ಟೀಂ ಇಂಡಿಯಾ ಬಗ್ಗೆ 'ಮನ್ ಕಿ ಬಾತ್'ನಲ್ಲಿ ಮೋದಿ ಮನದಾಳದ ಮಾತು

Written By:
Subscribe to Oneindia Kannada

ನವದೆಹಲಿ, ಡಿಸೆಂಬರ್. 25 : ಪ್ರಸಕ್ತ ವರ್ಷದಲ್ಲಿ ಭಾರತದ ಕ್ರೀಡಾಪಟುಗಳು ಮಾಡಿರುವ ಸಾಧನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2016ರ ಕೊನೆಯ 'ಮನ್ ಕಿ ಬಾತ್' ಭಾನುವಾರದ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.

ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ದೇಶಕ್ಕೆ ಖ್ಯಾತಿ ತಂದಿದ್ದಾರೆ. ಕರುಣ್ ನಾಯರ್ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸಾಧನೆಯನ್ನಂತೂ ಮನದುಂಬಿ ಪ್ರಶಂಸಿದರು.

ಇಂಗ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡ 4-0 ಗೆಲುವು ಸಾಧಿಸಿದ್ದು ಸಂತಸದ ಸುದ್ದಿ ಎಂದು ಮನ್ ಕೀ ಬಾತ್ರೇಡಿಯೋ ಕಾರ್ಯಕ್ರಮದಲ್ಲಿ ಅಭಿನಂದನೆಗಳನ್ನು ತಿಳಿಸಿದರು.

ಯುವ ಪ್ರತಿಭೆಗಳಾದ ವಿರಾಟ್ ಕೊಹ್ಲಿ, ಕರುಣ್ ನಾಯರ್ ಹಾಗೂ ಆರ್. ಅಶ್ವಿನ್ ಅವರು ಉತ್ತಮ ಸಾಧನೆಯನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

PM Modi congratulates Virat Kohli, Team India for historic win against England in Mann Ki Baat

2016 ಟಾಪ್ ಕ್ರಿಕೆಟರ್ ಆಫ್ ದಿ ಇಯರ್ ಮತ್ತು ಐಸಿಸಿ ಏಕದಿನ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿರುವುದಕ್ಕೆ ಮೋದಿ ಅಭಿನಂದನೆಗಳನ್ನು ಹೇಳಿದರು.

5 ವರ್ಷಗಳ ಬಳಿಕ ಕಿರಿಯ ಹಾಕಿ ತಂಡ ವಿಶ್ವಕಪ್ ನ್ನು ಗೆದ್ದಿದೆ. ಯುವ ಆಟಗಾರರಿಗೆ ಈ ಮೂಲಕ ಶುಭಾಶಯ ಕೋರುತ್ತಿದ್ದೇನೆಂದು ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ನಲ್ಲಿ ತಿಳಿಸಿದರು.

ಪ್ಯಾರಾಒಲಿಂಪಿಕ್ಸ್ ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ಪ್ಯಾರಾಒಲಿಂಪಿಕ್ಸ್ ಕ್ರೀಡಾಪಡುಗಳಿಗೆ ಅಭಿನಂದನೆಗಳನ್ನು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi in his last Mann Ki Baat address of 2016 on Sunday (Dec 25) congratulated Indian sports persons for their achievements all through the year.
Please Wait while comments are loading...