ರಿಯೋ ಒಲಿಂಪಿಕ್ಸ್ 2016ಕ್ಕೆ ವರ್ಣರಂಜಿತ ಚಾಲನೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 06: ಬ್ರೆಜಿಲ್ ನ ರಿಯೋ ಡಿ ಜನೈರೋನತ್ತ ಇಡೀ ವಿಶ್ವದ ಕಣ್ಣು ನೆಟ್ಟಿದೆ. ಕಿತ್ತು ತಿನ್ನುವ ಸಮಸ್ಯೆಗಳ ನಡುವೆ ಜಾಗತಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ವರ್ಣರಂಜಿತವಾಗಿ ಆರಂಭಗೊಂಡಿದೆ. ಫುಟ್ಬಾಲ್ ದಿಗ್ಗಜ ಪೀಲೆ ಅವರು ಒಲಿಂಪಿಕ್ಸ್ ಜ್ಯೋತಿ ಬೆಳಗುವ ಮೂಲಕ ರಿಯೋ 2016ಕ್ಕೆ ಅಧಿಕೃತ ಚಾಲನೆ ನೀಡಿದರು.

ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ

ಸ್ಥಳೀಯ ಕಾಲಮಾನ 8PM(ಭಾರತೀಯ ಕಾಲಮಾನ ಪ್ರಕಾರ 4.30 IST) ಕ್ಕೆ ಆರಂಭವಾದ 31ನೇ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಬ್ರೆಜಿಲ್ಲಿನ ಸಂಸ್ಕೃತಿ, ವೈಭವವನ್ನು ಸಾರಲಾಯಿತು. ಕೊನೆಯಲ್ಲಿ ಎಂದಿನಂತೆ ವಿವಿಧ ದೇಶಗಳ ಅಥ್ಲೀಟ್ ಗಳ ಪಥ ಸಂಚಲನ ಮನಸೆಳೆಯಿತು. [ರಿಯೋ: ಸುಂದರ ಸ್ಟೇಡಿಯಂಗಳತ್ತ ಒಂದು ನೋಟ]

'ಸಿಟಿ ಆಫ್ ಗಾಡ್' ಚಿತ್ರ ಖ್ಯಾತಿಯ ನಿರ್ದೇಶಕ ಫರ್ನಾಂಡೋ ಮೆರಿಲೆಸ್, ಡೆನಿಲಾ ಥಾಮಸ್, ಅಂಡ್ರೂಚಾ ವಾಷಿಂಗ್ಟನ್ ಉಪಸ್ಥಿತಿಯಲ್ಲಿ Hino Nacinal brasileiro ರಾಷ್ಟ್ರೀಯ ಗೀತೆ, ಒಲಿಂಪಿಕ್ಸ್ ಆಶಯ ಗೀತೆ ಮೊಳಗಿತು. [ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ಸಾಂಬಾ ನೃತ್ಯದ ಸೊಬಗು, ಗಾನಸುಧೆಯೊಂದಿಗೆ ಸಾವಿರಾರು ಕಲಾವಿದರು ಮರಕಾನ ಕ್ರೀಡಾಂಗಣದಲ್ಲಿ ಬ್ರೆಜಿಲ್ ನ ಇತಿಹಾಸ, ಸಂಸ್ಕೃತಿ, ಕಾಡು,ಮಳೆ, ಜನ ಜೀವನದ ಪರಿಚಯ ಮಾಡಿಕೊಟ್ಟರು.[ಒಲಿಂಪಿಕ್ಸ್ 2016 : 10 ಸಾವಿರ ಕ್ರೀಡಾಪಟುಗಳು]

ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರಗಳ ನಡುವೆ ಸರಿ ಸುಮಾರು 11,239 ಕ್ರೀಡಾಪಟುಗಳನ್ನು ಒಂದೆಡೆ ಕಂಡ ಲಕ್ಷಾಂತರ ಕ್ರೀಡಾಭಿಮಾನಿಗಳು ಪುಳಕಿತರಾದರು. [ಒಲಿಂಪಿಕ್ಸ್ ನಲ್ಲಿ ಪದಕ ಬೇಟೆಗೆ ಸಜ್ಜಾದ ಕನ್ನಡಿಗರು]

ವಿಶ್ವಶ್ರೇಷ್ಠ ಮರಕಾನ ಸ್ಟೇಡಿಯಂ

ವಿಶ್ವಶ್ರೇಷ್ಠ ಮರಕಾನ ಸ್ಟೇಡಿಯಂ

ವಿಶ್ವದ ಅತಿದೊಡ್ಡ ಫುಟ್​ಬಾಲ್ ಸ್ಟೇಡಿಯಂಗಳಲ್ಲಿ ಖ್ಯಾತಿ ಹೊಂದಿರುವ, 2 ಬಾರಿ ಫೀಫಾ ವಿಶ್ವಕಪ್ ಟೂರ್ನಿಯ ಫೈನಲ್ ಆಯೋಜಿಸಿರುವ ವಿಶ್ವಶ್ರೇಷ್ಠ ಮರಕಾನ ಸ್ಟೇಡಿಯಂ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಪ್ರಸಿದ್ಧ ಡ್ಯಾನ್ಸ್ ಗಳಲ್ಲಿ ಒಂದಾಗಿರುವ ಸಾಂಬಾ ನೃತ್ಯ ಸೇರಿದಂತೆ ಹಲವು ಶೈಲಿಯ ನೃತ್ಯಗಳು, ವಿವಿಧ ಕಲಾವಿದರು ಈ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಕಲೆಯನ್ನು ಪ್ರದರ್ಶನಗೊಳಿಸಿದರು.

ಐದು ಸ್ಥಳಗಳಲ್ಲಿ ಕ್ರೀಡಾಕೂಟ

ಐದು ಸ್ಥಳಗಳಲ್ಲಿ ಕ್ರೀಡಾಕೂಟ

ಈ ಕ್ರೀಡಾಕೂಟಗಳು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ ಸೇರಿದಂತೆ ನಗರದ ಐದು ಸ್ಥಳಗಳಲ್ಲಿ ನಡೆಯಲಿವೆ. ಬೆಲೊ ಹಾರಿಜಾಂಟೆ, ಸಾಲ್ವಡಾರ್ ಮತ್ತು ಮನಾಸ್ ಗಳಲ್ಲಿ ನಡೆಯಲಿವೆ.

ಈ ಟೂರ್ನಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು

ಈ ಟೂರ್ನಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು

ವಿವಿಧ ರಾಷ್ಟ್ರಗಳ ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದಿಂದ 120ಕ್ಕೂ ಅಧಿಕ ಕ್ರೀಡಾಳು ಸೇರಿದಂತೆ ಸರಿ ಸುಮಾರು 10,000 ಆಟಗಾರರು ವಿವಿಧ ಕ್ರೀಡೆಗಳ ಪ್ರಶಸ್ತಿಗಳಿಗೆ ಪೈಪೋಟಿ ನಡೆಸಲಿದ್ದಾರೆ. ಅಭಿನವ್ ಬಿಂದ್ರಾ ಅವರು ಭಾರತದ ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದರು.

2020ರಲ್ಲಿ ಜಪಾನ್ ನಲ್ಲಿ ಬೇಸಿಗೆ ಒಲಿಂಪಿಕ್ಸ್

2020ರಲ್ಲಿ ಜಪಾನ್ ನಲ್ಲಿ ಬೇಸಿಗೆ ಒಲಿಂಪಿಕ್ಸ್

ಅಗಸ್ಟ್ 5 ರಂದು ಆರಂಭವಾಗಿ 21 ಕ್ಕೆ ಈ ರಿಯೋ ಒಲಿಂಪಿಕ್ಸ್ ಮುಕ್ತಾಯಗೊಳ್ಳಲಿದ್ದು, ಮುಂದಿನ 2020ರಲ್ಲಿ ಜಪಾನ್ ನಲ್ಲಿ ಬೇಸಿಗೆ ಒಲಿಂಪಿಕ್ಸ್ ನಡೆಯಲಿದೆ.

ಮರಕಾನ ಸ್ಟೇಡಿಯಂನಲ್ಲಿ 2016 ರಿಯೋ ಒಲಿಂಪಿಕ್ಸ್ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಮಾರು 78,000 ಪ್ರೇಕ್ಷಕರು ಕೂಡುವ ಸಾಮರ್ಥ್ಯ ಹೊಂದಿರುವ ಬಹುದೊಡ್ಡ ಮೈದಾನ ಇದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 31st Olympics, the first in South America and only the third to be held in the southern hemisphere, formally opened on Friday with a colourful opening ceremony depicting Brazil's vibrantly diverse culture and dedicated to its history and the Earth's environment, at the Macarana stadium here.
Please Wait while comments are loading...