ರಿಯೋ ಒಲಿಂಪಿಕ್ಸ್‌ ಸಾಧಕರಿಗೆ ಬಿಎಂಡಬ್ಲ್ಯೂ ಕಾರು ಕೊಡುಗೆ!

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 28 : 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌ ಹಾಗೂ ಜಿಮ್ನಾಸ್ಟಿಕ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಾ ಕರ್ಮಾಕರ್‌ ಹಾಗೂ ಸಿಂಧು ಅವರ ಕೋಚ್‌ ಗೋಪಿಚಂದ್ ಅವರಿಗೆ ಬಿಎಂಡಬ್ಲ್ಯೂ ಕಾರುಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಭಾನುವಾರ ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಕಾರುಗಳನ್ನು ನೀಡಲಾಯಿತು. ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಕಾರುಗಳ ಕೀ ಗಳನ್ನು ಹಸ್ತಾಂತರ ಮಾಡಿದರು.[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ಉದ್ಯಮಿ ವಿ.ಚಾಮುಂಡೇಶ್ವರನಾಥ್ ಅವರು ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌, ದೀಪಾ ಕರ್ಮಾಕರ್‌, ಸಿಂಧು ಅವರ ಕೋಚ್‌ ಗೋಪಿಚಂದ್ ಅವರಿಗೆ ಬಿಎಂಡಬ್ಲ್ಯೂ ಕಾರುಗಳನ್ನು ಉಡುಗೊರೆಯಾಗಿ ನೀಡಿದರು.[ರಿಯೋ ಸಾಧನೆ: ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್]

ರಿಯೋ ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನವೇ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕ್ರೀಡಾಪಟುಗಳು ಪದಕ ಜಯಿಸಿದರೆ ಕಾರು ನೀಡುತ್ತೇನೆಂದು ಚಾಮುಂಡೇಶ್ವರನಾಥ್ ಘೋಷಿಸಿದ್ದರು. ಅದರಂತೆ ಪಿ.ವಿ.ಸಿಂಧು ಜೊತೆಗೆ ಉಳಿದವರಿಗೂ ಕಾರನ್ನು ನೀಡಿದ್ದಾರೆ....

ಸಾಧಕರಿಗೆ ಕಾರಿನ ಕೊಡುಗೆ

ಸಾಧಕರಿಗೆ ಕಾರಿನ ಕೊಡುಗೆ

ರಿಯೋ ಒಲಿಂಪಿಕ್ಸ್‌ 2016ರ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು, ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್‌, ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಹಾಗೂ ಕೋಚ್‌ ಗೋಪಿಚಂದ್ ಅವರಿಗೆ ಬಿಎಂಡಬ್ಲ್ಯೂ ಕಾರನ್ನು ಕೊಡುಗೆಯಾಗಿ ನೀಡಲಾಯಿತು.

ಹೈದರಾಬಾದ್‌ನಲ್ಲಿ ಸಮಾರಂಭ

ಹೈದರಾಬಾದ್‌ನಲ್ಲಿ ಸಮಾರಂಭ

ಭಾನುವಾರ ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಕಾರುಗಳನ್ನು ಕೊಡುಗೆಯಾಗಿ ನೀಡಲಾಯಿತು.

ಉದ್ಯಮಿಯಿಂದ ಕಾರು ಕೊಡುಗೆ

ಉದ್ಯಮಿಯಿಂದ ಕಾರು ಕೊಡುಗೆ

ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ಉದ್ಯಮಿ ವಿ.ಚಾಮುಂಡೇಶ್ವರನಾಥ್ ಅವರು ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌, ದೀಪಾ ಕರ್ಮಾಕರ್‌, ಸಿಂಧು ಅವರ ಕೋಚ್‌ ಗೋಪಿಚಂದ್ ಅವರಿಗೆ ಬಿಎಂಡಬ್ಲ್ಯೂ ಕಾರುಗಳನ್ನು ಉಡುಗೊರೆಯಾಗಿ ನೀಡಿದರು.

ಕಾರಿನ ಕೀ ನೀಡಿದ ಸಚಿನ್

ಕಾರಿನ ಕೀ ನೀಡಿದ ಸಚಿನ್

ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಕಾರುಗಳ ಕೀ ಗಳನ್ನು ಹಸ್ತಾಂತರ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympics silver medallist P.V.Sindhu, bronze winner Sakshi Malik along with gymnast Dipa Karmakar and badminton coach Pullela Gopichand were presented BMW cars. Cricket icon Sachin Tendulkar, who was the Ambassador of the Indian team at the Rio Olympics, handed over the keys at Gopichand Badminton Academy, Hyderabad.
Please Wait while comments are loading...