ರಿಯೋ ಒಲಿಂಪಿಕ್ಸ್ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 29: ರಿಯೋ ಒಲಂಪಿಕ್ಸ್ ನಲ್ಲಿ ಸಾಧನೆ ಮಾಡಿದ ನಾಲ್ವರು ಕ್ರೀಡಾಪಟುಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿದರು.

ವಿವಿಧ ವಿಭಾಗಗಳ ಕ್ರೀಡಾ ಸಾಧಕರುಗಳಿಗೂ ದ್ರೋಣಾಚಾರ್ಯ, ಅರ್ಜುನ ಮತ್ತು ಧ್ಯಾನಚಂದ್ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ಪಿ.ಸಿಂಧು, ಕುಸ್ತಿ ಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತು ಶೂಟರ್ ಜೀತು ರಾಯ್ ಅವರಿಗೆ ಪ್ರಣಬ್ ಮುಖರ್ಜಿ ಖೇಲ್ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. [ರಿಯೋ ಒಲಿಂಪಿಕ್ಸ್ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ]

ಪಿವಿ ಸಿಂಧು ಅವರು ಬೆಳ್ಳಿ ಪದಕ ಗೆದ್ದಿದ್ದರೆ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಪಡೆದುಕೊಂಡಿದ್ದಾರೆ. ಜಿತು ರೈ ಅವರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಕನ್ನಡದ ಕಲಿ ಹಾಕಿ ಆಟಗಾರ ವಿ ರಘುನಾಥ್ ಗೆ ಅರ್ಜುನ ಪ್ರಶಸ್ತಿ, ಒಟ್ಟು 15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ. [ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

6 ಜನರಿಗೆ ದ್ರೋಣಾಚಾರ್ಯ ಪ್ರಶಸ್ತಿ, 3 ಜನರಿಗೆ ಧ್ಯಾನ್ ಚಂದ್ ಪ್ರಶಸ್ತಿ, 4 ಸಂಸ್ಥೆಗಳಿಗೆ ರಾಷ್ಟ್ರೀಯ ಖೆಲ್ ಪ್ರೋತ್ಸಾಹಣ ಪುರಸ್ಕರ್ ಲಭಿಸಿದೆ.

ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಿರುವ ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಮೊಟ್ಟ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿ, ಮೊದಲ ಪ್ರಯತ್ನದಲ್ಲೇ ಜಿಮ್ನಾಸ್ಟ್ ನ ಪ್ರುಡನೋವಾ ವಲ್ಟ್ ವಿಭಾಗದ ಫೈನಲ್ ಪ್ರವೇಶಿಸಿದ್ದರು. ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ವಿವಿಧ ವಿಭಾಗಗಳ ಕ್ರೀಡಾ ಸಾಧಕರು

ವಿವಿಧ ವಿಭಾಗಗಳ ಕ್ರೀಡಾ ಸಾಧಕರು

6 ಜನರಿಗೆ ದ್ರೋಣಾಚಾರ್ಯ ಪ್ರಶಸ್ತಿ, 3 ಜನರಿಗೆ ಧ್ಯಾನ್ ಚಂದ್ ಪ್ರಶಸ್ತಿ, 4 ಸಂಸ್ಥೆಗಳಿಗೆ ರಾಷ್ಟ್ರೀಯ ಖೆಲ್ ಪ್ರೋತ್ಸಾಹಣ ಪುರಸ್ಕರ್ ಲಭಿಸಿದೆ.

15 ಸಾಧಕರಿಗೆ ಅರ್ಜುನ ಪ್ರಶಸ್ತಿಗಳು

15 ಸಾಧಕರಿಗೆ ಅರ್ಜುನ ಪ್ರಶಸ್ತಿಗಳು

ಕ್ರಿಕೆಟ್ ಪಟು ಅಂಜಿಕ್ಯ ರೆಹಾನೆ, ಬಾಕ್ಸರ್ ಶಿವಥಾಪ, ಅಥ್ಲೀಟ್ ಲಲಿತಾ ಬಬರ್, ಹಾಕಿ ಆಟಗಾರರಾದ ವಿ.ಆರ್.ರಘುನಾಥ್ ಮತ್ತು ರಾಣಿ ರಾಮ್ಪಾಲ್ ಅರ್ಜುನ ಪ್ರಶಸ್ತಿಗಳನ್ನು ಪಡೆದವರಲ್ಲಿ ಪ್ರಮುಖರಾಗಿದ್ದಾರೆ.ಚಿತ್ರದಲ್ಲಿ ಜಿತು ರೈ

ದ್ರೋಣಾಚಾರ್ಯ ಪ್ರಶಸ್ತಿ

ದ್ರೋಣಾಚಾರ್ಯ ಪ್ರಶಸ್ತಿ

ಬಾಡ್ಮಿಂಟನ್ ಕೋಚ್ ಪುಲ್ಲೇಲ್ಲ ಗೋಪಿಚಂದ್, ಕನ್ನಡಿಗ ಪ್ರದೀಪ್ ಕುಮಾರ್ (ಈಜು), ನಾಗಪುರಿ ರಮೇಶ್ (ಅಥ್ಲೆಟಿಕ್ಸ್), ಸಾಗರ್ ಮಲ್ ದಯಾಳ್ (ಬಾಕ್ಸಿಂಗ್), ಬಿಶ್ವೇಶ್ವರ ನಂದಿ (ಕುಸ್ತಿ) ಹಾಗೂ ರಾಜ್ಕುಮಾರ್ ಶರ್ಮ (ಕ್ರಿಕೆಟ್) ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಕೊಡ ಮಾಡಲಾಗಿದೆ. ಚಿತ್ರದಲ್ಲಿ ಪಿವಿ ಸಿಂಧು

ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್

ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್

ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮ ಸಾಧನೆ ತೋರಿರುವ ತ್ರಿಪುರಾದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಮೊಟ್ಟ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿ, ಮೊದಲ ಪ್ರಯತ್ನದಲ್ಲೇ ಜಿಮ್ನಾಸ್ಟ್ ನ ಪ್ರುಡನೋವಾ ವಲ್ಟ್ ವಿಭಾಗದ ಫೈನಲ್ ಪ್ರವೇಶಿಸಿದ್ದರು. ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಜೀವಿತಾವಧಿ ಸಾಧನೆ ಪ್ರಶಸ್ತಿ

ಜೀವಿತಾವಧಿ ಸಾಧನೆ ಪ್ರಶಸ್ತಿ

ಕ್ರಿಕೆಟ್ ಪಟು ಅಂಜಿಕ್ಯ ರೆಹಾನೆ, ಬಾಕ್ಸರ್ ಶಿವಥಾಪ, ಅಥ್ಲೀಟ್ ಲಲಿತಾ ಬಬರ್, ಹಾಕಿ ಆಟಗಾರರಾದ ವಿ.ಆರ್.ರಘುನಾಥ್ ಮತ್ತು ರಾಣಿ ರಾಮ್ಪಾಲ್ ಅರ್ಜುನ ಪ್ರಶಸ್ತಿಗಳನ್ನು ಪಡೆದವರಲ್ಲಿ ಪ್ರಮುಖರಾಗಿದ್ದಾರೆ.

ಸತ್ತಿ ಗೀತಾ (ಅಥ್ಲೆಟಿಕ್), ಸಿಲ್ವನಸ್ ಡುಂಗ್ ಡುಂಗ್ (ಹಾಕಿ) ಹಾಗೂ ರಾಜೇಂದ್ರ ಪ್ರಹ್ಲಾದ್ ಶೆಲ್ನೆ (ರೋಯಿಂಗ್) ಇವರು ಧ್ಯಾನ್ಚಂದ್ ಜೀವಿತಾವಧಿ ಸಾಧನೆ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Rio Olympics 2016 medallists PV Sindhu and Sakshi Malik along with Olympians Dipa Karmakar and Jitu Rai were on Monday, Aug 29, conferred Rajiv Gandhi Khel Ratna award by President Pranab Mukherjee at Rashtrapati Bhawan here.
Please Wait while comments are loading...