ಸಿಂಗಪುರ ಓಪನ್ ಸೂಪರ್ ಸೀರಿಸ್: ಭಾರತಕ್ಕೆ ತ್ರಿಬಲ್ ಧಮಾಕ

Posted By:
Subscribe to Oneindia Kannada

ಸಿಂಗಪುರ, ಏಪ್ರಿಲ್ 14 : ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಭಾರತಕ್ಕೆ ತ್ರಿಬಲ್ ಧಮಾಕ ಸಿಕ್ಕಿದೆ.

ಭಾರತದ ಪಿ ವಿ ಸಿಂಧು ಹಾಗೂ ಬಿ.ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಗೆಲುವು ದಾಖಲಿಸಿದೆ.

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಹಾಗೂ ಇತ್ತೀಚೆಗೆ ಇಂಡಿಯಾ ಓಪನ್ ಗೆದ್ದು ಕೊಳ್ಳುವ ಮೂಲಕ ಅಮೋಘ ಫಾರ್ಮ್‌ ನಲ್ಲಿರುವ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 19-21, 21-17, 21-8ರಲ್ಲಿ ನೇರ ಸೇಟ್ ಗಳಿಂದ ಇಂಡೊನೇಷ್ಯಾದ ಫಿತ್ರಿಯಾನಿ ಅವರನ್ನು ಮಣಿಸಿದರು.[ಸಿಂಗಾಪುರ ಸೂಪರ್ ಸೀರಿಸ್: ಸಿಂಧು 2ನೇ ಸುತ್ತಿಗೆ ಲಗ್ಗೆ]

PV Sindhu, B Sai Praneeth enters to quarterfinals in Singapore Super Series

ಮೊದಲ ಸೇಟ್ ನಲ್ಲಿ ಹಿನ್ನಡೆ ಸಾಧಿಸಿದ್ದ ಸಿಂಧು ಪ್ರಬಲ ಪೈಪೋಟಿ ನೀಡುವ ಮೂಲಕ ಎರಡನೇ ಸೆಟ್ ನಲ್ಲಿ ಗೆಲುವು ದಾಖಲಿಸಿರು.

ಮತ್ತೊಂದೆಡೆ ಸೈಯದ್ ಮೋದಿ ಗ್ರ್ಯಾನ್ ಪ್ರೀ ಗೋಲ್ಡ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಪ್ರಣೀತ್ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 21-15, 21-23, 21-16 ಅಂತರದಲ್ಲಿ ಚೀನಾದ ಕ್ವಿಯಾವೊ ಬಿನ್ ಎದುರು ಗೆದ್ದರು.

PV Sindhu, B Sai Praneeth enters to quarterfinals in Singapore Super Series

ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿರುವ ಪ್ರಣೀತ್ ಕ್ವಾರ್ಟರ್ ಫೈನಲ್‌ ನಲ್ಲಿ ಥಾಯ್ಲೆಂಡ್ ನ ಎಂಟನೇ  ಶ್ರೇಯಾಂಕದ ತೊಂಗ್ಸಕ್ ಸೆನ್ಸ್ ಸೊಮ್‌ ಬೂನ್ಸಕ್ ವಿರುದ್ಧ ಸೆಣಸಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 17-21, 21-17, 21-16ರಲ್ಲಿ ಕೊರಿಯಾದ ಜೀ ಹುವಾನ್ ಕಿಮ್‌ ಮತ್ತು ಲೀ ಸೊ ಹೀ ವಿರುದ್ಧ ಗೆಲುವು ದಾಖಲಿಸಿತು. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ ಚೀನಾದ ಲು ಕಿ ಮತ್ತು ಹುವಾಂಗ್ ಯಾಕ್ವಿಂಗ್ ವಿರುದ್ಧ ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Top Indian shuttlers P V Sindhu and B Sai Praneeth on Thursday advanced to the quarterfinals of the Singapore Super Series after posting hard-fought victories in the women's and men's singles respectively here.
Please Wait while comments are loading...