ಮೋದಿಯಿಂದ 4 ಕೋಟಿ ರು ಪಡೆದ ಅಥ್ಲೀಟ್ ದೀಪಾ

Posted By:
Subscribe to Oneindia Kannada

ಗುರುಗ್ರಾಮ, ನವೆಂಬರ್ 02: ಭಾರತದ ಅಥ್ಲೀಟ್ ದೀಪಾ ಮಲಿಕ್ ಅವರು ಪ್ಯಾರಾಲಿಂಪಿಕ್ಸ್ ಹೊಸ ಇತಿಹಾಸ ಬರೆದ ಸಾಧನೆಯನ್ನು ಗುರುಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ರಿಯೋ 2016ರಲ್ಲಿ ಪದಕ ಬೆಳ್ಳಿ ಗೆದ್ದ ದೀಪಾ ಅವರನ್ನು ಹರ್ಯಾಣ ಸರ್ಕಾರದ ವತಿಯಿಂದ ಪ್ರಧಾನಿ ಮೋದಿ ಅವರು ಸತ್ಕರಿಸಿದ್ದು ವಿಶೇಷವಾಗಿತ್ತು.

ರಿಯೋ 2016 ಪ್ಯಾರಾಲಿಂಪಿಕ್ಸ್ ನ ಶಾಟ್ ಪುಟ್ ವಿಭಾಗದ ಎಫ್ 33 ಸ್ಪರ್ಧೆಯಲ್ಲಿ ದೀಪಾ ಮಲಿಕ್ ಅವರು ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಸಾಧನೆ ಮಾಡಿದ್ದಾರೆ.

ಹರ್ಯಾಣ ರಾಜ್ಯದ ಸ್ವರ್ಣ ಮಹೋತ್ಸವ ಸಮಾರಂಭ (ನವೆಂಬರ್ 01)ದಲ್ಲಿ ಈ ಸಾಧಕಿಯನ್ನು ಸನ್ಮಾನಿಸಿ ಮೊದಲೇ ಘೋಷಿಸಿದಂತೆ 4 ಕೋಟಿ ರು ನಗದು ಪ್ರೋತ್ಸಾಹ ಬಹುಮಾನವನ್ನು ನೀಡಲಾಗಿದೆ. (ಐಎಎನ್ಎಸ್)

ಸ್ವರ್ಣ ಜಯಂತಿ ಉತ್ಸವದಲ್ಲಿ ಪ್ರಧಾನಿ ಮೋದಿ

ಸ್ವರ್ಣ ಜಯಂತಿ ಉತ್ಸವದಲ್ಲಿ ಪ್ರಧಾನಿ ಮೋದಿ

ಈ ಸಮಾರಂಭದಲ್ಲಿ ಹರ್ಯಾಣದ ರಾಜ್ಯಪಾಲ ಕಪ್ತಾನ್ ಸಿಂಗ್ ಸೋಲಂಕಿ, ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಹರ್ಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದರು.

4 ಕೋಟಿ ರು ಪಡೆದ ಅಥ್ಲೀಟ್ ದೀಪಾ

4 ಕೋಟಿ ರು ಪಡೆದ ಅಥ್ಲೀಟ್ ದೀಪಾ

ರಿಯೋ 2016 ಪ್ಯಾರಾಲಿಂಪಿಕ್ಸ್ ನ ಶಾಟ್ ಪುಟ್ ವಿಭಾಗದ ಎಫ್ 33 ಸ್ಪರ್ಧೆಯಲ್ಲಿ ದೀಪಾ ಮಲಿಕ್ ಅವರು ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಸಾಧನೆ ಮಾಡಿದ್ದಾರೆ.

ಕೈಲಾಶ್ ಖೇರ್ ಅವರಿಂದ ಸಂಗೀತ ಕಾರ್ಯಕ್ರಮ

ಕೈಲಾಶ್ ಖೇರ್ ಅವರಿಂದ ಸಂಗೀತ ಕಾರ್ಯಕ್ರಮ

ಗುರುಗ್ರಾಮದಲ್ಲಿ ನಡೆದ ಹರ್ಯಾಣ ಸ್ವರ್ಣ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಅವರ ಗಾಯನ PTI Photo by Vijay Verma

ಸ್ವರ್ಣ ಜಯಂತಿ ಪ್ರದರ್ಶನ ಗ್ಯಾಲರಿ ವೀಕ್ಷಣೆ

ಸ್ವರ್ಣ ಜಯಂತಿ ಪ್ರದರ್ಶನ ಗ್ಯಾಲರಿ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿ, ಸಿಎಂ ಮನೋಹರ್ ಲಾಲ್ ಖತ್ತರ್ ಹಾಗೂ ರಾಜ್ಯಪಾಲ ಕಪ್ತಾನ್ ಸಿಂಗ್ ಸೋಲಂಕಿ ಅವರಿಂದ ಸ್ವರ್ಣ ಜಯಂತಿ ಪ್ರದರ್ಶನ ಗ್ಯಾಲರಿ ವೀಕ್ಷಣೆ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

ಹರ್ಯಾಣ ಸ್ವರ್ಣ ಜಯಂತಿ ಉತ್ಸವದಲ್ಲಿ ಪ್ರಧಾನಿ ಅವಾಸ್ ಯೋಜನೆಯ ಚಾಲನೆ, ಗೀತ ಗಾಯನದ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ಮೇಳೈಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Tuesday (Nov 1) honoured Rio Paralympics silver medallist Deepa Malik by giving her a cash award of Rs. 4 crore in a function organised to kick off the year-long Haryana golden jubilee celebrations in the state.
Please Wait while comments are loading...