ಪಿಕೆಎಲ್ 5ː 12 ತಂಡಗಳ ನಾಯಕರುಗಳ ಪರಿಚಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 27:ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ನ ಐದನೇ ಸೀಸನ್ ಪಂದ್ಯಾವಳಿಗಳು ಜುಲೈ 28ರಿಂದ ಆರಂಭವಾಗಲಿದೆ. ಪಿಕೆಎಲ್ 5ರ ಜುಲೈ 28ರಿಂದ ಅಕ್ಟೋಬರ್ 04ರ ತನಕ ನಡೆಯಲಿರುವ ಟೂರ್ನಮೆಂಟ್ ನಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿವೆ. 12 ತಂಡಗಳ ನಾಯಕರುಗಳ ಕಿರು ಪರಿಚಯ ಇಲ್ಲಿದೆ.

ಪ್ರೋ ಕಬಡ್ಡಿ ಲೀಗ್ 5 ಸಂಪೂರ್ಣ ವೇಳಾಪಟ್ಟಿ

ಹರ್ಯಾಣ ಸ್ಟೀಲರ್ಸ್, ತಮಿಳ್ ತಲೈವಾಸ್, ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಹಾಗೂ ಯುಪಿ ಯೋಧ ಹೊಸ ನಾಲ್ಕು ತಂಡಗಳಾಗಿವೆ. 13 ವಾರಗಳ ಕಾಲ 12 ನಗರಗಳಲ್ಲಿ ನಡೆಯಲಿರುವ ಈ ಕಬಡ್ಡಿ ಹಬ್ಬವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

12 ತಂಡಗಳು ಎರಡು ವಲಯಗಳಲ್ಲಿ ವಿಂಗಡಿಸಲಾಗಿದ್ದು, 15 ಅಂತರ ವಲಯ ಹಾಗೂ ಏಳು ಅಂತರ ವಲಯ ತಂಡಗಳಿರುತ್ತದೆ. ಮೂರು ಕ್ವಾಲಿಫೈಯರ್ಸ್ ಹಾಗೂ ಎರಡು ಎಲಿಮಿನೇಷನ್ ಗಳಿರುತ್ತವೆ. ಕಳೆದ ವರ್ಷ ನಾಲ್ಕನೇ ಆವೃತ್ತಿಯ ಟೂರ್ನಿಯಲ್ಲಿ 2 ಕೋಟಿ ಬಹುಮಾನ ಮೊತ್ತ ನೀಡಲಾಗಿತ್ತು. ಈ ವರ್ಷ ಟೂರ್ನಿಯ ಬಹುಮಾನದ ಮೊತ್ತ 6 ಕೋಟಿ ರು. ಏರಿಕೆಯಾಗಿದೆ.

ಪ್ರಶಸ್ತಿ ಗೆಲ್ಲುವ ತಂಡಕ್ಕೆ 3 ಕೋಟಿ ರು. ಲಭಿಸಲಿದೆ. ರನ್ನರ್ ಅಪ್ ತಂಡ 1.8 ಕೋಟಿ ಪಡೆದುಕೊಳ್ಳಲಿದೆ. ಮೂರನೇ ಸ್ಥಾನ ಗಳಿಸಿದ ತಂಡ 1.2 ಕೋಟಿ ರು. ತನ್ನದಾಗಿಸಿಕೊಳ್ಳಲಿದೆ.

1. ಅನೂಪ್ ಕುಮಾರ್ (ಯು ಮುಂಬಾ)

1. ಅನೂಪ್ ಕುಮಾರ್ (ಯು ಮುಂಬಾ)

ಮೊದಲ ಆವೃತ್ತಿಯಿಂದಲೂ ಯು ಮುಂಬಾ ಪರ ನಾಯಕರಾಗಿ ಕಾಣಿಸಿಕೊಂಡಿರುವ ಅನೂಪ್ ಕುಮಾರ್ ಅವರು ಕ್ಯಾಪ್ಟನ್ ಕೂಲ್ ಎಂದೆನಿಸಿಕೊಂಡವರು. ಸೀಸನ್ 3ರಲ್ಲಿ ಯು ಮುಂಬಾ ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟರು. 411 ಅಂಕಗಳಿಸಿರುವ ಅನೂಪ್ ಅವರು 377 ರೈಡ್ ಪಾಯಿಂಟ್ಸ್ ಹೊಂದಿರುವುದು ವಿಶೇಷ.

2. ರಾಹುಲ್ ಚೌಧರಿ (ತೆಲುಗು ಟೈಟನ್ಸ್)

2. ರಾಹುಲ್ ಚೌಧರಿ (ತೆಲುಗು ಟೈಟನ್ಸ್)

ಪ್ರೋ ಕಬಡ್ಡಿ ಲೀಗ್ ನ ಪೋಸ್ಟರ್ ಬಾಯ್ ಎಂದೇ ಜನಪ್ರಿಯತೆ ಗಳಿಸಿರುವ ರಾಹುಲ್ ಚೌಧರಿ ಅವರು ಪಿಕೆಎಲ್ ನ ಅತ್ಯಂತ ಯಶಸ್ವಿ ರೈಡರ್ ಎಂಬುದರಲ್ಲಿ ಎರಡು ಮಾತಿಲ್ಲ. ತೆಲುಗು ಟೈಟನ್ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು. ಟೂರ್ನಮೆಂಟ್ ನ ಆಟಗಾರ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿರುವ ರೋಹಿತ್ 517 ಅಂಕಗಳನ್ನು ಲೀಗ್ ನಲ್ಲಿ ಗಳಿಸಿದ್ದಾರೆ.

3. ಜಸ್ವೀರ್ ಸಿಂಗ್ (ಜೈಪುರ್ ಪಿಂಕ್ ಪ್ಯಾಂಥರ್ಸ್)

3. ಜಸ್ವೀರ್ ಸಿಂಗ್ (ಜೈಪುರ್ ಪಿಂಕ್ ಪ್ಯಾಂಥರ್ಸ್)

ಮೊದಲ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದ ಜಸ್ವೀರ್ ಸಿಂಗ್ ಅವರು ಹಿರಿಯ, ಅನುಭವಿ ಆಟಗಾರ. ಭಾರತದ ಪರ 46 ಪಂದ್ಯಗಳನ್ನಾಡಿದ್ದಾರೆ. ಪಿಕೆಎಲ್ 5ರಲ್ಲಿ ಜೈಪುರ ತಂಡವನ್ನು ಮುನ್ನಡೆಸುತ್ತಿರುವ ಜಸ್ವೀರ್ ಅವರು ಲೀಗ್ ನಲ್ಲಿ 300 ಪ್ಲಸ್ ಅಂಕಗಳನ್ನು ಗಳಿಸಿದ್ದಾರೆ.

ಸುರೇಂದ್ರ ನಾಡಾ (ಹರ್ಯಾಣ ಸ್ಟೀಲರ್ಸ್)

ಸುರೇಂದ್ರ ನಾಡಾ (ಹರ್ಯಾಣ ಸ್ಟೀಲರ್ಸ್)

ಪ್ರೋ ಕಬಡ್ಡಿ ಲೀಗ್ ನಲ್ಲಿ ಉತ್ತಮ ಡಿಫೆಂಡರ್ ಆಗಿರುವ 27 ವರ್ಷ ವಯಸ್ಸಿನ ಸುರೇಂದ್ರ ಅವರು 49ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ. ಎಡ ಭಾಗದಲ್ಲಿ ಡಿಫೆಂಡರ್ ಆಗಿ ಕಾರ್ಯನಿರ್ವಹಿಸುವ ಸುರೇಂದ್ರ 156 ಅಂಕಗಳನ್ನು ಗಳಿಸಿದ್ದಾರೆ. ಈ ಮುಂಚೆ ಬೆಂಗಳೂರು ಬುಲ್ಸ್ ಪರ ಆಡುತ್ತಿದ್ದರು.

ಪ್ರದೀಪ್ ನರ್ವಾಲ್ (ಪಾಟ್ನಾ ಪೈರೇಟ್ಸ್)

ಪ್ರದೀಪ್ ನರ್ವಾಲ್ (ಪಾಟ್ನಾ ಪೈರೇಟ್ಸ್)

ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಅವರು ಪಿಕೆಎಲ್ 5ರಲ್ಲಿ ಪಾಟ್ನಾ ಪೈರೇಟ್ಸ್ ತಂಡದ ನಾಯಕರಾಗಿದ್ದಾರೆ. ಒಟ್ಟಾರೆ, 38 ಪಂದ್ಯಗಳಿಂದ 263 ಅಂಕಗಳನ್ನು ಪ್ರದೀಪ್ ಗಳಿಸಿದ್ದಾರೆ.

6. ರೋಹಿತ್ ಕುಮಾರ್ (ಬೆಂಗಳೂರು ಬುಲ್ಸ್)

6. ರೋಹಿತ್ ಕುಮಾರ್ (ಬೆಂಗಳೂರು ಬುಲ್ಸ್)

ಬೆಂಗಳೂರು ಬುಲ್ಸ್ ತಂಡಕ್ಕೆ ಈ ಬಾರಿ ಹೊಸ ನಾಯಕನಾಗಿ ರೋಹಿತ್ ಕುಮಾರ್ ಕಣಕ್ಕಿಳಿಯುತ್ತಿದ್ದಾರೆ. ಹರಾಜಿನಲ್ಲಿ 81 ಲಕ್ಷಕ್ಕೆ ಬಿಕರಿಯಾದ ರೋಹಿತ್ ಅವರು ಸ್ಟಾರ್ ರೈಡರ್ ಆಗಿದ್ದಾರೆ. ಲೀಗ್ ನಲ್ಲಿ 209 ಅಂಕಗಳನ್ನು ಗಳಿಸಿದ್ದಾರೆ.

7. ಅಜಯ್ ಕುಮಾರ್ ಠಾಕೂರ್ (ತಮಿಳು ತಲೈವಾಸ್)

7. ಅಜಯ್ ಕುಮಾರ್ ಠಾಕೂರ್ (ತಮಿಳು ತಲೈವಾಸ್)

ಭಾರತದ ತಂಡದ ಪ್ರಮುಖ ರೈಡರ್ ಆಗಿರುವ ಹಿಮಾಚಲ ಪ್ರದೇಶ ಮೂಲದ ಅಜಯ್ ಕುಮಾರ್ ಠಾಕೂರ್ ಅವರು ಬೆಂಗಳೂರು ಬುಲ್ಸ್ ನಿಂದ ಹೊರ ಬಂದಿದ್ದು, ಹೊಚ್ಚ ಹೊಸ ತಂಡ ತಮಿಳು ತಲೈವಾಸ್ ಗೆ ನಾಯಕರಾಗಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಈ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ. ಅಜಯ್ ಅವರು 327 ಅಂಕಗಳನ್ನು ಗಳಿಸಿದ್ದಾರೆ.

8 ಸುಕೇಶ್ ಹೆಗ್ಡೆ

8 ಸುಕೇಶ್ ಹೆಗ್ಡೆ

ಹೊಚ್ಚ ಹೊಸ ತಂಡ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡಕ್ಕೆ ಸುಕೇಶ್ ಹೆಗ್ಡೆ ನಾಯಕರಾಗಿದ್ದಾರೆ. ತಂಡದಲ್ಲಿ ಫಜೆಲ್ ಅತ್ರಾಚಲಿಯಂಥ ಡಿಫೆಂಡರ್ ಗಳಿದ್ದಾರೆ.

9 ನಿತಿನ್ ತೋಮಾರ್ (ಯುಪಿ ಯೋಧಾ)

9 ನಿತಿನ್ ತೋಮಾರ್ (ಯುಪಿ ಯೋಧಾ)

ಪ್ರೋ ಕಬಡ್ಡಿ ಲೀಗ್ (5) ನ ಅತ್ಯಂತ ದುಬಾರಿ ಆಟಗಾರ ನಿತಿನ್ ತೋಮಾರ್. ಕಳೆದ ಎರಡು ಸೀಸನ್ ಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ನಿತಿನ್ ಬೇಡಿಕೆ ಕುಗ್ಗಿಲ್ಲ. 93ಲಕ್ಷಕ್ಕೆ ನಿತಿನ್ ರನ್ನು ಹೊಸ ತಂಡ ಯುಪಿ ಯೋಧಾ ಖರೀದಿಸಿ ನಾಯಕನ ಪಟ್ಟ ನೀಡಿದೆ. ಪಿಕೆಎಲ್ ನಲ್ಲಿ 115 ಅಂಕಗಳನ್ನು ನಿತಿನ್ ಹೊಂದಿದ್ದಾರೆ.

10 ಮೀರಜ್ ಶೇಖ್ (ದಬಾಂಗ್ ದೆಲ್ಲಿ)

10 ಮೀರಜ್ ಶೇಖ್ (ದಬಾಂಗ್ ದೆಲ್ಲಿ)

ಇರಾನ್ ಮೂಲದ ಆಟಗಾರ ಮೀರಜ್ ಶೇಖ್ ರನ್ನು ಉಳಿಸಿಕೊಂಡಿರುವ ದಬಾಂಗ್ ದೆಲ್ಲಿ ಅವರಿಗೆ ನಾಯಕನ ಪಟ್ಟ ನೀಡಿದೆ. 42 ಪಂದ್ಯಗಳಲ್ಲಿ 119 ರೈಡ್ ಅಂಕಗಳು ಹಾಗೂ 42 ಡಿಫೆನ್ಸ್ ಅಂಕಗಳನ್ನು ಮೀರಜ್ ಗಳಿಸಿದ್ದಾರೆ.

11. ಜಂಗ್ ಕುನ್ ಲೀ (ಬೆಂಗಾಲ್ ವಾರಿಯರ್ಸ್)

11. ಜಂಗ್ ಕುನ್ ಲೀ (ಬೆಂಗಾಲ್ ವಾರಿಯರ್ಸ್)

ಕೊರಿಯಾ ಮೂಲದ ಜಂಗ್ ಕುನ್ ಲೀ ಅವರನ್ನು ತಂಡದಲ್ಲಿ ಉಳಿಸಿಕೊಂಡು ನಾಯಕರಾಗಿ ನೇಮಿಸಲಾಗಿದೆ. ಬೆಂಗಾಲ್ ವಾರಿಯರ್ಸ್ ಪರ 51 ಪಂದ್ಯಗಳಲ್ಲಿ 262 ಅಂಕಗಳನ್ನು ಪಡೆದಿದ್ದಾರೆ. 80.30 ಲಕ್ಷ ಮೌಲ್ಯವನ್ನು ಕುನ್ ಲೀ ಹೊಂದಿದ್ದಾರೆ.

12. ದೀಪಕ್ ನಿವಾಸ್ ಹೂಡಾ (ಪುಣೇರಿ ಪಲ್ಟನ್)

12. ದೀಪಕ್ ನಿವಾಸ್ ಹೂಡಾ (ಪುಣೇರಿ ಪಲ್ಟನ್)

ಮಂಜಿತ್ ಚಿಲ್ಲರ್ ಅನುಪಸ್ಥಿತಿಯಲ್ಲಿ ಯುವ ರೈಡರ್ ದೀಪಕ್ ನಿವಾಸ್ ಹೂಡಾಗೆ ಪುಣೇರಿ ಪಲ್ಟನ್ ತಂಡದ ನಾಯಕರಾಗುವ ಅವಕಾಶ ಒದಗಿ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The highly anticipated fifth season of the Pro Kabaddi League (PKL) will start from Friday (July 28) which is going to be bigger and better this time. Meet the captains of all 12 teams.
Please Wait while comments are loading...