ಮೂರು ವರ್ಷಗಳ ಬಳಿಕ ಜೊಕೊವಿಚ್ ವಿರುದ್ಧ ಗೆದ್ದ ನಡಾಲ್

Posted By:
Subscribe to Oneindia Kannada

ಮ್ಯಾಡ್ರಿಡ್, ಮೇ 13: ಸ್ಪೇನ್ ನ ಟೆನಿಸ್ ಆಟಗಾರ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದಾರೆ.

ಶನಿವಾರ ನಡೆದ ಈ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅವರು ಟೆನಿಸ್ ರಂಗದ ಮತ್ತೊಬ್ಬ ದೈತ್ಯ ಪ್ರತಿಭೆ, 2ನೇ ಶ್ರೇಯಾಂಕಿತ ನೊವಾಕ್ ಜೊಕೊವಿಚ್ (ಸರ್ಬಿಯಾ) ವಿರುದ್ಧ 6-2, 6-4 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು.

Rafael Nadal beats Novak Djokovic to reach Madrid Open final

ಈ ಮೂಲಕ, ಮೂರು ವರ್ಷಗಳ ಕಾಲ ಸತತ ಏಳು ಪಂದ್ಯಗಳಲ್ಲಿ ಜೊಕೊವಿಚ್ ವಿರುದ್ಧ ಸೋತಿದ್ದ ನಡಾಲ್, ಈ ಬಾರಿ ಆ ಸೋಲಿನ ಸರಪಳಿ ಕಳಚಿದ್ದಾರೆ. 2014ರ ಫ್ರೆಂಚ್ ಓಪನ್ ನ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ್ದು ಬಿಟ್ಟರೆ, ಆನಂತರದ ಯಾವ ಮುಖಾಮುಖಿಗಳಲ್ಲೂ ನಡಾಲ್ ಅವರು, ಜೊಕೊವಿಚ್ ವಿರುದ್ಧ ಜಯ ಸಾಧಿಸಿರಲಿಲ್ಲ.

ಈ ಹಿಂದೆ, ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯನ್ನು ನಾಲ್ಕು ಬಾರಿ ಗೆದ್ದಿರುವ ಅವರು, ಈಗ ಐದನೇ ಬಾರಿಗೆ ಆ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ.

ಶನಿವಾರ ನಡೆದ ಪಂದ್ಯದ ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ನಡಾಲ್, ಪಾದರಸದಂತೆ ಅಂಕಣದ ತುಂಬೆಲ್ಲಾ ಓಡಾಡಿ ವೇಗವಾಗಿ ಅಂಕ ಕಲೆಹಾಕುವಲ್ಲಿ ಯಶಸ್ವಿಯಾದರು. ಆದರೆ, ಅತ್ತ ಜೊಕೊವಿಚ್ ಅವರ ಆಟದಲ್ಲಿ ಎಂದಿನ ಚುರುಕಿನ ಆಟ ಕಂಡುಬರಲಿಲ್ಲ. ಅಲ್ಲದೆ, ನಡಾಲ್ ಅವರ ರಭಸದ ಆಟವನ್ನು ಎದುರಿಸುವಲ್ಲಿ ಅವರು ಸಂಪೂರ್ಣವಾಗಿ ಎಡವಿದರು.

ಆದರೆ, ದ್ವಿತೀಯ ಸೆಟ್ ನಲ್ಲಿ ಜೊಕೊ ಆಟದಲ್ಲಿ ಕೊಂಚ ಚೇತರಿಕೆ ಕಂಡುಬಂದಿತು. ಆದರೆ, ಅದು ನಡಾಲ್ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four-time champion Rafael Nadal ended a three-year, seven-match losing streak against Novak Djokovic to reach the final of the Madrid Open.
Please Wait while comments are loading...