ಅಝ್ಲಾನ್ ಶಾ ಕಪ್ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 12 : ಮಲೇಷ್ಯಾದಲ್ಲಿ ಏಪ್ರಿಲ್ 29ರಿಂದ ಆರಂಭವಾಗಲಿರುವ ಅಝ್ಲಾನ್ ಶಾ ಹಾಕಿ ಪುರುಷರ ಟೂರ್ನಿಗೆ ಪಿ ಆರ್ ಶ್ರೀಜೇಶ್ ನಾಯಕತ್ವದ 18 ಸದಸ್ಯರ ಭಾರತ ಹಾಕಿ ತಂಡವನ್ನು ಆಯ್ಕೆ ಮಾಡಲಾಗಿದೆ.

ಭಾರತದ ಜೂನಿಯರ್ ಹಾಕಿ ತಂಡದ ಹೆಚ್ಚಿನ ಸಂಖ್ಯೆಯ ಆಟಗಾರರಿಗೆ ಅಝ್ಲಾನ್ ಶಾ ಹಾಕಿ ಟೂರ್ನಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿಕೊಡಲಾಗಿದೆ. ಜೂನಿಯರ್ ವಿಶ್ವಕಪ್ ವಿಜೇತ ತಂಡದ ಆಟಗಾರ ಮನ್ ಪ್ರಿತ್ ಸಿಂಗ್ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

PR Sreejesh to lead India in 26th Sultan Azlan Shah Cup

ಕಿರಿಯ ತಂಡದ ಗುರಿಂದರ್ ಸಿಂಗ್, ಸುಮಿತ್, ಮನ್ ದೀಪ್ ಸಿಂಗ್ ಜೂನಿಯರ್ ವಿಶ್ವಕಪ್ ವಿಜೇತ ತಂಡದ ನಾಯಕ ರ್ಹೀತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮುಂಬೈನ 21ರ ಪ್ರಾಯದ ಗೋಲ್ ಕೀಪರ್ ಸೂರಜ್ ಕರ್ಕೇರ್ ತಂಡಕ್ಕೆ ಆಯ್ಕೆಯಾಗಿರುವುದು ವಿಶೇಷವಾಗಿದೆ.

ಭಾರತದ ಪುರಷರ ಹಾಕಿ ತಂಡದ ಕೋಚ್ ರೊಲ್ಯಾಟ್ ಒಲ್ಟಮನ್ಸ್ ಅವರು, ಮುಂಬರುವ 2018 ವಿಶ್ವಕಪ್ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್ ದೃಷ್ಟಿಯಿಂದ ಹೆಚ್ಚಿನ ಕಿರಿಯ ಆಟಗಾರರಿಗೆ ಹಿರಿಯರ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಇದರಿಂದ ಅಝ್ಲಾನ್ ಶಾ ಹಾಕಿ ಟೂರ್ನಿಗೆ ಭಾರತ ತಂಡ ಹಿರಿಯ ಮತ್ತು ಕಿರಿಯ ಆಟಗಾರರಿಂದ ಕೂಡಿದೆ.

ತಂಡ ಇಂತಿದೆ:

ಗೋಲ್ ಕೀಪರ್ ಗಳು: ಪಿ ಆರ್ ಶ್ರೀಜೇಶ್ (ನಾಯಕ), ಸೂರಜ್ ಕರ್ಕೇರ್.
ಡಿಫೆಂಡರ್ ಗಳ: ಪ್ರದೀಪ್ ಮೋರ್, ಸರೇಂದ್ರ ಕುಮಾರ್, ರೂಪಿಂದರ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಗುರಿಂದರ್ ಸಿಂಗ್.
ಮಿಡ್ ಫಿಲ್ಡರ್ಸ್: ಚಿಂಗ್ಗೆಸನಾ ಸಿಂಗ್, ಸುಮಿತ್, ಸರ್ದಾರ್ ಸಿಂಗ್, ಮನ್ ಪ್ರೀತ್ ಸಿಂಗ್ (ಉಪನಾಯಕ), ರ್ಹಿತ್ ಸಿಂಗ್, ಮನ್ ಪ್ರಿತ್.
ಫಾರ್ವರ್ಡ್ ಗಳು: ಎಸ್ ವಿ ಸುನೀಲ್, ತಲ್ವಿಂದರ್ ಸಿಂಗ್, ಮನ್ ದೀಪ್ ಸಿಂಗ್, ಯೂಸುಫ್, ಆಕಾಶ್ ದೀಪ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran goalkeeper PR Sreejesh will lead the 18-member Indian men's hockey squad at the 26th Sultan Azlan Shah Cup, beginning April 29 in Ipoh, Malaysia.
Please Wait while comments are loading...