ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಾಜಿ ಕ್ರಿಕೆಟರ್ ಗೆ ಮತ್ತೆ ಕಾಡುತ್ತಿರುವ ಕ್ಯಾನ್ಸರ್

By Mahesh

ವೆಲ್ಲಿಂಗ್ಟನ್, ಅ.15: ನ್ಯೂಜಿಲೆಂಡ್ ನ ಮಾಜಿ ನಾಯಕ ಮಾರ್ಟಿನ್ ಕ್ರೋವ್ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್ ಪೀಡೆ ಕಾಣಿಸಿಕೊಂಡಿದೆಯಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಸ್ಯ ಭರಿತವಾಗಿ ಸ್ವತ: ಕ್ರೋವ್ ಅವರೇ ಟ್ವೀಟ್ ಮಾಡಿದ್ದಾರೆ.

ಕ್ರೋವ್ ಅವರಿಗೆ ಎರಡು ವರ್ಷಗಳ ಮುಂಚೆ ಲಿಂಫೋಮಾ(ಒಂದು ಬಗೆಯ ಕ್ಯಾನ್ಸರ್) ಇರುವುದು ದೃಢಪಟ್ಟಿತ್ತು. ಅದರೆ, ಅರ್ಬುದ ರೋಗದ ವಿರುದ್ಧ ಬ್ಯಾಟ್ ಬೀಸಿದ ಕ್ರಿಕೆಟರ್ ಕ್ಯಾನ್ಸರ್ ನಿಂದ ಮುಕ್ತರಾಗಿದ್ದರು. ಅದರೆ, ಈಗ ಮತ್ತೊಮ್ಮೆ ಸಮಸ್ಯೆ ಎದುರಿಸುತ್ತಿದ್ದಾರೆ. ಕ್ರೋವ್ ಅವರ ಕುಟುಂಬ ಶಾಕ್ ಗೊಳಗಾಗಿದೆ. ನ್ಯೂಜಿಲೆಂಡ್ ನ Lymphoma Network ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರ ಮ್ಯಾನೇಜರ್ ಲೂಯಿಸೆ ಹೆಂಡರ್ಸನ್ ಹೇಳಿದ್ದಾರೆ..

Lymphatic ವ್ಯವಸ್ಥೆಗೆ ಮಾರಕವಾಗುವ lymphoma ಕೋಶಗಳು lymphocytes ಗಳನ್ನು ಬದಲಿಸಿ ಕ್ಯಾನ್ಸರ್ ಗೆಡ್ಡೆ ಬೆಳೆಯುವಂತೆ ಮಾಡುತ್ತದೆ. ಇದರಿಂದ ದೇಹದ ನಿರೋಧಕ ಶಕ್ತಿ ಕುಗ್ಗಿ, ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳಬೇಕಾಗುತ್ತದೆ. 52 ವರ್ಷದ ಮಾಜಿ ಕ್ರಿಕೆಟರ್ ಅವರು ಸೆ.22ರ ಹುಟ್ಟುಹಬ್ಬಕ್ಕೂ ಮುನ್ನ ಈ ಶಾಕಿಂಗ್ ಸುದ್ದಿ ಹೊರಹಾಕಿದ್ದಾರೆ. ಲಿಂಫೋಮಾ ಸೋಲಿಸಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.

ಮಾರ್ಟಿನ್ ಕ್ರೋವ್ ಅವರು 1982-1995ರ ಅವಧಿಯಲ್ಲಿ ಕಿವೀಸ್ ಪರ ಬಲಗೈ ಬ್ಯಾಟ್ಸ್ ಮನ್ ಆಗಿ 77 ಟೆಸ್ಟ್ ಹಾಗೂ 143 ಏಕದಿನ ಪಂದ್ಯಗಳನ್ನಾಡಿದ್ದಾರೆ. 1992ರಲ್ಲಿ ನ್ಯೂಜಿಲೆಂಡ್ ಏಕದಿನ ತಂಡ ನಾಯಕರಾಗಿ ವಿಶ್ವಕಪ್ ಸೆಮಿಫೈನಲ್ ತನಕ ತಂಡವನ್ನು ಮುನ್ನಡೆಸಿದ್ದರು. ಮಾರ್ಟಿನ್ ಕ್ರೋವ್ ಅವರ ಆರೋಗ್ಯ ಸುಧಾರಣೆ ಶುಭ ಹಾರೈಸಿ ಅಭಿಮಾನಿಗಳು ಕ್ರಿಕೆಟ್ ಸಂಸ್ಥೆಗಳು ಟ್ವೀಟ್ ಸಂದೇಶ ಕಳಿಸಿವೆ

ಕ್ರೋವ್ ಗೆ ಮತ್ತೆ ಕಾಣಿಸಿಕೊಂಡ ಲಿಂಫೋಮಾ

ಕ್ರೋವ್ ಗೆ ಮತ್ತೆ ಕಾಣಿಸಿಕೊಂಡ ಲಿಂಫೋಮಾ

52 ವರ್ಷದ ಮಾಜಿ ಕ್ರಿಕೆಟರ್ ಅವರು ಸೆ.22ರ ಹುಟ್ಟುಹಬ್ಬಕ್ಕೂ ಮುನ್ನ ಈ ಶಾಕಿಂಗ್ ಸುದ್ದಿ ಹೊರಹಾಕಿದ್ದಾರೆ. ಲಿಂಫೋಮಾ ಸೋಲಿಸಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.

ಕ್ರೋವ್ ಅವರಿಗೆ ಹಾರೈಕೆ

ಕ್ರೋವ್ ಅವರಿಗೆ ಗುಡ್ ಲಕ್ ಆರೋಗ್ಯ ಸುಧಾರಿಸಲಿ ಎಂದ ಶ್ರೀಲಂಕಾದ ಮಾಜಿ ಕ್ರಿಕೆಟರ್ ರಸೆಲ್ ಅರ್ನಾಲ್ಡ್

ಲಿಂಫೋಮಾವನ್ನು ನನ್ನ ಸ್ನೇಹಿತ ಎಂದ ಕ್ರೋವ್

ಲಿಂಫೋಮಾವನ್ನು ನನ್ನ ಸ್ನೇಹಿತ ಎಂದ ಕ್ರೋವ್. ಕ್ಯಾನ್ಸರ್ ಮತ್ತೊಮ್ಮೆ ಕಾಣಿಸಿಕೊಂಡಿದ್ದರ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಆಸೀಸ್ ಕ್ರಿಕೆಟ್ ಮಂಡಳಿಯಿಂದ ಸಂದೇಶ

ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ಸಂದೇಶ

ಲಿಂಫೋಮಾ ಸೋಲಿಸಲು ಸಾಧ್ಯವಿಲ್ಲ

ಲಿಂಫೋಮಾ ಸೋಲಿಸಲು ಸಾಧ್ಯವಿಲ್ಲ. ಟ್ರೀಟ್ ಮೆಂಟ್ ತೆಗೆದುಕೊಳ್ಳಬೇಕಷ್ಟೇ

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯಿಂದ ಸಂದೇಶ

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸಂದೇಶ ಹೊರಡಿಸಿದ್ದು ಹೀಗೆ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X