ರಾಷ್ಟ್ರಗೀತೆ ಹಾಡಿ ಕಬಡ್ಡಿ ಲೀಗ್ ಗೆ ಚಾಲನೆ ನೀಡಲಿರುವ ಯಶ್

Posted By:
Subscribe to Oneindia Kannada

ಬೆಂಗಳೂರು, ಫೆ.02: ಪ್ರೊ ಕಬಡ್ಡಿ ಲೀಗ್ ನ ಮೂರನೇ ಆವೃತ್ತಿ ರಾಯಭಾರಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡುವ ಅವಕಾಶ ಲಭಿಸಿದೆ.

"ರಾಷ್ಟ್ರ ಗೀತೆಗೆ" ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡುವ ಮೂಲಕ ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಪ್ರೋ ಕಬಡ್ಡಿ ವಿದ್ಯುಕ್ತವಾಗಿ ಆರಂಭವಾಗಲಿದೆ. ವಿಶಾಖಪಟ್ಟಣಂನಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಬೆಂಗಳೂರು ಬುಲ್ಸ್ ತಂಡ ತನ್ನ ತವರು ನೆಲದಲ್ಲಿ ಬುಧವಾರ (ಫೆಬ್ರವರಿ 03) ಮೊದಲ ಪಂದ್ಯವನ್ನಾಡಲಿದೆ. [ಕನ್ನಡದಲ್ಲೂ ಪ್ರೋ ಕಬಡ್ಡಿ ಲೀಗ್ ವೀಕ್ಷಕ ವಿವರಣೆ]

Rocking Star Yash promote PKL

ಸ್ಟಾರ್ ನೆಟ್‍ವರ್ಕನಿಂದ ಜಗತ್ತಿನ ತುಂಬೆಲ್ಲಾ ಪ್ರಸಾರವಾಗಿರುವ ಪ್ರೋ ಕಬಡ್ಡಿಯ 3 ನೇ ಸೀಸನ್ ಪ್ರಾರಂಭವಾಗಿದ್ದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಕಿಂಗ್ ಸ್ಟಾರ್ ರಾತ್ರಿ 7.50ಕ್ಕೆ ಯಶ್ "ರಾಷ್ಟ್ರ ಗೀತೆ"ಯನ್ನು ಹಾಡುವುದರ ಮೂಲಕ ಚಾಲನೆ ನೀಡಲಿದ್ದಾರೆ.[ಕಬಡ್ಡಿ ಲೀಗ್ ನಲ್ಲಿ ತೊಡೆ ತಟ್ಟಿದ ರಾಕಿಂಗ್ ಸ್ಟಾರ್ ಯಶ್]

ಕರ್ನಾಟಕ ಕಬಡ್ಡಿ ತಂಡದ ರಾಯಬಾರಿ ಯಶ್ ಕಬಡ್ಡಿ ಕಬಡ್ಡಿ ಹಾಡನ್ನು ಹಾಡಿ ಕುಣಿದು ಎಲ್ಲರನ್ನು ರಂಜಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಬಡ್ಡಿ ಲೀಗ್ ಪರ ಯಶ್ ತೊಡೆ ತಟ್ಟಿದ ಪ್ರೋಮೋ ವಿಡಿಯೋ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ

ಬೆಂಗಳೂರು ಬುಲ್ಸ್ ಗೆ ರಾಯಬಾರಿಯಾಗಿದ್ದು ತುಂಬಾ ಸಂತಸ ತಂದಿದೆ. ಸ್ಟಾರ್ ಇಂಡಿಯಾ ಕಬಡ್ಡಿ ಆಟವನ್ನು ದೇಶದ ತುಂಬೆಲ್ಲಾ ಜನಪ್ರಿಯ ಮಾಡಿದ್ದು ಶ್ಲಾಘನೀಯ ಎಂದರು. ಅಲ್ಲದೇ ತಾವು ಶಾಲೆಯಲ್ಲಿರುವಾಗ ಆಡಿದ ಕಬಡ್ಡಿ ನೆನಪು ಹಂಚಿಕೊಂಡರು.

ಒಟ್ಟು 8 ಗುಂಪುಗಳು ಮತ್ತು 159 ಕಬಡ್ಡಿ ಆಟಗಾರರು ಈ ಸೀಸನ್ ನಲ್ಲಿ ಭಾಗವಹಿಸಲಿದ್ದಾರೆ.ಇಂಗೀಷ್,ಹಿಂದಿ, ತೆಲುಗು ಭಾಷೆ ಸೇರಿದಂತೆ ಕನ್ನಡದಲ್ಲಿಯೂ ಪ್ರಸಾರವಾಗಲಿದೆ. ಕನ್ನಡದಲ್ಲಿ ಸುವರ್ಣ ಪ್ಲಸ್ ನಾಳೆ ರಾತ್ರಿ 7.50ರಿಂದ ಕನ್ನಡ ನಿರೂಪಣೆ ಯಲ್ಲಿ ಪ್ರಸಾರವಾಗುತ್ತದೆ. [ಬೆಂಗಳೂರು ಬುಲ್ಸ್ ಮಣಿಸಿ ಯು ಮುಂಬಾ ಕಬಡ್ಡಿ ಸಾಮ್ರಾಟ]

ಜನವರಿ 30ರಂದು ವೈಜಾಗ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವನ್ನು 29-35 ಅಂತರದಿಂದ ಸೋಲಿಸಿದ ಬೆಂಗಳೂರು ಬುಲ್ಸ್ ತಂಡ 5 ಅಂಕಗಳಿಸಿದೆ. ಫೆಬ್ರವರಿ 03ರಂದು ಪಟ್ನಾ ಪಿರೇಟ್ಸ್ ತಂಡವನ್ನು ಎದುರಿಸಲಿದೆ. ನಂತರ ಫೆಬ್ರವರಿ 04ರಂದು ಬೆಂಗಾಲ್ ವಾರಿಯರ್ಸ್ ಎದುರಾಗಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
PKL3: Rocking Star Yash to Sing National Anthem at Pro Kabaddi Event on Feb 03 at Sri Kanteerava Indoor Stadium, Bengaluru. For the 3rd season this year, Star Sports Pro Kabaddi has signed upcoming star from South India's movie industry - Yash, as one of the brand ambassadors of the league.
Please Wait while comments are loading...