ಕಬಡ್ಡಿ: ತೆಲುಗು ಟೈಟನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಭರ್ಜರಿ ಜಯ

Posted By:
Subscribe to Oneindia Kannada

ಹೈದರಾಬಾದ್, ಜುಲೈ 31: ಐದನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಪಂದ್ಯವಾಳಿಯ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಬಲಿಷ್ಠ ತೆಲುಗು ಟೈಟನ್ಸ್ ತಂಡವನ್ನು ಅದರ ತವರು ನೆಲದಲ್ಲೇ ಬಗ್ಗು ಬಡಿದಿದೆ.

ಹೊಸ ನಾಯಕ ರೋಹಿತ್ ಕುಮಾರ್ ಅವರ ಭರ್ಜರಿ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ಶುಭಾರಂಭ ಮಾಡಿದೆ. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಬುಲ್ಸ್ ತಂಡಕ್ಕೆ ನಾಯಕ ರೋಹಿತ್ ತಮ್ಮ ರೈಡ್ ಮೂಲಕ ಅಂಕಗಳನ್ನು ತಂದುಕೊಡುತ್ತಾ ಹೋದರು. ರೋಹಿತ್ ಗೆ ಸಾಥ್ ನೀಡಿದ ಅಜಯ್ ಕುಮಾರ್ ಅವರು ಈ ಪಂದ್ಯದಲ್ಲಿ 7 ಅಂಕ ಸಂಪಾದಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

Pro Kabaddi League 2017: Bengaluru Bulls sail over Telugu Titans

ಬೆಂಗಳೂರು ಬುಲ್ಸ್ 31 - 21 ತೆಲುಗು ಟೈಟನ್ಸ್ ಅಂತರದಲ್ಲಿ ಪಂದ್ಯ ಮುಕ್ತಾಯವಾದಾಗ ಹೈದರಾಬಾದಿನ ಅಭಿಮಾನಗಳು ಬೆರಗಾದರು.


ಪಂದ್ಯ ಆರಂಭವಾದ 10 ನಿಮಿಷಕ್ಕೆ ಆಲೌಟ್ ಆದ ತೆಲುಗು ತಂಡ ಮತ್ತೆ ಅಂಕ ಗಳಿಸಲು ಪ್ರಯಾಸ ಪಡಬೇಕಾಯಿತು. ಬುಲ್ಸ್ ತಂಡ ರೈಡಿಂಗ್‌ನಲ್ಲಿ 17 ಹಾಗೂ ಟ್ಯಾಕಲ್‌ನಲ್ಲಿ 9 ಪಾಯಿಂಟ್ಸ್ ಗಳಿಸಿತು.

ತೆಲುಗು ಟೈಟನ್ಸ್ ತಂಡದ ನಾಯಕ, ಸ್ಟಾರ್ ಆಟಗಾರ ರಾಹುಲ್ ಚೌಧರಿ ಅವರು ಪ್ರೋ ಕಬಡ್ಡಿ ಲೀಗ್ ನಲ್ಲಿ 500 ಪಾಯಿಂಟ್ಸ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಆದರೆ, ಪಿಕೆಎಲ್ 05ರ ಉದ್ಘಾಟನಾ ಪಂದ್ಯದಲ್ಲಿ ಹೊಸ ತಂಡ ತಮಿಳ್ ತಲೈವಾ ವಿರುದ್ಧ ಗೆಲುವು ಸಾಧಿಸಿದ ಬಳಿಕ ತೆಲುಗು ಟೈಟನ್ಸ್ ತಂಡ ಸತತ ಎರಡು ಸೋಲು ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
aptain Rohit Kumar inspired Bengaluru Bulls to a comprehensive 31-21 victory over Telugu Titans, who suffered second consecutive loss in three matches in the fifth edition of the Pro Kabaddi League (PKL) here on Sunday (July 30).
Please Wait while comments are loading...