ಬಾಡ್ಮಿಂಟನ್ ತಾರೆ ಸೈನಾ ಮುಡಿಗೆ ಮತ್ತೊಂದು ಗರಿ!

Posted By:
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 18: ಭಾರತದ ಹೆಮ್ಮೆಯ ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಮತ್ತೊಂದು ಗೌರವ ಸಲ್ಲಿಕೆಯಾಗಿದೆ. ಸೈನಾ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್​ಗಳ ಆಯೋಗದ ಸದಸ್ಯೆರಾಿ ನೇಮಕ ಮಾಡಲಾಗಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧ್ಯಕ್ಷರಾದ ಥಾಮಸ್ ಬಾಕ್ ಅವರು ಅಕ್ಟೋಬರ್ 17ರಂದು ಈ ಕುರಿತಂತೆ ನೇಮಕಾತಿ ಆದೇಶ ಪತ್ರವನ್ನು ಸೈನಾ ಅವರಿಗೆ ಕಳಿಸಿದ್ದಾರೆ.

rare-ioc-honour-india-s-saina-nehwal-badminton

ಏಂಜೆಲಾ ರುಗ್ಗಿರೋ ನೇತೃತ್ವದ ಈ ಆಯೋಗದಲ್ಲಿ 9 ಉಪಾಧ್ಯಕ್ಷ, 10 ಮಂದಿ ಸದಸ್ಯರನ್ನೊಳಗೊಂಡಿದೆ. ಭಾರತೀಯ ಕ್ರೀಡಾಪಟುವೊಬ್ಬರಿಗೆ ಸಿಕ್ಕಿರುವ ಅಪರೂಪದ ಗೌರವ ಇದಾಗಿದ್ದು, ಇದನ್ನು ಬ್ಯಾಡ್ಮಿಂಟನ್ ತಾರೆ ಸೈನಾ ಪಡೆದುಕೊಂಡಿದ್ದಾರೆ. ಸೈನಾ ನೆಹ್ವಾಲ್ ಅವರು ನವೆಂಬರ್ 6ರಂದು ನಡೆಯಲಿರುವ ಆಯೋಗದ ಮೊದಲ ಸಭೆಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ಒಲಿಂಪಿಕ್​ನಲ್ಲಿ ಸೈನಾ ಗಾಯಗೊಂಡು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಸೈನಾ ಅವರು ಈಗ ಚೇತರಿಸಿಕೊಂಡಿದ್ದು ನವೆಂಬರ್ ನಿಂದ ಕಣಕ್ಕಿಳಿಯಲಿದ್ದಾರೆ. ಸೈನಾ ಪಾಲಿನ ವಿಶೇಷವಾದ ಗೌರವ ಇದಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಕೆಯನ್ನು ಸಾಧಕಿಯನ್ನಾಗಿ ಗುರುತಿಸಿ ಸದಸ್ಯತ್ವ ನೀಡುತ್ತಿರುವ ಬಗ್ಗೆ ಬಹಳ ಆನಂದವಾಗಿದೆ ಎಂದು ಸೈನಾ ಅವರ ತಂದೆ ಹರ್ವೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.(ಪಿಟಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a rare honour for an Indian sportsperson, star shuttler Saina Nehwal has been appointed as a member of the International Olympic Committee's (IOC) Athletes' Commission.
Please Wait while comments are loading...