ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗೆ ಸಿಂಧು ರಾಯಭಾರಿ?

Posted By:
Subscribe to Oneindia Kannada

ನವದೆಹಲಿ, ಸೆ. 04: ರಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಬಾಡ್ಮಿಂಟನ್ ತಾರೆ ಪಿವಿ ಸಿಂಧು, ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಯೊಂದರ ರಾಯಭಾರಿಯಾಗುವ ಸಾಧ್ಯತೆಯಿದೆ

ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅಲ್ಲದೆ ಫೈನಲಿಸ್ಟ್ ದೀಪಾ ಕರ್ಮಾಕರ್ ಅವರನ್ನು ಸ್ವಚ್ಛ ಭಾರತ ಅಭಿಯಾನದ ರಾಯಭಾರಿಗಳನ್ನಾಗಿ ನೇಮಿಸಲು ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿ ಬಂದಿದೆ.[ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ!]

Olympic medalists Sindhu, Malik likely to be new faces of Swachh Bharat Mission

ಸಾಕ್ಷಿ ಮಲಿಕ್, ಪಿ.ವಿ. ಸಿಂಧು ಜೊತೆಗೆ ದೀಪಾ ಕರ್ಮಾಕರ್ ಅವರನ್ನು ಸ್ವಚ್ಚ ಭಾರತ ಅಭಿಯಾನದಲ್ಲಿ ಜಾಗೃತಿ ಮೂಡಿಸಲು ಬಳಸಿಕೊಳ್ಳಲಿದ್ದೇವೆ. ಈ ಕ್ರೀಡಾತಾರೆಯರು ಸ್ವಚ್ಚತೆ ಹಾಗೂ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು, ಮಹಿಳೆಯರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದಾರೆ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆಯ ಕರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರು ಪಿಟಿಐಗೆ ತಿಳಿಸಿದ್ದಾರೆ.[ನ.1ರಂದು ಬಯಲು ಶೌಚ ಮುಕ್ತ ರಾಜ್ಯಕ್ಕೆ ಮೋದಿ]

ಸ್ವಚ್ಛ ಭಾರತ ಅಭಿಯಾನ ಯೋಜನೆಯನ್ನು ಪ್ರಚಾರ ಮಾಡಲು ನರೇಂದ್ರ ಮೋದಿಯವರು ದೇಶದ 27 ಪ್ರಭಾವಶಾಲಿ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.[ಹೆಮ್ಮೆ ತಂದ ಮೈಸೂರಿಗೆ ಕ್ಲೀನ್‌ಸಿಟಿ ಪ್ರಶಸ್ತಿ ಪ್ರದಾನ]

ರಾಯಭಾರಿಗಳ ಪಟ್ಟಿಯಲ್ಲಿಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್, ಬಾಬಾ ರಾಮ್ ದೇವ್, ಅನಿಲ್ ಅಂಬಾನಿ ಮುಂತಾದವರಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅಕ್ಟೋಬರ್ 02, 2014ರಂದು ಚಾಲನೆ ನೀಡಿದ್ದರು. ಮಹಾತ್ಮ ಗಾಂಧೀಜಿ ಅವರ ಬಹುದೊಡ್ಡ ಕನಸಾದ ಗ್ರಾಮೀಣ ನೈರ್ಮಲಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಯಲು ಶೌಚ ಮುಕ್ತ ಗ್ರಾಮ, ನಗರಗಳನ
್ನು ಸಾಧಿಸಲು ಅಕ್ಟೋಬರ್ 02, 2019ರ ಗಡುವು ಹಾಕಿಕೊಳ್ಳಲಾಗಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympics medalists PV Sindhu and Sakshi Malik, besides olympian Dipa Karmakar are likely to be the new faces of Swachh Bharat Mission for creating awareness about Prime Minister Narendra Modi's initiative.
Please Wait while comments are loading...