ಕಬಡ್ಡಿ: ಬೆಂಗಾಲ್ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್

Posted By:
Subscribe to Oneindia Kannada

ನಾಗ್ಪುರ, ಆಗಸ್ಟ್ 10 : ಅಜಯ್ ಕುಮಾರ್ ಹಾಗೂ ರೋಹಿತ್ ಕುಮಾರ್ ಅವರ ಸೂಪರ್ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ಗೆಲುವಿನ ನಗೆ ಬೀರಿದೆ.

ಕಬಡ್ಡಿ: ತೆಲುಗು ಟೈಟನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಭರ್ಜರಿ ಜಯ

ಇಲ್ಲಿನ ಮಣಕಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಬುಲ್ಸ್ 31-25 ಅಂಕಗಳಿಂದ ಮಣಿಸಿತು. ಈ ಮೂಲಕ ಸತತ ಎರಡು ಜಯ ಗಳಿಸಿದ್ದ ವಾರಿಯರ್ಸ್ ಹ್ಯಾಟ್ರಿಕ್ ಜಯಕ್ಕೆ ಬೆಂಗಳೂರು ಬುಲ್ಸ್ ಬ್ರೇಕ್ ಹಾಕಿತು.

Pro Kabaddi 2017: Bengaluru Bulls to wins over Bengal Warriors

ಆರಂಭದಿಂದಲೂ ಎರಡು ತಂಡಗಳು ಸಮಬಲದ ಹೋರಾಟ ನಡೆಸಿದ್ದವು. ಅಜಯ್ ಕುಮಾರ್ ಅವರಿಗೆ ಉತ್ತಮ ಸಾಥ್ ನೀಡಿದ ನಾಯಕ ರೋಹಿತ್ ಕುಮಾರ್‌ ಬೆಂಗಾಲ್ ವಾರಿಯರ್ಸ್ ತಂಡವನ್ನು ಕಟ್ಟಿ ಹಾಕಿದರು.

ಈ ಗೆಲುವಿನಿಂದ ನಿರಂತರ ಎರಡು ಸೋಲು ಮತ್ತು ಒಂದು ಟೈ ಮೂಲಕ ನಿರಾಸೆಗೊಂಡಿದ್ದ ಬುಲ್ಸ್ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿತು.

Pro Kabaddi Good Starts From Telugu Titans And Puneri Paltan | Oneindia Kannada

ಬೆಂಗಳೂರು ಬುಲ್ಸ್ ಆಡಿದ ಒಟ್ಟು 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು 2 ಸೋಲುಕಂಡು ಒಂದರಲ್ಲಿ ಡ್ರಾ ಸಾಧಿಸುವ ಮೂಲಕ 19 ಅಂಕಗಳೊಂದಿಗೆ 'ಬಿ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru Bulls beat Bengal Warriors 31-25 in a pulsating encounter. It was Ajay Kumar and Rohit Kumar, who led the Bulls to a superb victory. Bulls now top the table with 19 points while Warriors are fourth with 11 points.
Please Wait while comments are loading...