರಮೇಶ್ ಬಿ
Subscribe to Oneindia Kannada

ಕೋರ್ಡೊಬಾ(ಅರ್ಜೆಂಟೀನಾ), ಫೆ.17: ಫುಟ್ ಬಾಲ್ ಆಟದ ವೇಳೆ ಅಸಭ್ಯವಾಗಿ ವರ್ತನೆ ಮಾಡಿದ ಆಟಗಾರನೊಬ್ಬನಿಗೆ ರೆಡ್ ಕಾರ್ಡ್ ತೋರಿಸಿದ ರೆಫ್ರಿಯನ್ನು ಆಟಗಾರ ಗುಂಡುಕ್ಕಿ ಕೊಂದು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಮುಖ್ಯ ರೆಫರಿ ಸೀಸನ್ ಫ್ಲೋರ್ಸ್ ಅವರು ರೆಡ್ ಕಾರ್ಡ್ ತೋರಿಸಿದ್ದರಿಂದ ಕೋಪಗೊಂಡ ಆಟಗಾರ ಮೈದಾನದಲ್ಲಿಯೇ ಅವರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಅರ್ಜೆಂಟೀನಾದ ಕೋರ್ಡೊಬಾ ಪ್ರಾಂತ್ಯದಲ್ಲಿ ನಡೆದಿದೆ.[ಕ್ರಿಕೆಟ್ ನಲ್ಲಿ ಬರಲಿದೆ ರೆಡ್ ಕಾರ್ಡ್ ನಿಯಮ]

Referee ‘shot dead by player he sent off’ during amateur match in Argentina

ಸ್ಥಳೀಯ ಎರಡು ತಂಡಗಳ ನಡುವೆ ನಡೆದ ಫುಟ್ ಬಾಲ್ ಆಟದ ವೇಳೆ ಆಟಗಾರನೊಬ್ಬ ನಿಯಮ ಮೀರಿ ಆಟ ಆಟುತ್ತಿದ್ದಾನೆಂಬ ಕಾರಣಕ್ಕೆ ಮೈದಾನದಲ್ಲಿದ್ದ ರೆಫರಿ ಸೀಸರ್ ಫ್ಲೋರೆಸ್ (48) ಅವರು ಆ ಆಟಗಾರನಿಗೆ ರೆಡ್ ಕಾರ್ಡ್ ನೀಡಿದ್ದಾರೆ.[ಫುಟ್ಬಾಲ್ ತಾರೆ ನೆತ್ತಿ ಮೇಲೆ ತೂಗಿದ ಟ್ರಾಫಿಕ್ ಲೈಟ್ ಕಂಬ]

ಕೋಪಿತಗೊಂಡ ಆಟಗಾರ ಮೈದಾನದಿಂದ ಹೊರ ನಡೆದು ತನ್ನ ಬ್ಯಾಗ್ ನಲ್ಲಿದ್ದ ರಿವಾಲ್ವರ್ ತೆಗೆದುಕೊಂಡು ಮೈದಾನಕ್ಕೆ ಬಂದು ರೆಫರಿ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಪಕ್ಕದಲ್ಲಿದ್ದ ವಾಲ್ಟಾರ್ ಝರೇಟ್ ಎಂಬ ಆಟಗಾರನಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಆತನನ್ನ ಆಸ್ಪತ್ರಗೆ ಸೇರಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಫೆರೊ ಹಾಗೂ ಟಿರೋ ಫೆಡೆರಲ್ ನಡುವಿನ ಪಂದ್ಯವೊಂದರಲ್ಲಿ ಭಾರಿ ಗಲಾಟೆಯಾಗಿತ್ತು. ಈ ವೇಳೆಯಲ್ಲಿ ರೆಫ್ರಿಯೊಬ್ಬರಿಗೆ ಹಳದಿ ಕಾರ್ಡ್ ತೋರಿಸಿದ ಕಾರಣಕ್ಕೆ ಆಟಗಾರನೊಬ್ಬ ಪಂಚ್ ಕೊಟ್ಟು ಪ್ರಜ್ಞೆ ತಪ್ಪುವಂತೆ ಮಾಡಿದ ಘಟನೆ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Argentina police are searching for a footballer who is said to have shot and killed a referee after being sent off in a match played in the Cordoba province.
Please Wait while comments are loading...