ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ನರಸಿಂಗ್ ಅರ್ಹ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 01: ರಿಯೋ ಒಲಿಂಪಿಕ್ಸ್ 2016ರಲ್ಲಿ ಸ್ಪರ್ಧಿಸಲು ಕುಸ್ತಿಪಟು ನರಸಿಂಗ್ ಯಾದವ್ ಅವರಿಗೆ ಸೋಮವಾರ ಅನುಮತಿ ಸಿಕ್ಕಿದೆ. ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದ ನರಸಿಂಗ್ ಅವರಿಗೆ ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ(ನಾಡಾ) ಕ್ಲೀನ್ ಚಿಟ್ ನೀಡಿದೆ.

ನರಸಿಂಗ್ ಯಾದವ್ ಅವರ ಆಹಾರದಲ್ಲಿ ಉದ್ದೀಪನ ಔಷಧಿಯನ್ನು ದುಷ್ಕರ್ಮಿಯೊಬ್ಬನು ಸೇರಿಸಿರುವ ವಿಷಯ ಬಹಿರಂಗವಾದ ಮೇಲೆ ನರಸಿಂಗ್ ಅವರ ಪ್ರಕರಣದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗಿತ್ತು. [ನರಸಿಂಗ್ ತಿನ್ನುವ ಆಹಾರದಲ್ಲಿ ಔಷಧ ಸೇರಿಸಿದವ ಸಿಕ್ಕಿ ಬಿದ್ದ]

Narsingh Yadav gets clean chit from NADA, set to go to Olympics

26ವರ್ಷ ವಯಸ್ಸಿನ ಮಹಾರಾಷ್ಟ್ರದ ಕುಸ್ತಿಪಟು ಈಗ ರಿಯೋ ಒಲಿಂಪಿಕ್ಸ್ 2016ರಲ್ಲಿ 74 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿಯಬಹುದಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬಂಧಿಸಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯೂಎಫ್​ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.[ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್​ಎಐ) ಪರೀಕ್ಷಾ ಕೇಂದ್ರದಲ್ಲಿ ನರಸಿಂಗ್ ಕೊಠಡಿ ಪ್ರವೇಶಿಸಿ ಉದ್ದೀಪನಾ ಮದ್ದನ್ನು ಆಹಾರಕ್ಕೆ ಮಿಶ್ರಗೊಳಿಸಿದ ಬಗ್ಗೆ ಪಾಣಿಪತ್ ಸಮೀಪದ ರಾಜ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. [ಒಲಿಂಪಿಕ್ಸ್ 2016: ಕ್ರೀಡಾಂಗಣಗಳ ಮುನ್ನೋಟ]

ನಾಡಾದ ಕಾನೂನು ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸಿ ಸೋಮವಾರದಂದು ತೀರ್ಮಾನ ನೀಡಿದೆ. ನರಸಿಂಗ್ ಯಾದವ್ ಬದಲಿಗೆ ಪ್ರವೀಣ್ ರಾಣಾ ಅವರನ್ನು ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿತ್ತು,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a big relief to wrestler Narsingh Yadav, the National Anti-Doping Agency on Monday (Aug 1) gave clean chit to the Rio-bound wrestler
Please Wait while comments are loading...