ಸ್ನೂಕರ್: ಹೊಸ ಇತಿಹಾಸ ಸೃಷ್ಟಿಸಿದ ಪಂಕಜ್ ಅಡ್ವಾಣಿ

Posted By:
Subscribe to Oneindia Kannada

ಬೆಂಗಳೂರು, ಮೇ 23: ಭಾರತದ ಹೆಮ್ಮೆಯ ಸ್ನೂಕರ್ ಹಾಗೂ ಬಿಲಿಯರ್ಡ್ ಪಟು ಪಂಕಜ್ ಅಡ್ವಾಣಿ ಅವರು ಅಬುಧಾಬಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಏಷ್ಯನ್ 6-ರೆಡ್ ಸ್ನೂಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಒಂದೇ ಋತುವಿನಲ್ಲಿ ವಿಶ್ವ ಮತ್ತು ಏಷ್ಯಾಖಂಡ ಪ್ರಶಸ್ತಿಗೆ ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅಗ್ರ ಸೀಡ್ ಆಟಗಾರ ಮಲೇಷ್ಯಾದ ಕೀನ್ ಹಾಹ್ಹ್ ಅವರನ್ನು 7-5 ಅಂತರದಲ್ಲಿ ಮಣಿಸಿದ ಅಡ್ವಾಣಿ ಈ ಸಾಧನೆ ಮಾಡಿದ್ದಾರೆ.[ಪಂಕಜ್ ಮುಡಿಗೆ 14ನೇ ವಿಶ್ವ ಚಾಂಪಿಯನ್ ಶಿಪ್ ಕಿರೀಟ]

Pankaj Advani creates history by winning Asian 6-Red snooker title

ಐಬಿಎಸ್ ಎಫ್ ವಿಶ್ವ ರೆಡ್ ಸ್ನೂಕರ್ ಚಾಂಪಿಯನ್ ಅಡ್ವಾಣಿ ಅವರು ಸೆಮಿಫೈನಲ್ ನಲ್ಲಿ ಆದಿತ್ಯಾ ಮೆಹ್ತಾ ವಿರುದ್ಧ 6-1ರ ಅಂತರದ ಜಯ ದಾಖಲಿಸಿದ್ದರು.

ಮೊದಲ ಬಾರಿಗೆ ಏಷ್ಯನ್ ಸ್ನೂಕರ್ ಚಾಂಪಿಯನ್​ಷಿಪ್ ಗೆಲ್ಲುತ್ತಿರುವುದು ಸಹಜವಾಗಿಯೇ ಖುಷಿ ಕೊಟ್ಟಿದೆ. ಕಳೆದ ತಿಂಗಳಲ್ಲಿ 15-ರೆಡ್ ಏಷ್ಯನ್ ಸ್ನೂಕರ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಂದೇ ವರ್ಷದಲ್ಲಿ 6-ರೆಡ್ ವಿಶ್ವ ಮತ್ತು ಏಷ್ಯನ್ ಖಂಡ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ ಎಂದು ಪಂಕಜ್ ಅಡ್ವಾಣಿ ಪ್ರತಿಕ್ರಿಯಿಸಿದ್ದಾರೆ.

ಪಂಕಜ್ ಆಡ್ವಾಣಿ ಟೀಮ್ ಈವೆಂಟ್​ನಲ್ಲಿ ಆದಿತ್ಯಾ ಮೆಹ್ತಾ, ಮನನ್ ಚಂದ್ರ ಮತ್ತು ಕಮಲ್ ಚಾವ್ಲ ಜತೆಗೂಡಿ ಆಡಲಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's ace cueist Pankaj Advani created history in Abu Dhabi by clinching the Asian 6-Red Snooker title.
Please Wait while comments are loading...