ಸಾಕ್ಷಿ ಸಾಧನೆಗೆ ಬಹುಪರಾಕ್ ಎಂದ ಪ್ರಧಾನಿ ಮೋದಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 18: ಭಾರತದ ಪಾಲಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಚೊಚ್ಚಲ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್'ಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಶುಭ ಹಾರೈಕೆ ಸಂದಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಹನ್ನೆರಡು ದಿನಗಳು ಕಳೆದು ಇನ್ನೇನು ಭಾರತದ ಕ್ರೀಡೆಗಳು ಮುಕ್ತಾಯಗೊಂಡವು, ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತಿದ್ದ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸುವಲ್ಲಿ ಸಾಕ್ಷಿ ಮಲಿಕ್ ಸಾಕ್ಷಿಯಾಗಿದ್ದಾರೆ.

ಸಾಕ್ಷಿಯ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ. ಭಾರತ ಪರ ಮೊದಲ ಪದಕ ಗಳಿಸಿದ ಕುಸ್ತಿಪಟು ಸಾಕ್ಷಿ ಮಲಿಕ್ ಗೆ ಪ್ರಧಾನಿ ನರೇಂದ್ರ ಮೋದಿ ಹಾಗು ಭಾರತದ ಪ್ರಥಮ ಪ್ರಜೆ ಪ್ರಣವ್ ಮುಖರ್ಜಿ ಅವರು ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದಾರೆ.

ನಿಮ್ಮ ಈ ಅಭೂತಪೂರ್ವ ಸಾಧನೆ ಮುಂಬರುವ ದಿನಗಳಲ್ಲಿ ಭಾರತದ ಇತರ ಕ್ರೀಡಾಪಟುಗಳಿಗೂ ಪ್ರೇರಣೆಯಾಗಲಿದೆ ಎಂದು ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿರನ್ನು ಅಭಿನಂದಿಸಿದ್ದಾರೆ.

ಸಾಕ್ಷಿ ಜತೆಗಿರುವ ಮೋದಿ ಫೋಟೊ

ಸಾಕ್ಷಿ ಜತೆಗಿರುವ ಮೋದಿ ಫೋಟೊ

ರಿಯೋ ಒಲಿಂಪಿಕ್ಸ್ ಗೆ ಹೊರಡುವ ಮುನ್ನ ಪ್ರಧಾನಿ ಮೋದಿ ಅವರನ್ನು ಸಾಕ್ಷಿ ಭೇಟಿ ಮಾಡಿದ್ದರು. ಮೋದಿ ಅವರ ಜತೆಗಿನ ಫೋಟೊ ಮತ್ತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ.

ಸಾಕ್ಷಿ ಭಾರತದ ಹೆಮ್ಮೆಯ ಪುತ್ರಿ ಎಂದ ಮೋದಿ

ಸಾಕ್ಷಿ ಭಾರತದ ಹೆಮ್ಮೆಯ ಪುತ್ರಿ ಎಂದ ಪ್ರಧಾನಿ ನರೇಂದ್ರ ಮೋದಿ, ರಕ್ಷಾಬಂಧನ್ ಶುಭ ದಿನದಂದು ಶುಭ ಸುದ್ದಿ ಸಿಕ್ಕಿದೆ ಎಂದಿದ್ದಾರೆ

ಇತಿಹಾಸ ಸೃಷ್ಟಿಸಿದ ಸಾಕ್ಷಿಗೆ ಶುಭ ಹಾರೈಕೆ

ಇತಿಹಾಸ ಸೃಷ್ಟಿಸಿದ ಸಾಕ್ಷಿಗೆ ಶುಭ ಹಾರೈಕೆ ಎಂದು ಕಂಚಿನ ಪದಕ ವಿಜೇತೆಯನ್ನು ಅಭಿನಂದಿಸಿದ ಮೋದಿ.

ಪ್ರಥಮ ಪ್ರಜೆ ಪ್ರಣಬ್ ರಿಂದ ಟ್ವೀಟ್

ಪ್ರಥಮ ಪ್ರಜೆ ಪ್ರಣಬ್ ಅವರ ರಾಷ್ಟ್ರಪತಿ ಭವನ ಅಧಿಕೃತ ಟ್ವೀಟ್ ಖಾತೆಯಿಂದ ಶುಭ ಹಾರೈಕೆ ಸಂದೇಶ.

ಹರ್ಯಾಣದ ಸಿಎಂ ಖಟ್ಟಾರ್ ಅವರ ಪ್ರತಿಕ್ರಿಯೆ

ಹರ್ಯಾಣದ ಸಿಎಂ ಖಟ್ಟಾರ್ ಅವರ ಪ್ರತಿಕ್ರಿಯೆ ನೀಡಿದ್ದು ಹೀಗೆ.. ಆದರೆ, ಸಾಕ್ಷಿ ಬಗ್ಗೆ ಖಟ್ಟಾರ್ ಅವರ ಅಧಿಕೃತ ಟ್ವೀಟ್ ಖಾತೆಯಿಂದ ಯಾವುದೇ ಸಂದೇಶ ಬಂದಿಲ್ಲ. ಈ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime minister Narendra Modi and President Pranab Mukherjee has greeted Indian women wrestler Sakshi Malik, for winning bronze medal in Rio Olympics 2016.
Please Wait while comments are loading...