ಪದ್ಮಭೂಷಣ ಪ್ರಶಸ್ತಿಗೆ ಕುಸ್ತಿ ಪಟು ಸುಶೀಲ್ ಕುಮಾರ್ ಹೆಸರು

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 06 : ಬೀಜಿಂಗ್‌ ಮತ್ತು ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ಗೆದ್ದಿರುವ ಕುಸ್ತಿ ಪಟು ಸುಶೀಲ್ ಕುಮಾರ್‌ ಅವರ ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಭಾರತ ಕುಸ್ತಿ ಫೆಡರೇಷನ್(WFI) ಶಿಫಾರಸು ಮಾಡಿದೆ.

ಸುಶೀಲ್ 2008ರಲ್ಲಿ ಕಂಚು ಮತ್ತು 2012ರ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕಗಳನ್ನು ಜಯಿಸಿದ್ದರು. ದೆಹಲಿಯ ಕುಸ್ತಿ ಪಟು 2005ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಇದರಿಂದ ಈ ಬಾರಿಯ ಪದ್ಮಭೂಷಣ ಪ್ರಶಸ್ತಿಯನ್ನು ಕುಸ್ತಿ ಪಟು ಸುಶೀಲ್ ಕುಮಾರ್ ಅವರಗೆ ನೀಡಬೇಕೆಂದು ಭಾರತ ಕುಸ್ತಿ ಫೆಡರೇಷನ್ ಸಂಸ್ಥೆ (ಡಬ್ಲೂಎಫ್ ಐ) ಕ್ರೀಡಾ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದೆ.

Olympic-medallist wrestler Sushil Kumar recommended for Padma Bhushan

ಇನ್ನು ಮಹಿಳಾ ಕುಸ್ತಿ ಪಟು ಅಲ್ಕಾ ತೊಮರ್ ಹಾಗೂ ಸುಶೀಲ್ ಕುಮಾರ್ ಕೋಚ್ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಯಶ್ವೀರ್ ಸಿಂಗ್ ಅವರ ಹೆಸರನ್ನು ಭಾರತ ಕುಸ್ತಿ ಫೆಡರೇಷನ್ ಸಂಸ್ಥೆ ಶಿಫಾರಸ್ಸು ಮಾಡಿದೆ.

ಎರಡು ವರ್ಷಗಳ ಹಿಂದೆ ಪದ್ಮಭೂಷಣ ಪ್ರಶಸ್ತಿಗೆ ಸುಶೀಲ್ ಕುಮಾರ್ ಅವರ ಹೆಸರನ್ನು ಕಳುಹಿಸಲಾಗಿತ್ತು. ಆದರೆ, ಕ್ರೀಡಾ ಇಲಾಖೆ ಸುಶೀಲ್ ಕುಮಾರ್ ಅವರನ್ನು ತಿರಸ್ಕರಿಸಲಾಗಿತ್ತು.

ಎರಡು ಒಲಿಂಪಿಕ್ಸ್ ನಲ್ಲಿ ಈಗಾಗಲೇ ಸುಶೀಲ್ ಎರಡು ಪದಕಗಳನ್ನು ಗೆದಿದ್ದಾರೆ. ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಎರಡು ಬಾರಿ ಬಂಗಾರ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಜೊತೆಗೆ ನಾಲ್ಕು ಬಾರಿ ಕಾಮನ್ ವೆಲ್ತ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಈಗಾಗಿ ಸುಶೀಲ್ ಕುಮಾರ್ ಪದ್ಮಭೂಷಣ ಪ್ರಶಸ್ತಿಯನ್ನು ನೀಡಬೇಕೆಂದು (ಡಬ್ಲೂಎಫ್ ಐ) ಕಾರ್ಯದರ್ಶಿ ವಿನೋದ್ ಥೋಮರ್ ಕ್ರೀಡಾ ಸಚಿವಾಲಕ್ಕೆ ಒತ್ತಾಯಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two-time Olympic-medallist wrestler Sushil Kumar has been nominated for the Padma Bhushan, India's third-highest civilian honour, by the Wrestling Federation of India (WFI).
Please Wait while comments are loading...