ತಿಮ್ಮಪ್ಪನಿಗೆ ಹರಕೆ: 68 ಕೆಜಿ ಬೆಲ್ಲ ನೀಡಿದ ಸಿಂಧು-ಗೋಪಿಚಂದ್

Posted By:
Subscribe to Oneindia Kannada

ತಿರುಮಲ, ಸೆ. 04: ಬಾಡ್ಮಿಂಟನ್ ತಾರೆ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಹಾಗೂ ಅವರ ಕೋಚ್ ಪುಲ್ಲೆಲ ಗೋಪಿಚಂದ್ ಅವರು ತಿರುಮಲ ತಿರುಪತಿ ದೇವಸ್ಥಾನಂನಲ್ಲಿ ವಿಶೇಷ ಪೂಜೆ, ಹರಕೆ ಸಲ್ಲಿಸಿದ್ದಾರೆ. ಸಿಂಧು ಅವರ ಕುಟುಂಬಸ್ಥರು ಕೂಡಾ ಭಾನುವಾರ ಏಳು ಬೆಟ್ಟದ ಒಡೆಯ ತಿಮ್ಮಪ್ಪನ ದರ್ಶನ ಪಡೆದುಕೊಂಡರು.[ಎಕ್ಸಾಂನಲ್ಲಿ ಫೇಲಾದೆ, ಬಾಡ್ಮಿಂಟನ್ ನಲ್ಲಿ ಪಾಸಾದೆ: ಗೋಪಿಚಂದ್]

ಒಲಿಂಪಿಕ್ಸ್ ಗೂ ಮುನ್ನ ಹತ್ತು ಹಲವು ಪ್ರಮುಖ ದೇವಸ್ಥಾನಗಳಿಗೆ ಪಿ ಗೋಪಿಚಂದ್ ಹಾಗೂ ಪಿವಿ ಸಿಂಧು ಅವರು ಹರಕೆ ಹೊತ್ತುಕೊಂಡಿದ್ದರು. ವೆಂಕಟೇಶ್ವರನ ಸನ್ನಿಧಿಗೆ ಭಾನುವಾರ ಆಗಮಿಸಿದ ಈ ಗುರು -ಶಿಷ್ಯೆ ಜೋಡಿ, ಹರಕೆಯನ್ನು ತೀರಿಸಿಕೊಂಡಿದ್ದಾರೆ. ಗೋಪಿಚಂದ್ ಅವರು ಮುಡಿ ಹರಕೆ ತೀರಿಸಿಕೊಂಡಿದ್ದರೆ, ಪುಸರ್ಲ ವೆಂಕಟ ಸಿಂಧು ಹಾಗೂ ಅವರ ಕುಟುಂಬದವರು ಗೋವಿಂದನಿಗೆ 68ಕೆಜಿ ಗಳಷ್ಟು ಬೆಲ್ಲವನ್ನು ಅರ್ಪಿಸಿದ್ದರೆ.[ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

PV Sindhu and P Gopichand Offer Special Prayers at TTD Tirumala

ತಿಮ್ಮಪ್ಪನ ದರ್ಶನ ಬಳಿಕ ಇಬ್ಬರು ಸಾಧಕರಿಗೆ ಟಿಟಿಡಿ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ತಿಮ್ಮಪ್ಪನ ಹರಕೆಗೂ ಮುನ್ನ ಸಿಂಧು ಅವರು ಬತುಕಮ್ಮ ದೇವಿಯ ಹರಕೆ ತೀರಿಸಿದ್ದರು. ಇತ್ತೀಚೆಗೆ ಸಂಪನ್ನಗೊಂಡ ಕೃಷ್ಣಪುಷ್ಕರಲು ಪವಿತ್ರ ಸ್ನಾನ ಮಹೋತ್ಸವದಲ್ಲೂ ಸಿಂಧು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Badmiton Star player, Olympics medal winner PV Sindhu and her coach P Gopichand offered Special Prayers (Harake) at Lord Venkateshwara Swamy Temple, TTD Tirumala on Sunday (September 04).
Please Wait while comments are loading...