ಮರಕಾನ ಸ್ಟೇಡಿಯಂನಲ್ಲಿ ಮನಸೆಳೆದ ಭಾರತದ ಕ್ರೀಡಾಪಡೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 06: ರಿಯೋ ಒಲಿಂಪಿಕ್ಸ್ 2016ರ ಉದ್ಘಾಟನಾ ಸಮಾರಂಭಕ್ಕೆ ವೇದಿಕೆ ಒದಗಿಸಿದ್ದ ಮರಕಾನ ಸ್ಟೇಡಿಯಂನಲ್ಲಿ ಭಾರತದ ಕ್ರೀಡಾಪಡೆ ಗಮನ ಸೆಳೆಯಿತು. ಮೆರವಣಿಗೆಯಲ್ಲಿ 95ನೇ ಸಾಲಿನಲ್ಲಿ ಬಂದ ಭಾರತ ತಂಡವನ್ನು ಅಭಿನವ್ ಬಿಂದ್ರಾ ಮುನ್ನಡೆಸಿದರು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

31ನೇ ಒಲಿಂಪಿಕ್ಸ್ ಗೇಮ್ಸ್ ನ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಶೂಟರ್ ಅಭಿನವ ಬಿಂದ್ರಾ ಭಾರತ ತಂಡವನ್ನು ಮುನ್ನಡೆಸಿದರು. ಆಗಸ್ಟ್ 5 ರಿಂದ 21ರವರೆಗೆ ನಡೆಯುವ ಈ ಮಹಾನ್ ಕ್ರೀಡಾಹಬ್ಬದಲ್ಲಿ ಒಟ್ಟು 207 ದೇಶಗಳು ಪಾಲ್ಗೊಳ್ಳುತ್ತಿವೆ. [ಚಿತ್ರಗಳು : ರಿಯೋ ಒಲಿಂಪಿಕ್ಸ್ 2016ಕ್ಕೆ ವರ್ಣರಂಜಿತ ಚಾಲನೆ]

28 ಕ್ರೀಡೆಗಳು ಜರುಗಲಿದ್ದು, ಒಟ್ಟು 11,239 ಸ್ಪರ್ಧಿಗಳು ಪದಕ ಬೇಟೆ ನಡೆಸುತ್ತಿದ್ದಾರೆ. [ರಿಯೋ: ಸುಂದರ ಸ್ಟೇಡಿಯಂಗಳತ್ತ ಒಂದು ನೋಟ]

ಭಾರತದಿಂದ ಒಟ್ಟು 120 ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಲಂಡನ್ 2012 ಒಲಿಂಪಿಕ್ಸ್ ನಲ್ಲಿ 83 ಮಂದಿ ಸ್ಪರ್ಧಿಗಳಿದ್ದರು. [ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ಒಲಿಂಪಿಕ್ಸ್ ಇತಿಹಾಸದಲ್ಲೇ ವೈಯಕ್ತಿಕ ಚಿನ್ನ ಗೆದ್ದ ಸಾಧಕ ಅಭಿನವ್ ಬಿಂದ್ರಾರಿಗಿದು ಬಹುಶಃ ಕೊನೆಯ ಒಲಿಂಪಿಕ್ಸ್ ಹಬ್ಬವಾಗಲಿದೆ.[ಪದಕ ಬೇಟೆಗೆ ಸಜ್ಜಾದ ಕನ್ನಡಿಗರು]

ರಿಯೋ ಒಲಿಂಪಿಕ್ಸ್ 2016 ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಯಾರು ಯಾರು ಪಾಲ್ಗೊಂಡಿದ್ದರು. ಯಾರು ತಪ್ಪಿಸಿಕೊಂಡರು ಮುಂದೆ ಓದಿ...

ಟೆನಿಸ್ ತಾರೆ ಲಿಯಾಂಡರ್

ಟೆನಿಸ್ ತಾರೆ ಲಿಯಾಂಡರ್

ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರು ಸಹ ಆಟಗಾರರ ಜೊತೆ ಸೆಲ್ಫಿ
(Image courtesy: Leander Paes Twitter handle)

ಸೀರೆಯುಟ್ಟು ಮಿಂಚಿದ ಮಹಿಳಾ ಕ್ರೀಡಾಪಟುಗಳು

ಸೀರೆಯುಟ್ಟು ಮಿಂಚಿದ ಮಹಿಳಾ ಕ್ರೀಡಾಪಟುಗಳು

ಸೀರೆಯುಟ್ಟು ಮಿಂಚಿದ ಮಹಿಳಾ ಕ್ರೀಡಾಪಟುಗಳಾದ ಬಾಡ್ಮಿಂಟನ್ ತಾರೆಗಳಾದ ಪಿವಿ ಸಿಂಧು, ಅಶ್ವಿನಿ ಪೊನ್ನಪ್ಪ, ಜ್ವಾಲಾ ಗುಟ್ಟಾ

ಮಹಿಳಾ ಹಾಕಿ ತಂಡ

ಮಹಿಳಾ ಹಾಕಿ ತಂಡ

ಮರಕಾನ ಸ್ಟೇಡಿಯಂನಲ್ಲಿ ಗ್ರೂಪ್ ಫೋಟೋ ತೆಗೆಸಿಕೊಂಡ ಮಹಿಳಾ ಹಾಕಿ ತಂಡ
(Image courtesy: Hockey India Twitter)

ಪೇಸ್ ಜತೆಗೆ ಇನ್ನಷ್ಟು ಚಿತ್ರಗಳು

ಪೇಸ್ ಜತೆಗೆ ಇನ್ನಷ್ಟು ಚಿತ್ರಗಳು

ಟೆನಿಸ್ ತಾರೆ ಪೇಸ್ ಜತೆಗೆ ಇನ್ನಷ್ಟು ಚಿತ್ರಗಳು

ಕ್ರಿಕೆಟ್ ದಿಗ್ಗಜ ಸಚಿನ್ ಕ್ರೈಸ್ತನ ಪ್ರತಿಮೆ ಜತೆ

ಕ್ರಿಕೆಟ್ ದಿಗ್ಗಜ ಸಚಿನ್ ಕ್ರೈಸ್ತನ ಪ್ರತಿಮೆ ಜತೆ

Christ the Redeemer ಪ್ರತಿಮೆ ಮುಂದೆ ಕ್ರಿಕೆಟ್ ದಿಗ್ಗಜ ಸಚಿನ್

ಕ್ರೀಡಾಪಟುಗಳ ಪಥಸಂಚಲನದ ಚಿತ್ರ

ಕ್ರೀಡಾಪಟುಗಳ ಪಥಸಂಚಲನದ ಚಿತ್ರ

ಭಾರತದ ಕ್ರೀಡಾಪಟುಗಳ ಪಥಸಂಚಲನದ ಚಿತ್ರ
(Image courtesy: Poonam Rani Malik Twitter)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rio Olympics 2016 formally begins today with a gorgeous and grand opening ceremony organised at the iconic Maracana stadium in Rio de Janeiro, Brazil
Please Wait while comments are loading...