ಪ್ರೇಯಸಿಯನ್ನು ಕೊಂದ 'ಬ್ಲೇಡ್ ರನ್ನರ್' ಆಸ್ಕರ್ ಗೆ 6 ವರ್ಷ ಶಿಕ್ಷೆ

Posted By:
Subscribe to Oneindia Kannada

ಪ್ರಿಟೋರಿಯಾ, ಜುಲೈ 06: ಪ್ರೇಮಿಗಳ ದಿನದಂದೇ ತನ್ನ ಗೆಳತಿಯನ್ನು ಕೊಂದ ಆರೋಪ ಹೊತ್ತು ಅಪರಾಧಿ ಎನಿಸಿಕೊಂಡಿರುವ 'ಬ್ಲೇಡ್ ರನ್ನರ್' ಆಸ್ಕರ್ ಪಿಸ್ಟೋರಿಸ್ ಗೆ ಬುಧವಾರ ಶಿಕ್ಷೆ ಪ್ರಕಟಿಸಲಾಗಿದೆ.

ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಅವರನ್ನು ಅಪರಾಧಿ ಎಂದು ಇಲ್ಲಿನ ನ್ಯಾಯಾಲಯ ಘೋಷಿಸಿತ್ತು. ಆದರೆ, ಆಸ್ಕರ್ ಅವರು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ, ಆಕಸ್ಮಿಕವಾಗಿ ನಡೆದ ಹತ್ಯಾ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಿ 6 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿದೆ. [ಪ್ರೇಮಿಗಳ ದಿನದಂದೇ ಗೆಳತಿ ಕೊಂದ 'ಬ್ಲೇಡ್ ರನ್ನರ್']

ಪ್ರಿಟೋರಿಯಾ ನ್ಯಾಯಾಲಯ ಮಹಿಳಾ ಜಡ್ಜ್ ಥೊಕೊಳಿಲೆ ಮಸಿಪಾ ಅವರು ಸುದೀರ್ಘವಾದ ತೀರ್ಪು ನೀಡಿದ್ದು, 15 ವರ್ಷಗಳ ಕಾಲದ ಜೀವಾವಧಿ ಶಿಕ್ಷೆಯಿಂದ ಆಸ್ಕರ್ ಗೆ ಮುಕ್ತಿ ಸಿಕ್ಕಿದ್ದು, 6 ವರ್ಷಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ.

ಗೆಳತಿ ರೇವಾ ಸ್ಟೀನ್‌ಕ್ಯಾಂಪ್‌(30) ರನ್ನು ಕೊಂದ ಆರೋಪದ ಮೇಲೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಟ್ರಾಕ್ ಸ್ಟಾರ್ ಬ್ಲೇಡ್ ರನ್ನರ್ ಖ್ಯಾತಿ ವಿಕಲಚೇತನ ಆಸ್ಕರ್ ಪಿಸ್ಟೋರಿಯಸ್(28) 2014ರಲ್ಲೇ ಜೈಲು ಸೇರಿದ್ದರು.

ಎರಡು ಕಾಲುಗಳಿಲ್ಲದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಪ್ರಿಟೋರಿಯಾದಲ್ಲಿರುವ ತನ್ನ ಮನೆಯಲ್ಲಿ ಗೆಳೆತಿ ಟಿವಿ ಸ್ಟಾರ್ ಹಾಗೂ ಎಫ್‌ಎಚ್‌ಎಂನ ಮಾಜಿ ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ (30)ರನ್ನು ಫೆ.14, 2013ರಂದು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಹೊತ್ತಿದ್ದರು. ಪಿಸ್ಟೋರಿಯಸ್ ಕೊಲೆಗೈಯುವ ಮೊದಲು ರೀವಾಗೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ತಪ್ಪು ಭಾವನೆಯಿಂದ ಆದ ಆಕಸ್ಮಿಕ ಅಘಾತ

ತಪ್ಪು ಭಾವನೆಯಿಂದ ಆದ ಆಕಸ್ಮಿಕ ಅಘಾತ

ಬಾತ್‌ರೂಮ್‌ನಲ್ಲಿ ಯಾರೋ ಆಗಂತುಕರು ಇದ್ದಾರೆ ಎಂದು ಭಾವಿಸಿ ತಾನು ಗುಂಡು ಹಾರಿಸಿದ್ದಾಗಿ ವಿಚಾರಣೆ ವೇಳೆ ಪಿಸ್ಟೋರಿಯಸ್‌ ಹೇಳಿಕೊಂಡಿದ್ದರು. ಆದರೆ, ಪ್ರಿಯತಮೆ ಜೊತೆ ವಾಗ್ವಾದದ ವೇಳೆ ಆತ ಗುಂಡು ಹಾರಿಸಿದ್ದಾಗಿ ಸರಕಾರಿ ವಕೀಲರು ವಾದಿಸಿದ್ದರು. ಕೊನೆಗೆ 5 ವರ್ಷಗಳ ಶಿಕ್ಷೆ ಪಡೆದು ಜೈಲುಪಾಲಾಗಿದ್ದರು. ಆಸ್ಕರ್ ಗೆ ಜೀವಾವಧಿ ಶಿಕ್ಷೆ ಕೋರಿ ರೀವಾ ಸಂಬಂಧಿಕರು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ತೀರ್ಪು ಹೊರಬಂದಿದೆ.

ಆಸ್ಕರ್ ಗೆ 6 ವರ್ಷ ಶಿಕ್ಷೆ ಮುಂದೇನು?

ಆಸ್ಕರ್ ಗೆ 6 ವರ್ಷ ಶಿಕ್ಷೆ ಮುಂದೇನು?

29ವರ್ಷ ವಯಸ್ಸಿನ ಅಥ್ಲೀಟ್ ಆಸ್ಕರ್ ಅವರು ಐದುವರ್ಷ ಶಿಕ್ಷೆಯಲ್ಲಿ 9 ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ. ಜೀವಾವಧಿ ಶಿಕ್ಷೆ ನೀಡುವಂತೆ ಕೋರಿ ಸರ್ಕಾರಿ ವಕೀಲರು ಮಂಡಿಸಿದ ವಾದಕ್ಕೆ ಬೆಲೆ ಸಿಕ್ಕಿಲ್ಲ. ಈಗ ಶಿಕ್ಷೆ ಪ್ರಮಾಣ 6 ವರ್ಷಕ್ಕೇರಿದೆ. ಈ ನಡುವೆ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಪ್ರಕರಣದಿಂದ ಮುಕ್ತಿ ಸಿಕ್ಕಿದೆ.

ಗೆಳತಿ ಹತ್ಯೆ ಪ್ರಕರಣ: ತೀರ್ಪಿನಲ್ಲಿ ಏನಿದೆ?

ಗೆಳತಿ ಹತ್ಯೆ ಪ್ರಕರಣ: ತೀರ್ಪಿನಲ್ಲಿ ಏನಿದೆ?

2013ರ 'ವ್ಯಾಲಂಟೈನ್ಸ್‌ ಡೇ'ಯಂದು ಪಿಸ್ಟೋರಿಯಸ್‌ ತನ್ನ ಪ್ರಿಯತಮೆ ರೇವಾ ಸ್ಟೀನ್‌ಕ್ಯಾಂಪ್‌ ಅವರರನ್ನು ಗುಂಡಿಟ್ಟು ಕೊಂದ ಆರೋಪ ಸಾಬೀತಾಗಿ ಆಸ್ಕರ್ ಅಪರಾಧಿಯಾಗಿದ್ದಾರೆ.
* ಅದರೆ, ಇದು ನಿರ್ಲಕ್ಷ್ಯದಿಂದ ಆದ ಹತ್ಯೆ, ಉದ್ದೇಶಪೂರ್ವಕವಾದ ಕೊಲೆಯಲ್ಲ.
* ಆಗುಂತಕರ ದಾಳಿ ನಿರೀಕ್ಷೆಯಲ್ಲಿದ್ದ ಆಸ್ಕರ್ ಅವರು ಗೆಳತಿಯನ್ನೇ ಆಗುಂತಕರು ಎಂದು ತಿಳಿದು ಹಲ್ಲೆ ಮಾಡಿ ಗುಂಡಿಕ್ಕಿ ಕೊಂದಿದ್ದಾರೆ. ತಲೆ, ಕೈ, ಸೊಂಟಕ್ಕೆ ಗುಂಡು ತಗುಲಿದೆ. ಪ್ರಿಸ್ಟೋರಿಯಸ್‌ ಅವರಿಗೆ 6 ವರ್ಷ ಜೈಲು ಶಿಕ್ಷೆ ಸಿಕ್ಕಿದೆ

ಪ್ರೇಮಿಗಳ ದಿನ ಅಚ್ಚರಿಯ ಗಿಫ್ಟ್ ಗಾಗಿ ಕಾದಿದ್ದ ರೀವಾ

ಪ್ರೇಮಿಗಳ ದಿನ ಅಚ್ಚರಿಯ ಗಿಫ್ಟ್ ಗಾಗಿ ಕಾದಿದ್ದ ರೀವಾ

ಆಸ್ಕರ್ ಗೆ ವ್ಯಾಲೆಂಟೈನ್ಸ್ ಡೇ ಸರ್ಫ್ರೈಜ್ ಗಿಫ್ಟ್ ತರಲು ಶಾಪಿಂಗ್ ಹೋಗಿದ್ದ ರೀವಾ, ಕಳ್ಳ ಹೆಜ್ಜೆ ಇಡುತ್ತಾ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಶಬ್ದವಾಗಿದ್ದನ್ನು ಕೇಳಿಸಿಕೊಂಡ ಆಸ್ಕರ್ ಹಿಂದು ಮುಂದು ನೋಡದೆ, ಕಳ್ಳರು ಮನೆಗೆ ನುಗ್ಗಿರಬಹುದು ಎಂಬ ಶಂಕೆಯಿಂದ ಆಕೆಯನ್ನು ನೋಡದೆ ಗುಂಡು ಹಾರಿಸಿದ್ದಾರೆ ಎಂದು ವರದಿ ಬಂದಿತ್ತ್ತು. ಆದರೆ, ಪೊಲೀಸ್ ವಕ್ತಾರರು ಯಾವುದೇ ಮಾಹಿತಿ ಹೊರ ಹಾಕಿಲ್ಲ. ಆಸ್ಕರ್ ಬಂಧನವನ್ನು ಮಾತ್ರ ಖಾತ್ರಿಪಡಿಸಿದ್ದರು. ಚಿತ್ರದಲ್ಲಿ ಜಡ್ಜ್ ಮಸೀಪಾ

ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್

ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್

2013ಕ್ಕೂ ಮುಂಚೆ ಸುಮಾರು ಒಂದೂವರೆ ವರ್ಷದಿಂದ ಮಾಡೆಲ್ ರೀವಾ ಸ್ಟೀನ್ ಕ್ಯಾಂಪ್ ಜೊತೆ ಆಸ್ಕರ್ ಡೇಟಿಂಗ್ ನಲ್ಲಿದ್ದರು. ಸಾಯುವುದಕ್ಕೂ ಒಂದು ವಾರದ ಹಿಂದೆ ಆಸ್ಕರ್ ನೀಡಿದ್ದ ಉಡುಗೊರೆಗಳ ಬಗ್ಗೆ ಮೆಚ್ಚುಗೆ ಸೂಸುತ್ತಾ ರೀವಾ ಟ್ವೀಟ್ ಮಾಡಿದ್ದರು. ರೀವಾ ಹಾಗೂ ಆಸ್ಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ ಎಂದು ಎಲ್ಲರೂ ಹೇಳಿದ್ದಾರೆ. ಹೀಗಾಗಿ ಆಕೆಯನ್ನು ಕೊಲ್ಲುವ ಯಾವುದೇ ಉದ್ದೇಶ ಆಸ್ಕರ್ ಗೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್

ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿರುವ ಆಸ್ಕರ್

ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್ ಒಬ್ಬ ಮಾದರಿ ಕ್ರೀಡಾಪಟು. ಅವರು ಕೃತಕ ಬಲಗಾಲು ಹೊಂದಿದ್ದು, ಬ್ಲೇಡ್ (double below-knee amputations) ಹಾಕಿಕೊಂಡೇ ಲಂಡನ್ ಒಲಿಂಪಿಕ್ಸ್ ನ ಭಾಗವಹಿಸಿದ್ದರು. ಅಂಗವೈಕಲ್ಯವಿದ್ದವರು ಪ್ಯಾರಾಲಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಮಾಮೂಲಿ. ಆದರೆ, ಆಸ್ಕರ್ ಅವರು ಎಲ್ಲರಂತೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ ವಿಶ್ವದ ಮೊಟ್ಟ ಮೊದಲ ಅಂಗವಿಕಲ ಕ್ರೀಡಾಪಟು, ಮೀ ದೂರವನ್ನು 46.88 ಸೆಂಕಡುಗಳಲ್ಲಿ ಮುಟ್ಟಿ ಚಿನ್ನ ಗೆದ್ದಿದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Oscar Pistorius sentenced to six years in jail for murder of Reeva Steenkamp. Pretoria, South African court on Wedenesday (July 6) sentenced six years of jail to disgraced Paralympian Oscar Pistorius for murdering his girlfriend Reeva Steenkamp three years ago.
Please Wait while comments are loading...