ಫ್ರಾನ್ಸ್ ಮಣಿಸಿ ಯುರೋ 2016 ಗೆದ್ದ ಪೋರ್ಚುಗಲ್

Posted By:
Subscribe to Oneindia Kannada

ಪ್ಯಾರೀಸ್, ಜುಲೈ 11: ಪೋರ್ಚುಗಲ್ ತಂಡದ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಾಯಗೊಂಡು ನಿವೃತ್ತರಾದರು ಎಂಬ ಸುದ್ದಿ ಹಬ್ಬುತ್ತಿದ್ದಂತೆ ಫ್ರಾನ್ಸ್ ಕಡೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬ ಮಾತು ಕೇಳಿ ಬಂದಿತು. ಆದರೆ, ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಚಿನ್ನದ ಗೋಲು ಬಾರಿಸುವ ಮೂಲಕ ಅತಿಥೇಯ ತಂಡವನ್ನು ಏಕೈಕ ಗೋಲಿನಿಂದ ಮಣಿಸಿ ಪೋರ್ಚುಗಲ್ ಯುರೋ 2016 ಚಾಂಪಿಯನ್ ಆಗಿದೆ.

ಪೋರ್ಚ್‌ಗಲ್‌ ನ ಪಾಲಿಗೆ ಬದಲಿ ಆಟಗಾರ ಎಡೇರ್ ಗಳಿಸಿದ ಗೋಲು ಇತಿಹಾಸ ಸೃಷ್ಟಿಸಿತು. ಪಂದ್ಯದ 109ನೇ ನಿಮಿಷದಲ್ಲಿ ಜೊ ಮಾಟಿನ್ಹೋ ಕೊಟ್ಟ ಪಾಸ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಪೋರ್ಚುಗಲ್ ತಂಡಕ್ಕೆ ಮೊಟ್ಟಮೊದಲ ಯುರೋ ಕಪ್ ತಂದು ಕೊಟ್ಟರು.

Portugal beat hosts France 1-0 to win Euro 2016 title

ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪಂದ್ಯದ ಮೊದಲರ್ಧದಲ್ಲೇ ಗಾಯಗೊಂಡು ಕಣ್ಣೀರಿಡುತ್ತಾ ಮೈದಾನದಿಂದ ಹೊರಕ್ಕೆ ಹೋಗಬೇಕಾಯಿತು. ಇದರ ಲಾಭ ಪಡೆದ ಫ್ರಾನ್ಸ್ ತಂಡ ಉತ್ತಮ ದಾಳಿ ನಡೆಸಿತು. ಪೋರ್ಚುಗಲ್ ಪರ ನಾನಿ ಪ್ರತಿದಾಳಿ ನಡೆಸಿದರು. ಫೈನಲ್ ಪಂದ್ಯದ ಸಂಪೂರ್ಣ ಮುಖ್ಯಾಂಶಗಳನ್ನು ಈ ವಿಡಿಯೋದಲ್ಲಿ ನೋಡಿ

ಮೂರನೇ ಬಾರಿಗೆ ಯೂರೊ ಕಪ್ ಗೆಲ್ಲುವ ಆಸೆ ಇರಿಸಿಕೊಂಡಿದ್ದ ಫ್ರಾನ್ಸ್ ಗೆ ಆಘಾತವಾಗಿದೆ. ಯುರೋ 1984, ಯುರೋ 2000 ಹಾಗೂ 2006ರ ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಂತದಲ್ಲಿ ಪೋರ್ಚುಗಲ್ ಮಣಿಸಿದ ದಾಖಲೆ ಹೊಂದಿರುವ ಫ್ರಾನ್ಸ್ ತಂಡ ತನ್ನ ತವರು ನೆಲದಲ್ಲೇ ಮುಖಭಂಗ ಅನುಭವಿಸಿದೆ. ಆದರೆ, ಟೂರ್ನಿಯಲ್ಲಿ ಗಿಜ್ಮನ್, ಪಾಯೆಟ್ ರಂಥ ಆಟಗಾರರು ಮತ್ತೆ ಲಯಕ್ಕೆ ಬಂದಿರುವುದು ಅಭಿಮಾನಿಗಳಿಗೆ ಹರ್ಷ ತಂದಿದೆ.

-
-
-
-
-
ಫ್ರಾನ್ಸ್ ಮಣಿಸಿ ಯುರೋ 2016 ಗೆದ್ದ ಪೋರ್ಚುಗಲ್

ಫ್ರಾನ್ಸ್ ಮಣಿಸಿ ಯುರೋ 2016 ಗೆದ್ದ ಪೋರ್ಚುಗಲ್

-
-
-
-
-
-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ronaldo-less Portugal, which had never won any major soccer tournament title, upset hosts France 1-0 in the extra time of the breathtaking Euro 2016 final on Sunday night.
Please Wait while comments are loading...