ಪ್ಯಾರಾಲಿಂಪಿಕ್ಸ್ ಭಾರತಕ್ಕೆ ಬೆಳ್ಳಿ ಗೆದ್ದ ದೀಪಾ ಮಲಿಕ್

Written By:
Subscribe to Oneindia Kannada

ರಿಯೋ ಡಿ ಜನೈರೋ, ಸೆ. 12 : ಭಾರತದ ಅಥ್ಲೀಟ್ ದೀಪಾ ಮಲಿಕ್ ಅವರು ಸೋಮವಾರ ಹೊಸ ಇತಿಹಾಸ ಬರೆದಿದ್ದಾರೆ.ಇಲ್ಲಿ ನಡೆಯುತ್ತಿರುವ ರಿಯೋ 2016 ಪ್ಯಾರಾಲಿಂಪಿಕ್ಸ್ ನ ಶಾಟ್ ಪುಟ್ ವಿಭಾಗದ ಎಫ್ 33 ಸ್ಪರ್ಧೆಯಲ್ಲಿ ದೀಪಾ ಮಲಿಕ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದಾರೆ.

ಮಹಿಳೆಯರ ಶಾಟ್ ಪುಟ್ ಸ್ಪರ್ಧೆಯಲ್ಲಿ ಈ ಪ್ರಶಸ್ತಿ ಲಭಿಸಿದ್ದು, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ದೀಪಾ ಮಲೀಕ್ ಪಾತ್ರರಾಗಿದ್ದಾರೆ.

Rio 2016 Paralympics: Deepa Malik clinches silver in shotput, becomes first Indian woman


ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ದೀಪಾ ಮಲಿಕ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ದೀಪಾ ಗೆದ್ದಿರುವ ಬೆಳ್ಳಿ ಪದಕದ ಜೊತೆಗೆ ರಿಯೋ ಪ್ಯಾರಾಲಿಂಕ್ಸ್ ನಲ್ಲಿ ಇದುವರೆಗೂ ಭಾರತಕ್ಕೆ ಮೂರು ಪದಕಗಳು ಸಿಕ್ಕಂತಾಗಿದೆ.

45 ವರ್ಷ ವಯಸ್ಸಿನ ಅರ್ಜುನ ಪ್ರಶಸ್ತಿ ವಿಜೇತ ಸಾಧಕಿ ದೀಪಾ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಬೆಳ್ಳಿ ಪದಕ ಗೆದ್ದಿರುವ ದೀಪಾ ಅವರಿಗೆ ಹರ್ಯಾಣ ಸರ್ಕಾರದ ವತಿಯಿಂದ 4 ಕೋಟಿ ರೂಪಾಯಿ ಪ್ರೋತ್ಸಾಹ ಧನ ಉಡುಗೊರೆಯಾಗಿ ಸಿಗಲಿದೆ.

ಆರ್ಮಿ ಆಫೀಸರ್ ರೊಬ್ಬರ ಪತ್ನಿ, ಇಬ್ಬರು ಮಕ್ಕಳ ತಾಯಿಯಾಗಿರುವ ದೀಪಾ ಅವರು ವ್ಹೀಲ್ ಚೇರ್ ಮೇಲೆ ಕುಳಿತು ಗುಂಡು ಎಸೆದು ಹೊಸ ಇತಿಹಾಸ ಬರೆದಿದ್ದಾರೆ.

ಬಹರೈನ್ ನ ನೆದಾಂ 4.76 ಮೀಟರ್ ದೂರ ಎಸೆದು ಚಿನ್ನ ಗೆದ್ದರೆ, ಗ್ರೀಸ್ ನ ಡಿಮಿಟ್ರಾ ಕೊರೊಕಿಡಾ 4.28 ಮೀಟರ್ ಎಸೆದು ಕಂಚು ಗೆದ್ದಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Deepa Malik scripted history on Monday (September 12) by clinching a silver medal in the ongoing Rio 2016 Paralympics in the shotput F-53 event.
Please Wait while comments are loading...