ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಗೆದ್ದ ಬೆಂಗ್ಳೂರಿನ ಪಂಕಜ್!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ನಿವಾಸಿ ಭಾರತದ ಹೆಮ್ಮೆಯ ಕ್ರೀಡಾಪಟು ಪಂಕಜ್ ಅಡ್ವಾಣಿ ಅವರು ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ ಶಿಪ್‌ ಆಗಿ ಹೊರ ಹೊಮ್ಮಿದ್ದಾರೆ. ಇದು ಅವರ 11ನೇ ವಿಶ್ವ ಬಿಲಿಯರ್ಡ್(150 ಅಪ್ ಮಾದರಿ) ಚಾಂಪಿಯನ್ ಶಿಪ್ ಆಗಿದೆ.

ಮಾಜಿ ವಿಶ್ವ ಚಾಂಪಿಯನ್ ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಅವರನ್ನು ಪಂಕಜ್ ಅವರು ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ ಮಂಗಳವಾರ ನಡೆದ 150-ಅಪ್‌ ಪಾಯಿಂಟ್‌ ಮಾದರಿಯ ಅಂತಿಮ ಹಣಾಹಣಿಯಲ್ಲಿ 151-33, 150-95, 124-150, 101-150, 150-50, 152-37, 86-150, 151-104, 150-15ರಲ್ಲಿ ಸೋಲಿಸಿದರು.

Pankaj Advani beats Singapore's Peter Gilchrist to win IBSF World Billiards Championship

ಮೊದಲ ನಾಲ್ಕು ಫ್ರೇಮ್‌ಗಳಲ್ಲಿ ಉಭಯ ಆಟಗಾರರು ಸಮಬಲದ ಪೈಪೋಟಿ ಕಂಡು ಬಂದಿತ್ತು. ಆದರೆ, ಅಂತಿಮ ನಾಲ್ಕು ಫ್ರೇಮ್ ಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದ ಪಂಕಜ್ ಅವರು ಪ್ರಶಸ್ತಿಯನ್ನು ಗಳಿಸಿದರು. ಪಂಕಜ್ ಅವರಿಗೆ ತವರು ಅಭಿಮಾನಿಗಳ ಬೆಂಬಲ ಬಲ ಕೂಡಾ ಸಿಕ್ಕಿತು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ace Indian cueist Pankaj Advani today (Dec 12) won his 11th World Billiards (150-Up format) Championships title by beating Peter Gilchrist of Singapore in the summit clash here.
Please Wait while comments are loading...