ರಿಯೋ ಪ್ಯಾರಾಲಿಂಪಿಕ್ಸ್ : ಕನ್ನಡಿಗ ಫರ್ಮಾನ್ ಭಾಷಾಗೆ 4ನೇ ಸ್ಥಾನ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೊ ಡಿ ಜನೈರೊ, ಸೆ. 10 : ಪ್ಯಾರಾಲಿಂಪಿಕ್ಸ್ ನ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಫರ್ಮಾನ್ ಬಾಷಾ ಅವರಿಗೆ ಪದಕ ಕೈತಪ್ಪಿದೆ. ಬೆಂಗಳೂರಿನ ಪವರ್ ಲಿಫ್ಟರ್ ಫರ್ಮಾನ್ ಬಾಷಾ ಅವರು ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 42 ವರ್ಷದ ಬಾಷಾ ಅವರು ಮೊದಲ ಸುತ್ತಿನಲ್ಲಿ ಒಟ್ಟು 140 ಕೆ.ಜಿ. ಭಾರ ಎತ್ತಿ ಯಶಸ್ವಿಯಾದರು. ಆದರೆ 150 ಹಾಗೂ 155 ಕೆ.ಜಿ ಭಾರ ಎತ್ತುವುದರಲ್ಲಿ ವಿಫಲರಾದರು. ಕಾಂಗ್ ವಾಲ್‌ ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.[ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಡಬಲ್ ಧಮಾಕ!]

Paralympics 2016

ಇನ್ನು ಬೆಳ್ಳಿ ಜೊರ್ಡಾನ್ ನ ಓಮರ್ ಖರಾದ ಪಾಲಾಯಿತು, ಹಂಗರಿಯ ನಂದೋರ್ ಟುಂಕೆಲ್ ಕಂಚು ಗೆದ್ದು ಸಂಭ್ರಮಿಸಿದರು. 140 ಕೆ.ಜಿ. ಭಾರ ಎತ್ತಿದ ಭಾರತದ ಬಾಷಾ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು

ಬೆಂಗಳೂರಿನ ಫರ್ಮಾನ್ ಭಾಷಾ ಅವರು 2010ರ ಏಷ್ಯಾ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದರು. ಆ ಕೂಟದಲ್ಲಿ ಬೆಳ್ಳಿ ಜಯಿಸಿದ್ದ ಪ್ಯಾರಾಲಿಫ್ಟರ್ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದ ಸಾಬೀತಾಗಿದ್ದ ಕಾರಣ ಬಾಷಾ ಅವರಿಗೆ ಅದೃಷ್ಟದ ಬೆಳ್ಳಿ ಪದಕ ಒಲಿದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian power-lifter Farman Basha missed out on a bronze medal, finishing fourth in the men's 49 kilogram category here at the Rio Paralympic Games.
Please Wait while comments are loading...