ಪುನೀತ್ ರಾಜ್‌ಕುಮಾರ್, ರಾಣಾ ದಗ್ಗುಬಾಟಿ ಕಬಡ್ಡಿ ಝಲಕ್

Written By:
Subscribe to Oneindia Kannada

ಹೈದಾರಾಬಾದ್, ಜುಲೈ, 06: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ತೆಲುಗು ನಟ ರಾಣಾ ದಗ್ಗುಬಾಟಿ ಹೈದರಾಬಾದ್ ನಲ್ಲಿ ಕಬಡ್ಡಿ ಆಡಿ ಸಂಭ್ರಮಿಸಿದರು.

ಪ್ರೊ ಕಬಡ್ಡಿ ಪಂದ್ಯಾವಳಿಗೆ ತಾರಾ ಮೆರುಗು. ಹೈದರಾಬಾದ್ ನಲ್ಲಿ ನಡೆದ ಬೆಂಗಳೂರು-ಹೈದರಾಬಾದ್ ಪಂದ್ಯಕ್ಕೆ ಪವರ್ ಸ್ಟಾರ್ ರಾಯಭಾರಿ ಪುನೀತ್ ರಾಜ್ ಕುಮಾರ್ ಸಾಕ್ಷಿಯಾದರು. ತೆಲುಗು ನಟ ರಾಣಾ ದಗ್ಗುಬಾಟಿ ಅವರೊಂದಿಗೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.[ಪ್ರೋ ಕಬಡ್ಡಿ ಲೀಗ್ ಗೆ 'ಪವರ್' ತಂದ ಸ್ಟಾರ್ ಪುನೀತ್]

ಸ್ಟಾರ್ ಸ್ಫೋರ್ಟ್ಸ್ ಪ್ರೊ ಕಬಡ್ಡಿ ಸೀಸನ್ 4 ರ ರಾಯಭಾರಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದು ಹಳೆ ಸುದ್ದಿ, ಪುನೀತ್ ಹಾಜರಿಯಲ್ಲಿ ಬೆಂಗಳೂರು ತಂಡ ಮೂರನೇ ಜಯ ದಾಖಲಿಸಿತು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು 30-28 ಅಂಕಗಳಿಂದ ಮಣಿಸಿತು.

kabaddi

5ನೇ ಪಂದ್ಯದ 3ನೇ ಗೆಲುವಿನೊಂದಿಗೆ 18 ಅಂಕ ಸಂಪಾದಿಸಿದ ಬುಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ರೈಡಿಂಗ್​ನಲ್ಲಿ ಹನ್ನೊಂದು ಅಂಕಗಳಿಸಿದ ರೋಹಿತ್ ಕುಮಾರ್ ಗೆಲುವಿನ ರೂವಾರಿಯಾದರು.[ಪ್ರೋ ಕಬಡ್ಡಿ ವೇಳಾಪಟ್ಟಿ ನೋಡಿ]

https://www.facebook.com/PSPRFC/videos/1185661148130936/?__mref=message_bubble

ಪಂದ್ಯ ವೀಕ್ಷಿಸಲು ಬಂದಿದ್ದ ನಟ ಪುನೀತ್‌ ರಾಜ್‌ಕುಮಾರ್ ಚಪ್ಪಾಳೆ ತಟ್ಟುತ್ತಾ ಬುಲ್ಸ್‌ ಬಳಗಕ್ಕೆ ಪ್ರೋತ್ಸಾಹ ತುಂಬಿದರು. ಬಾಲಿವುಡ್‌ ನಟ ರಾಣಾ ದಗ್ಗುಬಾಟಿ ಅವರು ತೆಲುಗು ಟೈಟನ್ಸ್‌ ಬಳಗಕ್ಕೆ ಬೆಂಬಲ ನೀಡಿದರು.

5 ಪಂದ್ಯಗಳಲ್ಲಿ 18 ಅಂಕವನ್ನು ಗಳಿಸಿರುವ ಬೆಂಗಳೂರು ಬುಲ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ತಲುಪಿತು. 5 ಪಂದ್ಯಗಳಲ್ಲಿ 9 ಅಂಕ ಗಳಿಸಿದ ತೆಲುಗು ಟೈಟಾನ್ಸ್ ಆರನೇ ಸ್ಥಾನಕ್ಕೆ ಬಂದು ತಲುಪಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Bulls came up with an inspiring performance led by Rohit Kumar to beat Telugu Titans 30-28 in the Pro Kabaddi League. Rohit Kumar scored 11 raid points for the Bulls and inspired his team to a huge victory.
Please Wait while comments are loading...