ಸಿಂಧು, ದೀಪಾ, ಜಿತು,ಸಾಕ್ಷಿಗೆ ಖೇಲ್ ರತ್ನ ಪ್ರಶಸ್ತಿ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 22: ರಿಯೋ ಒಲಿಂಪಿಕ್ಸ್ 2016ರಲ್ಲಿ ಉತ್ತಮ ಸಾಧನೆ ತೋರಿದ ಪಿವಿ ಸಿಂಧು(ಬಾಡ್ಮಿಂಟನ್), ದೀಪಾ ಕರ್ಮಾಕರ್(ಜಿಮ್ನಾಸ್ಟ್), ಜಿತು ರೈ, ಸಾಕ್ಷಿ ಮಲೀಕ್(ಕುಸ್ತಿ) ಅವರಿಗೆ 2016ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಿಸಲಾಗಿದೆ.

ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಿರುವ ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು
ಮೊಟ್ಟ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿ, ಮೊದಲ ಪ್ರಯತ್ನದಲ್ಲೇ ಜಿಮ್ನಾಸ್ಟ್ ನ ಪ್ರುಡನೋವಾ ವಲ್ಟ್ ವಿಭಾಗದ ಫೈನಲ್ ಪ್ರವೇಶಿಸಿದ್ದರು. ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

National Sports Awards – 2016 : PV Sindhu, Sakshi Malik, Dipa Karmakar and Jitu Rai to get Khel Ratna award

ಪಿವಿ ಸಿಂಧು ಅವರು ಬೆಳ್ಳಿ ಪದಕ ಗೆದ್ದಿದ್ದರೆ, ಕುಸ್ತಿಯಲ್ಲಿ ಸಾಕ್ಷಿ ಮಲೀಕ್ ಕಂಚು ಪಡೆದುಕೊಂಡಿದ್ದಾರೆ. ಜಿತು ರೈ ಅವರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ಕನ್ನಡದ ಕಲಿ ಹಾಕಿ ಆಟಗಾರ ವಿ ರಘುನಾಥ್ ಗೆ ಅರ್ಜುನ ಪ್ರಶಸ್ತಿ, ಒಟ್ಟು 15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ. 6 ಜನರಿಗೆ ದ್ರೋಣಾಚಾರ್ಯ ಪ್ರಶಸ್ತಿ, 3 ಜನರಿಗೆ ಧ್ಯಾನ್ ಚಂದ್ ಪ್ರಶಸ್ತಿ, 4 ಸಂಸ್ಥೆಗಳಿಗೆ ರಾಷ್ಟ್ರೀಯ ಖೆಲ್ ಪ್ರೋತ್ಸಾಹಣ ಪುರಸ್ಕರ್ ಲಭಿಸಿದೆ. ಕ್ರೀಡಾ ಮತ್ತು ಯುವಜನ ವ್ಯವಹಾರ ಇಲಾಖೆ ಪ್ರಕಟಣೆಗೆ ಹೋಗಿ ಅಲ್ಲಿ National Sports Awards - 2016 ಪೂರ್ಣ ಪಟ್ಟಿ ಲಭ್ಯವಿದೆ.ಪೂರ್ಣ ಪಟ್ಟಿ ಇಲ್ಲಿದೆ ಕ್ಲಿಕ್ ಮಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National Sports Awards – 2016 : PV Sindhu, Sakshi Malik, Dipa Karmakar and Jitu Rai to get Khel Ratna award. National Sports Awards are given every year to recognize and reward excellence in sports.
Please Wait while comments are loading...