ನರಸಿಂಗ್ ತಿನ್ನುವ ಆಹಾರದಲ್ಲಿ ಔಷಧ ಸೇರಿಸಿದವ ಸಿಕ್ಕಿ ಬಿದ್ದ

Posted By:
Subscribe to Oneindia Kannada

ನವದೆಹಲಿ, ಜುಲೈ 27: ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿದ್ದ ಕುಸ್ತಿಪಟು ನರಸಿಂಗ್ ಯಾದವ್ ಅವರು ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿರುವ ವಿಷಯ ಗೊತ್ತಿರಬಹುದು. ಆದರೆ, ನರಸಿಂಗ್ ಯಾದವ್ ಅವರ ಆಹಾರದಲ್ಲಿ ಉದ್ದೀಪನ ಔಷಧಿಯನ್ನು ಸೇರಿಸಿರುವ ವಿಷಯ ಪತ್ತೆಯಾಗಿದೆ.

ಎನ್ ಡಿಟಿವಿಯ ವರದಿಯಂತೆ ನರಸಿಂಗ್ ಅವರು ಸೇವಿಸುವ ಆಹಾರದಲ್ಲಿ ಉದ್ದೀಪನ ಔಷಧವನ್ನು ವ್ಯಕ್ತಿಯೊಬ್ಬ ಸೇರಿಸಿರುವುದು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬಂಧಿಸಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯೂಎಫ್​ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

Narsingh Yadav's food was spiked, culprit identified: Reports

ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್​ಎಐ) ಪರೀಕ್ಷಾ ಕೇಂದ್ರದಲ್ಲಿ ನರಸಿಂಗ್ ಕೊಠಡಿ ಪ್ರವೇಶಿಸಿ ಉದ್ದೀಪನಾ ಮದ್ದನ್ನು ಆಹಾರಕ್ಕೆ ಮಿಶ್ರಗೊಳಿಸಿದ್ದಾರೆ. ನರಸಿಂಗ್ ಅವರು ಸಂಚಿನ ಬಗ್ಗೆ ಸ್ವತಃ ಪಾಣಿಪತ್ ಸಮೀಪದ ರಾಜ್ ಪೊಲೀಸ್ ಠಾಣೆಗೆ ಸ್ವತಃ ದೂರು ನೀಡಿದ್ದರೂ ಈ ವಿಚಾರವಾಗಿ ಪೊಲೀಸರು ಇನ್ನೂ ಎಫ್​ಐಆರ್ ದಾಖಲಿಸಿಲ್ಲ.

ಆಗಸ್ಟ್ 5ರಂದು ಆರಂಭವಾಗುವ ರಿಯೋ ಒಲಿಂಪಿಕ್ಸ್ ಗೆ ಸುಶೀಲ್ ಕುಮಾರ್ ಗೆ ಬದಲಾಗಿ ಆಯ್ಕೆಯಾಗಿದ್ದ 74 ಕೆಜಿ ವಿಭಾಗದ ಕುಸ್ತಿಪಟು ನರಸಿಂಗ್ ಯಾದವ್ ಅವರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ನರಸಿಂಗ್ ಯಾದವ್ ಬದಲಿಗೆ ಪ್ರವೀಣ್ ರಾಣಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's build-up to the Rio Olympic Games was rocked when medal hopeful Narsingh Yadav was found to have tested positive for a banned substance.
Please Wait while comments are loading...