ಸಿಂಗಾಪುರ ಸೂಪರ್ ಸೀರಿಸ್: ಸಿಂಧು 2ನೇ ಸುತ್ತಿಗೆ ಲಗ್ಗೆ

Posted By:
Subscribe to Oneindia Kannada

ಸಿಂಗಪುರ , ಏಪ್ರಿಲ್ 13 : ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶೆಟ್ಲರ್ ಪಿ ವಿ ಸಿಂಧು ಬುಧವಾರ ಗೆಲುವಿನ ಶುಭಾರಂಭ ಮಾಡಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು. ಇಂಡಿಯಾ ಓಪನ್ ಗೆದ್ದಿರುವ ಸಿಂಧು ಸಿಂಗಪುರ ಓಪನ್ ಜಯಿಸುವ ಭರವಸೆ ಮೂಡಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸಿಂಧು 10-21, 21-15, 22-20 ಅಂತರದಲ್ಲಿ 2016ರ ಆಲ್‌ ಇಂಗ್ಲೆಂಡ್‌ ಚಾಂಪಿಯನ್ ಷಿಪ್ ಪ್ರಶ್ತಿ ವಿಜೇತೆ ಜಪಾನ್‌ ನ ನೊಜೊಮಿ ಓಕುಹರಾ ಅವರನ್ನು ಮಣಿಸಿದರು.[ಸಿಂಗಾಪುರ ಸೂಪರ್ ಸೀರಿಸ್: ಸೈನಾ ಔಟ್, ಸಿಂಧು ಮೇಲೆ ನಿರೀಕ್ಷೆ]

PV Sindhu enters second round of Singapore Open Super Series

ವಿಶ್ವ ಐದನೇ ಶ್ರೇಯಾಂಕದಲ್ಲಿರುವ ಸಿಂಧು ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದರಾದರೂ ಎರಡನೇ ಸೆಟ್ ನಲ್ಲಿ ಪುಟಿದೆದ್ದು ಅಮೋಘ ಗೆಲುವು ಪಡೆದರು.

ಅಂತಿಮ ಹಂತದವರೆಗೂ ಇಬ್ಬರು ಆಟಗಾರ್ತಿಯರು ಸಮಬಲದ ಹೋರಾಟ ನಡೆಸಿದರಾದರೂ ಕೊನೆಯಲ್ಲಿ ಸಿಂಧು ಅಲ್ಪ ಮೊತ್ತದ ಅಂಕಗಳಲ್ಲಿ ಗೆಲುವಿನ ಬಗೆ ಬೀರಿದರು.[ಶೈನಿಂಗ್ 'ಸಿಂಧು' ಇಂಡಿಯನ್ ಓಪನ್ ಫೈನಲ್]

ಇಂಡಿಯಾ ಓಪನ್ ಗೆದ್ದುಕೊಳ್ಳುವ ಮೂಲಕ ವಿಶ್ವ ರ್ಯಾಂಕಿಂಗ್ ನಲ್ಲಿ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಏರಿರುವ ಸಿಂಧು ಮುಂದಿನ ಸುತ್ತಿನಲ್ಲಿ ಇಂಡೊ ನೇಷ್ಯಾದ ಫಿತ್ರಿಯಾನಿ ವಿರುದ್ಧ ಸೆಣಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Olympic silver medallist PV Sindhu staved off a stiff challenge from 2016 All England champion Nozomi Okuhara of Japan to make a positive start to her campaign at the Singapore Open here on Wednesday.
Please Wait while comments are loading...