ಸಚಿನ್, ಅಕ್ಷಯ್, ಚಿರಂಜೀವಿ, ರಾಣಾ ಸಮ್ಮುಖದಲ್ಲಿ ಪಿಕೆಎಲ್ ಶುರು

Posted By:
Subscribe to Oneindia Kannada

ಹೈದರಾಬಾದ್, ಜುಲೈ 29: ಇಲ್ಲಿನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಉದ್ಘಾಟನಾ ಪಂದ್ಯಕ್ಕೆ ತಾರಾ ಮೆರುಗು ಸಿಕ್ಕಿತು.

ಪಿಕೆಎಲ್ 5ː 12 ತಂಡಗಳ ನಾಯಕರುಗಳ ಪರಿಚಯ

ಸಚಿನ್ ತೆಂಡೂಲ್ಕರ್, ಆಕ್ಷಯ್ ಕುಮಾರ್, ಚಿರಂಜೀವಿ, ರಾಣಾ ದಗ್ಗುಭಾತಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಪಿಕೆಎಲ್ ನ ಐದನೇ ಆವೃತ್ತಿಗೆ ಶುಕ್ರವಾರ(ಜುಲೈ 28) ರಾತ್ರಿ ಚಾಲನೆ ಸಿಕ್ಕಿತು. ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್(32) ತಂಡದ ಎದುರು ಹೊಸ ತಂಡ ತಮಿಳ್ ತಲೈವಾಸ್(27) ಸೆಣೆಸಾಟ ನಡೆಸಿತು. ತೆಲುಗು ಟೈಟನ್ಸ್ ರೋಚಕ ಜಯ ದಾಖಲಿಸಿತು.

ಪಿಕೆಎಲ್ 5ರ ಜುಲೈ 28ರಿಂದ ಅಕ್ಟೋಬರ್ 04ರ ತನಕ ನಡೆಯಲಿರುವ ಟೂರ್ನಮೆಂಟ್ ನಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿವೆ. ಹೈದರಾಬಾದ್‌ ಚರಣದ ಪಂದ್ಯಗಳು ಜುಲೈ 28ರಿಂದ ಆಗಸ್ಟ್‌ 3ರವರೆಗೆ ನಡೆಯಲಿವೆ. 12 ತಂಡಗಳು ಎರಡು ವಲಯಗಳಲ್ಲಿ ವಿಂಗಡಿಸಲಾಗಿದ್ದು, 15 ಅಂತರ ವಲಯ ಹಾಗೂ ಏಳು ಅಂತರ ವಲಯ ತಂಡಗಳಿರುತ್ತದೆ. ಮೂರು ಕ್ವಾಲಿಫೈಯರ್ಸ್ ಹಾಗೂ ಎರಡು ಎಲಿಮಿನೇಷನ್ ಗಳಿರುತ್ತವೆ.

ಉದ್ಘಾಟನಾ ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ಮತ್ತು ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿಯಾದವು. ಮಾಜಿ ಚಾಂಪಿಯನ್ ಯು ಮುಂಬಾ(21) ತಂಡಕ್ಕೆ ಪುಣೇರಿ ಪಲ್ಟನ್(33) ಆಘಾತಕಾರಿ ಸೋಲಿನ ಕಹಿಯುಣಿಸಿತು.

ಪ್ರೊ ಕಬಡ್ಡಿ 2017 ತಂಡಗಳು

ಪ್ರೊ ಕಬಡ್ಡಿ 2017 ತಂಡಗಳು

ಎ ಗುಂಪು: ದಬಾಂಗ್ ಡೆಲ್ಲಿ, ಗುಜರಾತ್ ಫಾರ್ಚೂನ್‌ ಜೈಂಟ್ಸ್‌, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್, ಯು ಮುಂಬಾ.

ಬಿ ಗುಂಪು: ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್‌, ಪಟ್ನಾ ಪೈರೇಟ್ಸ್‌, ತಮಿಳ್ ತಲೈವಾಸ್, ತೆಲುಗು ಟೈಟನ್ಸ್‌, ಯು.ಪಿ. ಯೋಧಾ.

ನಾಲ್ಕು ಹೊಸ ತಂಡಗಳು

ಹರ್ಯಾಣ ಸ್ಟೀಲರ್ಸ್, ತಮಿಳ್ ತಲೈವಾಸ್, ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಹಾಗೂ ಯುಪಿ ಯೋಧ ಹೊಸ ನಾಲ್ಕು ತಂಡಗಳಾಗಿವೆ. 13 ವಾರಗಳ ಕಾಲ 12 ನಗರಗಳಲ್ಲಿ ನಡೆಯಲಿರುವ ಈ ಕಬಡ್ಡಿ ಹಬ್ಬವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

ತೆಲುಗು ಟೈಟನ್ಸ್

ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ಪಿಕೆಎಲ್ ಪ್ರವೇಶಿಸಿರುವ ತಮಿಳ್ ತಲೈವಾಸ್ ತಂಡಕ್ಕೆ ಸೋಲುಣಿಸಿತು. ತಮಿಳ್ ತಲೈವಾಸ್ ಪರ ಸಚಿನ್ ಹಾಗೂ ಚಿರಂಜೀವಿ ಚಿಯರ್ ಮಾಡಿದರು. ತೆಲುಗು ತಂಡದ ಪರ ನಟ ರಾಣಾ ದಗ್ಗುಭಾತಿ ನಿಂತಿದ್ದರು.

ಗಮನ ಸೆಳೆದ ತಮಿಳ್ ತಂಡ

ಅಜಯ್ ಕುಮಾರ್ ಠಾಕೂರ್ ನೇತೃತ್ವದ ತಮಿಳ್ ತಲೈವಾಸ್ ತಂಡ ಮೊದಲ ಪಂದ್ಯದಲ್ಲಿ ಸೋಲು ಕಂಡರೂ ಉತ್ತಮ ಪ್ರದರ್ಶನ ನೀಡಿತು. ಸಚಿನ್ ಅವರು ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯದ ವೇಳೆ ತಂಡವನ್ನು ಹುರಿದುಂಬಿಸುತ್ತಿದ್ದರು. ತಮಿಳ್ ತಂಡದ ಹ್ಯಾಶ್ ಟ್ಯಾಗ್ #NammaMannuNammaGame ಗಮನ ಸೆಳೆಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood superstar Akshay Kumar sang the National Anthem, as the fifth edition of the Pro Kabaddi League (PKL) began at an almost filled Gachibowli Indoor Stadium here on Friday.
Please Wait while comments are loading...