ಆಸ್ಟ್ರೇಲಿಯನ್ ಓಪನ್ ನಿಂದ ರಫೆಲ್ ನಡಾಲ್ ಹೊರಕ್ಕೆ

Posted By:
Subscribe to Oneindia Kannada

ಮೆಲ್ಬೋರ್ನ್, ಜ.19: 2009ರ ಚಾಂಪಿಯನ್ ಸ್ಪೇನಿನ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲೇ ಔಟ್ ಆಗಿದ್ದಾರೆ.

ಇಲ್ಲಿನ ಮೆಲ್ಬೋರ್ನ್ ಪಾರ್ಕ್ ನಲ್ಲಿ ಮಂಗಳವಾರ(ಜನವರಿ 19) ನಡೆದ ಪಂದ್ಯದಲ್ಲಿ ಸ್ಪೇನಿನ ತಾರೆ ನಡಾಲ್ ಅವರನ್ನು ಫರ್ನಾಂಡೋ ವರ್ಡಾಸ್ಕೋ ಅವರು 7-6(6), 4-6, 3-6, 7-6 (4), 6-2 ಅಂತರದಲ್ಲಿ ಸೋಲಿಸಿದರು.

Rafael Nadal knocked out of Australian Open

ಈ ಮೂಲಕ ವಿಶ್ವದ ಮಾಜಿ ನಂಬರ್ 1 ಆಟಗಾರ ನಡಾಲ್ ಅವರು ಮತ್ತೊಮ್ಮೆ ಆಸ್ಟ್ರೇಲಿಯನ್ ಓಪನ್ ನಲ್ಲಿ ವಿಫಲರಾಗಿದ್ದು, ಮೊದಲ ಸುತ್ತಿನಿಂದ ಹೊರ ಬಿದ್ದ ಸ್ಟಾರ್ ಆಟಗಾರರ ಪಟ್ಟಿಗೆ ಸೇರಿದ್ದಾರೆ.

ವೀನಸ್ ವಿಲಿಯಮ್ಸ್ ಕೂಡಾ ಔಟ್: 35ನೇ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಕನಸು ಹೊತ್ತಿದ್ದ ಮಾಜಿ ತಾರೆ ವೀನಸ್ ವಿಲಿಯಮ್ಸ್ ಗೆ ನಿರಾಶೆಯಾಗಿದೆ. ಸಿಡ್ನಿ ಮೂಲದ ಬ್ರಿಟಿಷ್ ಆಟಗಾರ್ತಿ ಜೊಹನ್ನಾ ಕೊಂಟಾ ಅವರ ಕೈಲಿ 6-4, 6-2 ನೇರ ಸೆಟ್ ಗಳ ಸೋಲು ಕಂಡ ವೀನಸ್ ಕೂಡಾ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.

2015ರಲ್ಲಿ ವಿಶ್ವ ಟೆನ್ನಿಸ್ ಅಂಗಳಕ್ಕೆ ರೀ ಎಂಟ್ರಿ ಪಡೆದುಕೊಂಡು ಮೂರು ಪ್ರಶಸ್ತಿ ಗೆದ್ದು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ 8ನೇ ಸೀಡೆಡ್ ಅಮೆರಿಕನ್ ಆಟಗಾರ್ತಿ ವೀನಸ್ ಅವರು ರಾಡ್ ಲವೆರ್ ಅಂಗಳದಲ್ಲಿ 24ರ ಹರೆಯದ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಆಡುತ್ತಿರುವ ಕೊಂಟಾ ವಿರುದ್ಧ 79 ನಿಮಿಷದಲ್ಲಿ ಸೋಲು ಕಂಡರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fernando Verdasco sent shockwaves through the Australian Open on Tuesday by defeating Rafael Nadal 7-6(6) 4-6 3-6 7-6(4) 6-2 to send the former world number one Rafael Nadal crashing out of the tournament's opening round.
Please Wait while comments are loading...