ಹಾಂಕಾಂಗ್ ಓಪನ್: ಸಿಂಧು ಸೆಮೀಸ್ ಗೆ, ಸೈನಾ ಹೊರಕ್ಕೆ!

Written By: Ramesh
Subscribe to Oneindia Kannada

ಹಾಂಕಾಂಗ್, ನವೆಂಬರ್, 25 : ಚೀನಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಅವರು ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಸೆಮೀಸ್ ಗೆ ಲಗ್ಗೆ ಇಟ್ಟಿದ್ದಾರೆ.

ಇನ್ನೊಂದೆಡೆ ಸೈನಾ ನೆಹ್ವಾಲ್ ಅವರು ಹಾಂಕಾಂಗ್ ಓಪನ್ ನ ಬ್ಯಾಡ್ಮಿಂಟನ್ 8 ಘಟ್ಟದಲ್ಲಿ ಪರಾಭವಗೊಂಡು ನಿರಾಸೆ ಮೂಡಿಸಿದರು.

ಶುಕ್ರವಾರ(ನವೆಂಬರ್ 25) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ತಾರೆ ಪಿವಿಸಿಂಧು ಅವರು ಸಿಂಗಾಪೂರದ ಆಟಗಾರ್ತಿ ಲಿಯಾಂಗ್ ಕ್ಷಿಯೊಯು ಅವರನ್ನು 21-17, 21-23, 21-18 ನೇರ ಸೆಟ್ ಗಳಿಂದ ಮಣಿಸಿ ಸೆಮಿಫೈನಲ್ ಗೆ ಪ್ರವೇಶಿಸಿದರು. [ಸಿಂಧು ಮುಡಿಗೆ ಚೀನಾ ಓಪನ್ ಸೂಪರ್ ಸೀರೀಸ್ ಕಿರೀಟ!]

Hong Kong Open: PV Sindhu enters semis, Saina Nehwal exits

ಸಿಂಧು ಅವರು ಭಾನುವಾರ(ನವೆಂಬರ್ 27)ದಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಹಾಂಕಾಂಗ್ ನ ಚೆಯುಂಗ್ ಯಿ ವಿರುದ್ಧ ಸೆಣಸಲಿದ್ದಾರೆ.

ಇನ್ನು ಮೊಣಕಾಲು ಶಸ್ತ್ರ ಚಿಕಿತ್ಸೆ ನಂತರ ಎರಡನೇ ಟೂರ್ನಿ ಆಡುತ್ತಿರುವ ಭಾರತದ ಶೆಟ್ಲರ್ ಸೈನಾ ನೆಹ್ವಾಲ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ ನ ಚೆಯುಂಗ್ ಯಿ ಅವರ ವಿರುದ್ಧ 8-21, 18-21, 19-21 ಸೆಟ್ ಗಳಿಂದ ಪರಾಭವಗೊಂಡು ಹಾಂಕಾಂಗ್ ಟೂರ್ನಿಯಿಂದ ಹೊರ ಬಂದರು.

ಚೀನಾ ಓಪನ್ ಟೂರ್ನಿಯಲ್ಲೂ ಸೈನಾ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಔಟ್ ಆಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's star shuttler PV Sindhu won a tough three-set battle to defeat Xiaoyu Liang of Singapore and enter the semi-finals of the Hong Kong Open badminton tournament here on Friday (November 25). But Saina Nehwal crashed out, losing in the last-8 stage.
Please Wait while comments are loading...