ಗಾಯದ ಸಮಸ್ಯೆ,ನಡಾಲ್ ಅವರು ವಿಂಬಲ್ಡನ್ ಆಡುತ್ತಿಲ್ಲ

Posted By:
Subscribe to Oneindia Kannada

ಮ್ಯಾಡ್ರಿಡ್, ಜೂನ್ 10: ಆವೆಮಣ್ಣಿನ ಕೋರ್ಟಿನ ಕಿಂಗ್ ರಫೆಲ್ ನಡಾಲ್ ಅವರು ಗಾಯದ ಸಮಸ್ಯೆಯಿಂದ ಈ ಬಾರಿ ವಿಂಬಲ್ಡನ್ ಕೂಡಾ ತಪ್ಪಿಸಿಕೊಳ್ಳುತ್ತಿದ್ದಾರೆ. ಮಣಿಕಟ್ಟಿನ ಗಾಯದಿಂದ ಫ್ರೆಂಚ್ ಓಪನ್ ಕೂಡಾ ಆಡಲು ಸಾಧ್ಯವಾಗಿರಲಿಲ್ಲ, ಜೋಕವಿಕ್ ಫ್ರೆಂಚ್ ಓಪನ್ ಗೆದ್ದು ಹೊಸ ಇತಿಹಾಸ ಬರೆದರು.

14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ಪೇನಿನ ನಡಾಲ್ ಅವರು 2008 ಹಾಗೂ 2010ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು. 2004 ಹಾಗೂ 2009ರಲ್ಲೂ ಗಾಯದ ಸಮಸ್ಯೆಯಿಂದ ವಿಂಬಲ್ಡನ್ ಆಡಿರಲಿಲ್ಲ. 2012ರಲ್ಲಿ ಎರಡನೇ ಸುತ್ತು, 2013ರಲ್ಲಿ ಮೊದಲ ಸುತ್ತು, 2014ರಲ್ಲಿ 16ರ ಹಂತ, 2015ರಲ್ಲಿ ಎರಡನೇ ಸುತ್ತಿನ ನಂತರ ಟೂರ್ನಿಯಿಂದ ಹೊರಬಿದ್ದಿದ್ದರು.[ಶರಪೋವಾಗೆ 2 ವರ್ಷ ಅಮಾನತು ಶಿಕ್ಷೆ]

Rafael Nadal to miss Wimbledon with wrist injury

ಜೂನ್ 27ರಿಂದ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ವಿಂಬಲ್ಡನ್ ಆರಂಭಗೊಳ್ಳಲಿದೆ. ರಿಯೋ ಒಲಿಂಪಿಕ್ಸ್ ಗೂ ತಯಾರಿ ನಡೆಸಬೇಕಿರುವ ನಡಾಲ್ ಅವರು ಸಂಪೂರ್ಣ ಗುಣಮುಖರಾಗುವ ತನಕ ಆಟದ ಕೋರ್ಟಿಗೆ ಇಳಿಯುವುದು ಬೇಡ ಎಂದು ಕೋಚ್ ಟೋನಿ ಹೇಳಿದ್ದಾರೆ.

ಈ ಬಾರಿ 2004ರ ಮಹಿಳಾ ವಿಂಬಲ್ಡನ್ ವಿಜೇತೆ ಮರಿಯಾ ಶರಪೋವಾ ಕೂಡಾ ವಿಂಬಲ್ಡನ್ ತಪ್ಪಿಸಿಕೊಳ್ಳಲಿದ್ದಾರೆ. ಉದ್ದೀಪನ ಮದ್ದು ಸೇವನೆ ಸಾಬೀತಾಗಿ 2 ವರ್ಷಗಳ ಕಾಲ ಅಮಾನತು ಶಿಕ್ಷೆ ಅನುಭವಿಸುತ್ತಿದ್ದಾರೆ. (ಎಎಫ್ ಪಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rafael Nadal will miss Wimbledon after failing to recover from the wrist injury which also forced his early withdrawal from the French Open, the Spanish star announced on his Facebook page.
Please Wait while comments are loading...