ಕೊಹ್ಲಿ ಲೀಗ್ ಸೇರಿದ ಪುನೀತ್, ಬೆಂಗಳೂರು ತಂಡಕ್ಕೆ ಒಡೆಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 12: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ರಾಯಭಾರಿಯಾಗಿರುವ ಹೊಸ ಮಾದರಿಯ ಫುಟ್ಬಾಲ್ ಲೀಗ್ ಗೆ ಕನ್ನಡ ಚಲನಚಿತ್ರ ತಾರೆ 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಅವರು ಸೇರ್ಪಡೆಯಾಗಿದ್ದಾರೆ. ಪ್ರೀಮಿಯರ್ ಫುಟ್ಸಾಲ್ ಲೀಗ್ (ಪಿಎಫ್ ಎಲ್) ನಲ್ಲಿ ಬೆಂಗಳೂರು ತಂಡಕ್ಕೆ ಪುನೀತ್ ಅವರು ಒಡೆಯರಾಗಿರುತ್ತಾರೆ.

ಇಲ್ಲಿ ತನಕ ಕೋಲ್ಕತ್ತಾ, ಚೆನ್ನೈ ಫ್ರಾಂಚೈಸಿ ಬಗ್ಗೆ ಮಾತ್ರ ಪ್ರಕಟಿಸಲಾಗಿತ್ತು. ಈಗ ಬೆಂಗಳೂರಿನ ಫ್ರಾಂಚೈಸಿಯನ್ನು ಹೆಸರಿಸಲಾಗಿದ್ದು, 'Bangalore 5s' ಎಂದು ಹೆಸರಿಡಲಾಗಿದೆ. ಸೀಸನ್ ನಿಂದ ಸೀಸನ್ ಗೆ ಫ್ರಾಂಚೈಸಿ ಹೆಸರು ಬದಲಾಯಿಸಿಕೊಳ್ಳುವ ಅವಕಾಶ ಕೂಡಾ ಮಾಲೀಕರಿಗೆ ಇರುತ್ತದೆ. [ಫುಟ್ಬಾಲ್ ದಿಗ್ಗಜನ ಜತೆ ಕ್ರಿಕೆಟ್ ದಿಗ್ಗಜ ಕೊಹ್ಲಿ!]

 Kannada actor Puneeth Rajkumar has been announced as the owner of the Bengaluru franchise of Premier Futsal.

ಫುಟ್ಸಾಲ್ ಬಗ್ಗೆ ಪುನೀತ್: ಬೆಂಗಳೂರು ಈಗ ವೈವಿಧ್ಯಮಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ತಾಣವಾಗಿ ಬೆಳೆದಿದೆ.ಯುವ ಜನಾಂಗವನ್ನು ಈ ಹೊಸ ಮಾದರಿ ಫುಟ್ಬಾಲ್ ಕ್ರೀಡೆ ಫುಟ್ಸಾಲ್ ಆಕರ್ಷಿಸುವ ಸಾಧ್ಯತೆಯಿದೆ. ಈ ಲೀಗ್ ನ ಭಾಗವಾಗಲು ನನಗೆ ಸಕತ್ ಖುಷಿಯಾಗುತ್ತಿದೆ. ನಮ್ಮ ದೇಶದಲ್ಲಿ ಇಂಥದ್ದೊಂದು ಕ್ರೀಡೆಯನ್ನು ವಿರಾಟ್ ಕೊಹ್ಲಿ ಅವರು ಪರಿಚಯಿಸುತ್ತಿರುವುದು ತುಂಬಾ ಸಂತೋಷ' ಎಂದರು

ಜುಲೈ 12ರ ನಂತರ ಎಲ್ಲಾ ತಂಡಗಳು ಹಾಗೂ ಅದರ ಮಾಲೀಕತ್ವ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಪ್ರೀಮಿಯರ್ ಫುಟ್ಸಾಲ್ ನ ನಿರ್ದೇಶಕ ದಿನೇಶ್ ರಾಜ್ ಘೋಷಿಸಿದರು. [ಪ್ರೀಮಿಯರ್ ಫುಟ್ಸಾಲ್ ಲೀಗ್ ಬಗ್ಗೆ ಸಂಪೂರ್ಣ ಪತ್ರಿಕಾಗೋಷ್ಠಿ ವಿವರ ಇಲ್ಲಿ ಓದಿ]

ಲೂಯಿಸ್ ಫಿಗೋ, ಫಾಲ್ಕೊ, ಮೈಜಲ್ ಸಲ್ಗಾಡೋ, ಪಾಲ್ ಶೋಲ್ಸ್ ರಂಥ ದಿಗ್ಗಜರನ್ನು ಒಳಗೊಂಡಿರುವ ಪ್ರೀಮಿಯರ್ ಫುಟ್ಸಾಲ್ ಪಂದ್ಯಗಳು ಜುಲೈ 15ರಿಂದ ಆರಂಭಗೊಳ್ಳಲಿದೆ. ಪುನೀತ್ ರಾಜ್ ಕುಮಾರ್ ಅವರು ಪ್ರೀಮಿಯರ್ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. [ಫುಟ್ಸಾಲ್ ಗೀತೆ: ಕೊಹ್ಲಿ- ಎಆರ್ ರೆಹಮಾನ್ ಮ್ಯಾಜಿಕ್]

ಪಿಎಫ್ ಎಲ್ ಬಗ್ಗೆ: ಭಾರತದ 8 ನಗರಗಳಲ್ಲಿ ಜು.15 ರಿಂದ 26ರ ತನಕ ನಡೆಯಲಿರುವ ಫುಟ್ಸಾಲ್ ಲೀಗ್ ಕೂಡಾ ಫ್ರಾಂಚೈಸಿ ಆಧಾರಿತ ಲೀಗ್ ಆಗಿದೆ.
* ಪೋರ್ಚುಗಲ್ ನ ಫುಟ್ಬಾಲ್ ದಿಗ್ಗಜ ಲೂಯಿಸ್ ಫಿಗೋ ಪಿಎಫ್ ಎಲ್ ನ ಅಧ್ಯಕ್ಷರಾಗಿದ್ದು, ವಿರಾಟ್ ಕೊಹ್ಲಿ ಅವರು ರಾಯಭಾರಿಯಾಗಿದ್ದಾರೆ. (ಪಿಎಫ್ ಎಲ್) [ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳಿವು]
* ಭಾರತದಲ್ಲಿ ನಡೆಯಲಿರುವ ಮೊಟ್ಟ ಮೊದಲ ಬಹುರಾಷ್ಟ್ರೀಯ ಫುಟ್ಸಾಲ್ ಲೀಗ್ ಇದಾಗಿದೆ.
* ಪ್ರಿಮಿಯರ್ ಫುಟ್ಸಾಲ್ ಮ್ಯಾನೇಜ್ಮೆಂಟ್ ಪ್ರೈ ಲಿಮಿಟೆಡ್ ಆಯೋಜನೆಯಲ್ಲಿ ಪಂದ್ಯಗಳು ನಡೆಯಲಿವೆ
* ಪ್ರತಿ ತಂಡದಲ್ಲೂ 5 ಜನ ಆಟಗಾರರಿರುತ್ತಾರೆ. ತಲಾ 20 ನಿಮಿಷಗಳ ಎರಡು ಅವಧಿ ಆಟವಾಡಲಾಗುತ್ತದೆ. ಇದಕ್ಕೆ ಫುಟ್ಸಾಲ್ ಎಂದು ಕರೆಯಲಾಗುತ್ತದೆ. ಫುಟ್ಸಾಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಎಐ), ಅಸೋಸಿಯೇಷನ್ ಮುಂಡಿಯಾಲ್ ಡಿ ಫುಟ್ಸಾಲ್ (ಎಎಂಎಫ್) ನ ಮಾನ್ಯತೆ ಇದಕ್ಕಿದೆ.
* ಪ್ರೀಮಿಯರ್ ಫುಟ್ಸಾಲ್ ಪಂದ್ಯಗಳು ಸೋನಿ ಸಿಕ್ಸ್, ಸೋನಿ ಇಎಸ್ ಪಿಎನ್ ಹಾಗೂ ಸೋನಿ ಆಥ್ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ.Sony LIV ಅಪ್ಲಿಕೇಷನ್ ನಲ್ಲೂ ಪಂದ್ಯಗಳನ್ನು ನೋಡಬಹುದು
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English:
English summary
Kannada cinema's poster boy Puneeth Rajkumar has signed a long-term agreement with Premier Futsal to acquire the Bengaluru franchise of Premier Futsal.
Please Wait while comments are loading...