ಭಾರತದ ಶೆಟ್ಲರ್ ಪಿವಿ ಸಿಂಧು ಇನ್ಮುಂದೆ ಡೆಪ್ಯುಟಿ ಕಲೆಕ್ಟರ್

Posted By:
Subscribe to Oneindia Kannada

ಹೈದರಾಬಾದ್‌, ಮೇ 17 : ಕಳೆದ ವರ್ಷ ನಡೆದಿದ್ದ ರಿಯೊ ಒಲಿಂಪಿಕ್ಸ್ ನ ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಭಾರತದ ಸ್ಟಾರ್ ಶೆಟ್ಲರ್ ಪಿ ವಿ ಸಿಂಧು ಅವರಿಗೆ ನೀಡದ್ದ ಉದ್ಯೋಗವನ್ನು ಆಂಧ್ರಪ್ರದೇಶ ಸರ್ಕಾರ ಬದಲಾವಣೆ ಮಾಡಿದೆ.

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಬಿಪಿಸಿಎಲ್) ಉಪ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಂಧು ಅವರಿಗೆ ಉಪ ವಿಭಾಗಾಧಿಕಾರಿ ಹುದ್ದೆ ನೀಡಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದೆ.[ಐಎಎಸ್ ಅಧಿಕಾರಿಯಾಗಿ ನೇಮಕಗೊಳ್ಳಲಿರುವ ಶಟ್ಲರ್ ಪಿ.ವಿ. ಸಿಂಧು]

PV Sindhu will be Deputy Collector in Andhra Pradesh

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ನಾಗರಿಕ ಸೇವಾ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ವಿಧಾನ ಮಂಡಲ ಮಂಗಳವಾರ ಒಪ್ಪಿಗೆ ನೀಡಿದೆ.

ರಾಜ್ಯಪಾಲ ಇ.ಎಸ್‌.ಎಲ್‌. ನರ ಸಿಂಹನ್ ಅವರು ತಿದ್ದುಪಡಿ ಮಸೂದೆಗೆ ಸಹಿ ಹಾಕಿದ ಬಳಿಕ ಸಿಂಧು ಅವರಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ.

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರಿಂದ ಸಿಂಧು ಅವರಿಗೆ ಸರ್ಕಾರಿ ಹುದ್ದೆ ನೀಡುವುದಾಗಿ ಆಂಧ್ರಪ್ರದೇಶ ಸರ್ಕಾರ ಘೋಷಿಸಿತ್ತು.

ಅದರಂತೆ ಅವರಿಗೆ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಬಿಪಿಸಿಎಲ್) ಉಪ ವ್ಯವಸ್ಥಾಪಕಿ ಹುದ್ದೆ ನೀಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Finance Minister Yanamala Ramakrishnudu on Tuesday announced ace Badminton player PV Sindhu as Deputy Collector under the AP Public Service Commission (APPSC) Act.
Please Wait while comments are loading...