ರಾಂಚಿಯಲ್ಲಿ ವಿದ್ಯುತ್‌ ಆಘಾತಕ್ಕೆ ಬಲಿಯಾದ ಕುಸ್ತಿಪಟು

Posted By:
Subscribe to Oneindia Kannada

ರಾಂಚಿ, ಆಗಸ್ಟ್ 09 : ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ವಿಶಾಲ್ ಕುಮಾರ್ ವರ್ಮಾ ಅವರು ರಾಂಚಿಯ ಜೈಪಾಲ್ ಸಿಂಗ್ ಸ್ಟೇಡಿಯಂನಲ್ಲಿ ದುರಂತ ಸಾವನ್ನಪ್ಪಿದ್ದಾರೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಗೆ ವಿಶಾಲ್ ಅವರು ತುತ್ತಾದರು.

ಜಾರ್ಖಂಡ್ ರಾಜ್ಯ ಕುಸ್ತಿ ಅಸೋಸಿಯೇಷನ್ ಕಚೇರಿಯಲ್ಲಿರುವ ಕ್ರೀಡಾಂಗಣ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ ನಿಂದಾಗಿ ಅವರು ಸಾವನ್ನಪ್ಪಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

National Level Wrestler Vishal Kumar Verma Dies After Being Electrocuted

ವಿದ್ಯುತ್‌ ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದ ವಿಶಾಲ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಪ್ರಯತ್ನ ವಿಫಲವಾಗಿದೆ.

ವಿಶಾಲ್ ಕುಮಾರ್ ವರ್ಮಾ ಅವರ ಕುಟುಂಬಕ್ಕೆ ಜಾರ್ಖಂಡ್ ರಾಜ್ಯ ಕುಸ್ತಿ ಸಂಸ್ಥೆಯಿಂದ ಒಂದು ಲಕ್ಷ ಮಧ್ಯಂತರ ಪರಿಹಾರವನ್ನು ಘೋಷಿಸಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ವಿಶಾಲ್ ಅವರು 2005 ರಲ್ಲಿ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ನಾಲ್ವರು ಸಹೋದರಿಯರನ್ನು ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tragic incident Vishal Kumar Verma, a wrestler of national repute, died after being electrocuted in Jharkhand State Wrestling Association office, situated at the Jaipal Singh Stadium, in Ranchi on Tuesday afternoon.
Please Wait while comments are loading...